Advertisement
ಸೋಮವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಹಸುರು ಜಿಲ್ಲೆಯಾಗಿ ಸೇರಿಸಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದರು.
– ಅಂಗಡಿ ಮುಂಗಟ್ಟುಗಳು ಇದುವರೆಗೆ ಇರುವಂತೆ ಬೆಳಗ್ಗೆ 7ರಿಂದ ಬೆಳಗ್ಗೆ 11 ಗಂಟೆವರೆಗೆ ಮಾತ್ರ ತೆರೆದುಕೊಳ್ಳಲು ಅವಕಾಶ.
– ಹೊಟೇಲ್‌ಗಳು ತೆರೆದುಕೊಳ್ಳ ಬಹುದಾದರೂ ಪಾರ್ಸೆಲ್ ಕೊಂಡೊಯ್ಯಲು ಮಾತ್ರ ಅವಕಾಶ.
– ಲಾಡ್ಜ್, ದೇವಸ್ಥಾನ, ಮಾಲ್, ಸಿನೆಮಾಗೃಹ, ಶಾಪಿಂಗ್ ಕಾಂಪ್ಲೆಕ್ಸ್, ಹವಾನಿಯಂತ್ರಿತ ಮಳಿಗೆಗಳು, ಚಿನ್ನಾಭರಣಗಳ ಅಂಗಡಿಗಳು, ಮಲ್ಟಿ ಬ್ರ್ಯಾಂಡೆಡ್ ಶಾಪ್, ಸೆಲೂನ್ ಅಂಗಡಿಗಳು ತೆರೆಯುವಂತಿಲ್ಲ.
– ಯಾವುದೇ ಸಮಾರಂಭಗಳನ್ನು ನಡೆಸುವಂತಿಲ್ಲ.
– ಯಾಂತ್ರೀಕೃತ ಮೀನುಗಾರಿಕೆ ಇಲ್ಲ.
Related Articles
– ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಷ್ಮೆಂಟ್ ಆ್ಯಕ್ಟ್ ಪ್ರಕಾರ ಯಾರ್ಯಾರು ಪರವಾನಿಗೆ ಪಡೆದಿರುತ್ತಾರೋ ಅವರಿಗೆ ಅಂಗಡಿ ತೆರೆಯಲು ಅವಕಾಶಗಳಿವೆ. ಆದರೆ ಕೆಲವೊಂದಕ್ಕೆ ನಿರ್ಬಂಧವಿದೆ.
– ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ.
– ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶವಿದ್ದರೂ ಕಾರ್ಮಿಕರ ಸಂಚಾರ ನಿರ್ಬಂಧ.
– ಕೈಗಾರಿಕೆಗಳು ಕಾರ್ಯಾಚರಿಸಲು ಅವಕಾಶವಿದೆ.
– ಮೊಬೈಲ್ ರೀಚಾರ್ಜ್ ಅಂಗಡಿ ತೆರೆಯಬಹುದು ಮತ್ತು
ಪರವಾನಿಗೆ ಇರುವ ಮೊಬೈಲ್ ಶಾಪ್‌ಗ್ಳೂ ತೆರೆಯಬಹುದು.
– ಮರಳುಗಾರಿಕೆ, ಕ್ರಷರ್ ಉತ್ಪಾದನೆಗೆ ಅವಕಾಶವಿದೆ.
Advertisement
ನಿರ್ಮಾಣ ಚಟುವಟಿಕೆ ಆರಂಭಉಡುಪಿ ಜಿಲ್ಲೆ ಹಸುರು ವಲಯಕ್ಕೆ ಸಮೀಪಿಸುತ್ತಿರು ವುದರಿಂದ ಮುಂದಿನ ಯೋಜನೆ ಮತ್ತು ಕೆಲವೊಂದು ನಿರ್ಬಂಧಿತ ಚಟುವಟಿಕೆಗಳ ಸಡಿಲಿಕೆ ಕುರಿತು ಶಾಸಕ ಕೆ. ರಘುಪತಿ ಭಟ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಜಿ.
ಜಗದೀಶ್ ಅವರಲ್ಲಿ ಚರ್ಚಿಸಿದರು. ಪ್ರಮುಖವಾಗಿ ಕಟ್ಟಡ ಕಾರ್ಮಿಕರು ಹಾಗೂ ದಿನಗೂಲಿಗಳ ದೈನಂದಿನ ಸಮಸ್ಯೆಯ ಬಗ್ಗೆ ಹಾಗೂ ಅವರ ಆರ್ಥಿಕ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಕಟ್ಟಡ ನಿರ್ಮಾಣವನ್ನು ರಾಜ್ಯ ಮಾರ್ಗಸೂಚಿಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಾಮಗಾರಿ ಗಳನ್ನು ನಿರ್ವಹಿಸುವಂತೆ ರಾಜ್ಯ ಸರಕಾರದ ಆದೇಶ ವಿದ್ದು ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಬೆಳಗ್ಗೆ 11ರ ವರೆಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳ ಅಂಗಡಿಯಾದ ಹಾರ್ಡ್‌ವೇರ್ ಹಾಗೂ ಇತರ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪೂರಕ ಸಾಮಗ್ರಿಗಳ ಅಂಗಡಿಯನ್ನು ತೆರೆಯುವ ಬಗ್ಗೆ ತೀರ್ಮಾನಿಸಲಾಯಿತು. ಉಡುಪಿ ಜಿಲ್ಲೆ : 15 ಮಾದರಿಗಳ ಸಂಗ್ರಹ
ಉಡುಪಿ: ಕೋವಿಡ್ 19 ತಪಾಸಣೆ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸೋಮವಾರ 15 ಜನರ ಮಾದರಿಗಳನ್ನು ಸಂಗ್ರಹಿಸ ಲಾಗಿದೆ. ಅವರಲ್ಲಿ ತೀವ್ರ ಉಸಿರಾಟದ ಐವರು, ಕೋವಿಡ್ 19 ಶಂಕಿತರು ಇಬ್ಬರು, ಫೂÉ é ಜ್ವರ ಲಕ್ಷಣದ 8 ಮಂದಿ ಇದ್ದಾರೆ. 16 ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್ ಆಗಿವೆ. 40 ಜನರ ವರದಿಗಳು ಇನ್ನಷ್ಟೇ ಬರಬೇಕು. 8 ಮಂದಿ ಐಸೊಲೇಶನ್ ವಾರ್ಡ್‌ಗೆ ಸೇರ್ಪಡೆಯಾಗಿದ್ದು ಅವರಲ್ಲಿ 7 ಮಂದಿ ತೀವ್ರ ಉಸಿರಾಟದ ಸಮಸ್ಯೆಯವರು, ಮತ್ತೂಬ್ಬರು ಫೂÉ é ಜ್ವರ ಲಕ್ಷಣದವರು. 17 ಮಂದಿ ವಾರ್ಡ್‌ನಿಂದ ಬಿಡುಗಡೆಗೊಂಡಿದ್ದು ಪ್ರಸ್ತುತ 47 ಮಂದಿ ವಾರ್ಡ್‌ನಲ್ಲಿದ್ದಾರೆ. 11 ಮಂದಿ ಹೆಸರು ನೋಂದಣಿ ಮಾಡಿದ್ದಾರೆ. 36 ಮಂದಿ 28 ದಿನಗಳ, 64 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. 521 ಮಂದಿ ಗೃಹ ನಿಗಾದಲ್ಲಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ಗೆ ಆರು ಮಂದಿ ಸೇರಿದ್ದು ಮೂವರು ಬಿಡುಗಡೆಗೊಂಡಿದ್ದಾರೆ. 27 ಮಂದಿ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ.