Advertisement

20 ಸಾವಿರ ಕೋಟಿ ರೂ. ಷೇರು ಮಾರಾಟದಿಂದ ಬಂದಿದ್ದು: Adani

12:54 AM Apr 11, 2023 | Team Udayavani |

ಹೊಸದಿಲ್ಲಿ: ಅದಾನಿ ಕಂಪೆನಿಗೆ ಶೆಲ್‌ ಕಂಪೆನಿಗಳಿಂದ 20 ಸಾವಿರ ಕೋಟಿ ರೂ.ಗಳು ಬಂದಿವೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆರೋಪಕ್ಕೆ ಸೋಮವಾರ ಕಂಪೆನಿ ಪ್ರತ್ಯುತ್ತರ ನೀಡಿದೆ. 2019ರಿಂದ ತಮ್ಮ ಸಮೂಹದ ಸಂಸ್ಥೆಗಳ 2.87 ಶತಕೋಟಿ ಡಾಲರ್‌ ಷೇರುಗಳ ಮಾರಾಟ ಮತ್ತು ಅದರಿಂದ ಬಂದ ಮೊತ್ತವನ್ನು ಹೇಗೆ ಉದ್ಯಮಕ್ಕೆ ಬಳಸಿಕೊಳ್ಳಲಾಯಿತು ಎಂಬ ಬಗ್ಗೆ ಸ್ಪಷ್ಟನೆ ನೀಡಿದೆ.

Advertisement

ಅಬುಧಾಬಿ ಮೂಲಕ ಗ್ಲೋಬಲ್‌ ಸ್ಟ್ರಾಟಜಿಕ್‌ ಇನ್‌ವೆಸ್ಟ್‌ಮೆಂಟ್‌ ಕಂಪೆನಿ, ಇಂಟರ್‌ನ್ಯಾಶನಲ್‌ ಹೋಲ್ಡಿಂಗ್‌ ಕಂಪೆನಿ ಪಿಜೆಎಸ್‌ಸಿ ನಮ್ಮ ಸಮೂ ಹದ ಸಂಸ್ಥೆಗಳಾದ ಅದಾನಿ ಎಂಟರ್‌ಪ್ರೈಸಸ್‌ ಮತ್ತು ಅದಾನಿ ಗ್ರೀನ್‌ ಎನರ್ಜಿಯಲ್ಲಿ 2.593 ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಿತ್ತು.

ಅದಾನಿ ಟೋಟಲ್‌ ಗ್ಯಾಸ್‌ ಮತ್ತು ಎಜಿಇಎಲ್‌ನಲ್ಲಿದ್ದ ಷೇರುಗಳನ್ನು ಮಾರಾಟ ಮಾಡುವ ಮೂಲಕ ಪ್ರವ ರ್ತಕರು 2.783 ಶತಕೋಟಿ ಡಾಲರ್‌ಗಳನ್ನು ಸಂಗ್ರಹಿಸಿತು. ಪ್ರವರ್ತಕ ಸಂಸ್ಥೆಗಳು ಹೊಸ ಉದ್ದಿ ಮೆಗಳ ಬೆಳವಣಿಗೆಗೆ ಅನುಕೂಲ ಕಲ್ಪಿಸ ಲೆಂದು ಈ ಮೊತ್ತವನ್ನು ಮರು ಹೂಡಿಕೆ ಮಾಡಿದವು ಎಂದು ಕಂಪೆನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next