Advertisement

ಪಂಚರಾಜ್ಯ ಚುನಾವಣ ಫ‌ಲಿತಾಂಶಕ್ಕೆ ಕ್ಷಣಗಣನೆ: ಯಾರಿಗೆ ಸಿಹಿ?

11:55 PM May 01, 2021 | Team Udayavani |

ಹೊಸದಿಲ್ಲಿ: ಪಂಚರಾಜ್ಯ ಮತ ಸಮರದಲ್ಲಿ ಯಾರಿಗೆ ಸಿಗಲಿದೆ ಸಿಹಿ ಪಂಚ ಕಜ್ಜಾಯ

Advertisement

> ಪಶ್ಚಿಮ ಬಂಗಾಲ

ದೀದಿ ಗೆದ್ದರೆ ತಾನೇ ಪಶ್ಚಿಮ ಬಂಗಾಲದ ಅಧಿನಾಯಕಿ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಂತಾಗುತ್ತದೆ. ಇಲ್ಲಿ ಬಿಜೆಪಿ ಪ್ರಧಾನಿ ಮೋದಿ ಹೆಸರಲ್ಲೇ ಚುನಾವಣೆಗೆ ಇಳಿದಿತ್ತು. ಹೀಗಾಗಿ ಸೋಲು ಮತ್ತು ಗೆಲುವು ಎರಡರ ಫ‌ಲವೂ ಮೋದಿಗೇ.

>   ತಮಿಳುನಾಡು

ಸದ್ಯ ಸಿಎಂ ಮತ್ತು ಡಿಸಿಎಂ ಹುದ್ದೆಗಳಲ್ಲಿರುವ ಪಳನಿಸ್ವಾಮಿ, ಪನ್ನೀರ್‌ಸೆಲ್ವಂ ಪಾಲಿಗೆ ಈ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂಥದ್ದು. ಸೋತರೆ ಶಶಿಕಲಾ ಪಕ್ಷದ ಹಿಡಿತ ಸಾಧಿಸುವುದು ಖಂಡಿತ.

Advertisement

ಮತಗಟ್ಟೆ ಸಮೀಕ್ಷೆಗಳು ಹೇಳಿರುವಂತೆ ಡಿಎಂಕೆಯೇ ಗೆಲ್ಲಲಿದೆ. ಇದು ನಿಜವಾದರೆ ಕರುಣಾನಿಧಿ ಉತ್ತರಾಧಿಕಾರಿ ತಾನೇ ಎಂಬುದನ್ನು ತೋರಿಸಿದ ಕೀರ್ತಿಗೆ ಸ್ಟಾಲಿನ್‌ ಪಾತ್ರರಾಗಲಿದ್ದಾರೆ.

>  ಕೇರಳ

ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಸಿಎಂ ಪಿಣರಾಯಿ ವಿಜಯನ್‌ ಗೆಲುವು ನಿಶ್ಚಿತ. ಗೆದ್ದರೆ ಕೇರಳದಲ್ಲಿ ಎಡರಂಗಕ್ಕೆ ಅಧಿಕಾರ ಉಳಿಸಿಕೊಂಡ ಕೀರ್ತಿ ದಕ್ಕಲಿದೆ. ಸೋತರೆ ಪ್ರಾಮುಖ್ಯ ಕಳೆದುಕೊಳ್ಳಬಹುದು. ಕೇರಳ

ದಲ್ಲಿ ಕಾಂಗ್ರೆಸ್‌ ಪರ ರಾಹುಲ್‌ ಗಾಂಧಿ ವಿಶೇಷವಾಗಿ ಪ್ರಚಾರ ನಡೆಸಿದ್ದಾರೆ. ಗೆದ್ದರೆ ರಾಹುಲ್‌ ನಾಯಕತ್ವ ಬಲಗೊಳ್ಳಲಿದೆ.

>  ಅಸ್ಸಾಂ

ಅಸ್ಸಾಂನಲ್ಲಿ ಬಿಜೆಪಿ -ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಇದೆ. ಮತಗಟ್ಟೆ ಸಮೀಕ್ಷೆ ಗಳು ಬಿಜೆಪಿ ಗೆಲ್ಲಲಿದೆ ಎಂದಿವೆ. ಬಿಜೆಪಿ ಗೆದ್ದರೆ ಸಿಎಂ ಸಬಾìನಂದ ಸೋನಾವಾಲ್‌ ಮತ್ತು ಹಣಕಾಸು ಸಚಿವ ಹಿಮಾಂತ್‌ ಬಿಸ್ವಾಸ್‌ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಕಾಂಗ್ರೆಸ್‌ ಗೆದ್ದರೆ ಗೌರವ್‌ ಗೊಗೊಯ್‌ ಸಿಎಂ ಆಗಬಹುದು.

>  ಪುದುಚೇರಿ

ಇಲ್ಲಿ ಬಿಜೆಪಿ ಮಿತ್ರಪಕ್ಷಗಳು ಅಧಿಕಾರಕ್ಕೆ ಬರಲಿವೆ ಎಂಬುದು ಮತಗಟ್ಟೆ ಸಮೀಕ್ಷೆಗಳ ಹೇಳಿಕೆ. ಇದೇ ಮೊದಲ ಬಾರಿಗೆ ಇಲ್ಲಿ ಬಿಜೆಪಿಯು ಕಾಂಗ್ರೆಸ್‌ಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದೆ. ಕಾಂಗ್ರೆಸ್‌ ಕೂಡ ನಾರಾಯಣಸ್ವಾಮಿ ಸಾಧನೆಯೊಂದಿಗೆ ಕಣಕ್ಕಿಳಿದಿದ್ದು, ಮತ್ತೆ ಅಧಿಕಾರಕ್ಕೇರುವ ಆಸೆ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next