Advertisement

ಖೋಟಾ ನೋಟು ಕೇಸ್‌: ಮೂವರಿಗೆ ಜೈಲು ಶಿಕ್ಷೆ

09:08 AM Dec 04, 2020 | Suhan S |

ಬೆಂಗಳೂರು: ಖೋಟಾ ನೋಟು ದಂಧೆ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದಮೂವರು ಆರೋಪಿಗಳಿಗೆ ಆರು ವರ್ಷ ಜೈಲು ಹಾಗೂ ತಲಾ 10 ಸಾವಿರ ರೂ.ದಂಡ ವಿಧಿಸಿ ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

Advertisement

ಪಶ್ಚಿಮ ಬಂಗಾಳದ ಮೊಹಮದ್‌ ಸಾಜಿದ್‌ ಅಲಿ, ಅಬ್ದುಲ್‌ ಖಾದಿರ್‌, ದೇವನಹಳ್ಳಿ ವಿಜಯಪುರದ ಎಂ.ಎನ್‌ ರಾಜು ಶಿಕ್ಷೆಗೆ ಗುರಿಯಾದವರು. 2018ರಅಗಸ್ಟ್‌ನಲ್ಲಿಮಾದನಾಯಕಹಳ್ಳಿಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಪತ್ತೆಯಾದ ಖೋಟಾನೋಟು ದಂಧೆಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದ ಎನ್‌ಐಎ ಅಧಿಕಾರಿಗಳು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್‌ ಆರ್‌ಹುಲಗಿ ಅವರು, ಆರೋಪಿಗಳ ವಿರುದ್ಧಪ್ರಾಸಿಕ್ಯೂಶನ್‌ ಸಲ್ಲಿಸಿದ್ದ ಸಾಕ್ಷ್ಯಾಧಾರಗಳುಹಾಗೂ ಪ್ರಾಸಿಕ್ಯೂಶನ್‌ ಪರ ವಕೀಲರ ವಾದವನ್ನು ಪುರಸ್ಕರಿಸಿದ್ದಾರೆ. ಜತೆಗೆ,ಆರೋಪಿಗಳು ದೇಶದ ಆರ್ಥಿಕತೆಗೆ ಧಕ್ಕೆತರುವಂತಹ ಗಂಭೀರ ಕೃತ್ಯ ಎಸಗಿರುವಬಗ್ಗೆ ಸಾಕ್ಷ್ಯಾಧಾರಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟು ಆರೋಪಿಗಳಾದ ಮೊಹಮದ್‌ ಸಾಜಿದ್‌ ಅಲಿ, ಅಬ್ದುಲ್‌ ಖಾದಿರ್‌, ಎಂ.ಎನ್‌ ರಾಜುಗೆ ತಲಾ ಆರುವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ : ಹೈದರಾಬಾದ್ ನಗರ ಪಾಲಿಕೆ ಚುನಾವಣೆ: ಇಂದು ಮತ ಎಣಿಕೆ, ಬಿಜೆಪಿ- ಟಿಆರ್ ಎಸ್ ಪ್ರತಿಷ್ಠೆ

ಪ್ರಕರಣದಲ್ಲಿ ಎನ್‌ಐಎ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪಿ. ಪ್ರಸನ್ನಕುಮಾರ್‌ ವಾದಿಸಿದ್ದರು. “ಪ್ರಕರಣದಲ್ಲಿನ ಮೊದಲ ಆರೋಪಿ ಸಾಜಿದ್‌ ಅಲಿ, ಎರಡನೇ ಆರೋಪಿ ಎಂ.ಎನ್‌ ರಾಜು, ಆರನೇ ಆರೋಪಿಅಬ್ದುಲ್‌ ಖಾದಿರ್‌ಗೆ ಆರು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ಪ್ರಕರಣದ ಇತರ ಆರೋಪಿಗಳಾದ ವನಿತಾ ಜೆ. ಹಾಗೂ ಇತರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣಾಪ್ರಕ್ರಿಯೆನಡೆಯುತ್ತಿದೆ’ಎಂದು ಸರ್ಕಾರಿ ವಿಶೇಷ ಅಭಿಯೋಜಕರಾದ ಪಿ.ಪ್ರಸನ್ನಕುಮಾರ್‌ ತಿಳಿಸಿದರು.

Advertisement

ಬಾಂಗ್ಲಾದಿಂದ ಬರುತ್ತಿತ್ತು ಖೋಟಾನೋಟು! :

ರಾಜ್ಯದಲ್ಲಿ ಖೋಟಾನೋಟು ದಂಧೆ ಚಲಾವಣೆ ಸುಳಿವು ಆಧರಿಸಿ ತನಿಖೆ ನಡೆಸುತ್ತಿದ್ದ ಎನ್‌ಐಎ ಅಧಿಕಾರಿಗಳು 2018ರ ಆಗಸ್ಟ್‌ 8ರಂದು ಅಲೂರಿನ ಫ್ಲ್ಯಾಟ್‌ವೊಂದರ ಮೇಲೆ ದಾಳಿ ನಡೆಸಿದ್ದರು. ಜತೆಗೆ, ಸ್ಥಳದಲ್ಲಿದ್ದ ಮೊಹಮದ್‌ ಸಾಜಿದ್‌ ಅಲಿ, ಎಂ.ಎನ್‌ ರಾಜು, ಗಂಗಾಧರ್ ‌ಕೋಲ್ಕರ್‌ ಎಂಬಾತನನ್ನು ಬಂಧಿಸಿ 2.50 ಲಕ್ಷ ರೂ. ಖೋಟಾನೋಟುಗಳನ್ನು ಜಪ್ತಿ ಮಾಡಿದ್ದರು. ಮುಂದುವರಿದ ತನಿಖೆಯಲ್ಲಿ ಶ್ರೀರಾಮಪುರದ ವನಿತಾ, ಅಬ್ದುಲ್‌ ಖಾದಿರ್‌ನನ್ನು ಬಂಧಿಸಿದ್ದರು.ಖೋಟಾನೋಟು ಚಲಾವಣೆ ದಂಧೆಯಲ್ಲಿ ಚಾಳಿಬಿದ್ದ ಆರೋಪಿಯಾಗಿರುವ ಎಂ.ಎನ್‌ ರಾಜು ಪಶ್ಚಿಮ ಬಂಗಾಳದ ಮಾಲ್ಡಾ ಮೂಲದ ಸಾಜಿದ್‌ ಸಂಪರ್ಕ ಬೆಳೆಸಿಕೊಂಡಿದ್ದ. ಸಾಜಿದ್‌ ಅಲಿ ಹಾಗೂ ಆತನ ಸಹಚರರು ಬಾಂಗ್ಲಾದಿಂದ ಖೋಟಾನೋಟುಗಳನ್ನು ತರಿಸಿ ಅವುಗಳನ್ನು ಬೆಂಗಳೂರಿಗೆ ತಲುಪಿಸುತ್ತಿದ್ದರು. ಅದೇ ನೋಟುಗಳನ್ನು ಪಡೆದ ರಾಜು ತನ್ನ ಸಹಚರರ ಮೂಲಕ ಬೆಂಗಳೂರು ಸೇರಿದಂತೆ ರಾಜ್ಯದಹಲವು ಭಾಗಗಳಲ್ಲಿ ಚಲಾವಣೆ ಮಾಡುತ್ತಿದ್ದ. ಹೀಗೆ,2018ರ ಆಗಸ್ಟ್‌ ಎಂಟರಂದು ಪಶ್ಚಿಮ ಬಂಗಾಳದಿಂದ ಖೋಟಾ ನೋಟು ತಂದಿದ್ದ ಸಾಜಿದ್‌ ಅಲಿ ಎಂ.ಎನ್‌ ರಾಜುವಿನ ಫ್ಲ್ಯಾಟ್‌ನಲ್ಲಿ ತಂಗಿದ್ದ ಮಾಹಿತಿ ಆಧರಿಸಿ ಎನ್‌ಐಎ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next