Advertisement

ಮತಾಂತರ ನಿಷೇಧ ವಿಧೇಯಕ‌ ಮಂಡನೆಗೆ ಕ್ಷಣಗಣನೆ

02:38 PM Dec 21, 2021 | Team Udayavani |

ಬೆಳಗಾವಿ : ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ “ಮತಾಂತರ ನಿಷೇಧ ವಿಧೇಯಕ” ಮಂಡನೆಗೆ ವಿಧಾನ ಮಂಡಲದ ಉಭಯ ಸದನದಲ್ಲಿ ಈಗ ಕ್ಷಣಗಣನೆ ಆರಂಭವಾಗಿದೆ.

Advertisement

ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕ ಮಂಡನೆಗೆ ಒಪ್ಪಿಗೆ ಲಭಿಸಿದೆ. ಮಂಗಳವಾರ ಬೆಳಗ್ಗೆಯೇ ಮಂಡನೆ ಸಾಧ್ಯತೆ ಇತ್ತು. ಆದರೆ ಪ್ರಶ್ನೋತ್ತರ ಸೇರಿದಂತೆ ಇತರೆ ಕಲಾಪಗಳನ್ನು ಪೂರ್ಣಗೊಳಿಸುವುದಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದ್ಯತೆ ನೀಡಿದರು. ಹೀಗಾಗಿ ಮಧ್ಯಾಹ್ನದ ಕಲಾಪ ಸೇರಿದಾಗ ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ.

ನಾವೆಲ್ಲರೂ ಸೇರಿ ಮತಾಂತರ ನಿಷೇಧ ವಿಧೇಯಕಕ್ಕೆ ಅನುಮತಿ ದೊರೆಯುವಂತೆ ನೋಡಿಕೊಳ್ಳೋಣ ಎಂದು ಕಾಗೇರಿ ಕಲಾಪ ಸಂದರ್ಭದಲ್ಲಿ ಹೇಳಿಕೆ ನೀಡಿರುವುದರಿಂದ ಇಂದೇ ಮಂಡನೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ವಿಧೇಯಕ ಕ್ಕೆ ವಿರೋಧ ಬೇಡ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದಾರೆ.

ಆದರೆ ಕಾಂಗ್ರೆಸ್ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಭಾರಿ ವಾಗ್ವಾದದ ಮಧ್ಯೆ ವಿಧೇಯಕಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗಷ್ಟೇ ನಡೆದ ಪರಿಷತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 12  ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಒಟ್ಟು 36 ಸ್ಥಾನಬಲ ಹೊಂದಿದೆ. ಒಂದೊಮ್ಮೆ ಪರಿಷತ್ ನಲ್ಲಿ ವಿಧೇಯಕವನ್ನು ಮತಕ್ಕೆ ಹಾಕಿದರೆ ಜೆಡಿಎಸ್ ಸಭಾತ್ಯಾಗ ಮಾಡುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next