Advertisement

CM Siddaramaiah ರಾಜೀನಾಮೆಗೆ ಕ್ಷಣಗಣನೆ: ಬಿ.ವೈ.ವಿಜಯೇಂದ್ರ

12:43 AM Aug 09, 2024 | Team Udayavani |

ಶ್ರೀರಂಗಪಟ್ಟಣ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಕ್ಷಣಗಣನೆ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

Advertisement

ಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಖಚಿತ ಎಂದು ಸಂತೋಷದಿಂದ ನಮ್ಮ ಕಾರ್ಯಕರ್ತರು ಪಟಾಕಿ ಹೊಡೆಯುತ್ತಿದ್ದಾರೆ. ಸಿಎಂ ರಾಜೀನಾಮೆ ಹಿನ್ನೆಲೆಯಲ್ಲಿ ಸಂಭ್ರಮಿಸುತ್ತಿದ್ದಾರೆ ಎಂದರು.

ಭ್ರಷ್ಟಾಚಾರದ ಪಿತಾಮಹರಿಂದ ಸಂಪುಟ ಸಭೆ
ಮುಖ್ಯಮಂತ್ರಿ ಹಾಜರಿರದ ಸಚಿವ ಸಂಪುಟ ಸಭೆ ಮೊನ್ನೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಭ್ರಷ್ಟಾಚಾರದ ಆರೋಪ ಬಂದಿದೆ. ಮುಡಾದಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ನಿವೇಶನಗಳ ಲೂಟಿ ಮಾಡಿದ ಆರೋಪ ಅವರ ಮೇಲಿದೆ. ಎರಡೂ ಆರೋಪಗಳಲ್ಲಿ ಸ್ವತಃ ಈ ನಾಡಿನ ಮುಖ್ಯಮಂತ್ರಿಯೇ ಎ 1 ಆರೋಪಿ. ಆ ಸಚಿವ ಸಂಪುಟ ಸಭೆಯ ನೇತೃತ್ವವನ್ನು ಭ್ರಷ್ಟಾಚಾರದ ಪಿತಾಮಹ ಡಿ.ಕೆ. ಶಿವಕುಮಾರ್‌ ವಹಿಸಿದ್ದರು ಎಂದು ಟೀಕಿಸಿದರು.

ಮುಖ್ಯಮಂತ್ರಿಯವರು ತಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ಕೊಡಲಾಗದೆ ಅ ಧಿವೇಶನವನ್ನು ಮೊಟಕುಗೊಳಿಸಿದ್ದಾರೆ. ವಿಪಕ್ಷದವರ ನಿಲುವಳಿಗೆ ಉತ್ತರ ಕೊಡಲಾಗದೆ ಓಡಿ ಹೋದ ಅಪಕೀರ್ತಿಗೆ ಪಾತ್ರರಾದವರು ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ವಿರುದ್ಧಷಡ್ಯಂತ್ರ: ವಿಜಯೇಂದ್ರ ಮನೆಗೆ ಮುತ್ತಿಗೆ ಯತ್ನ
ಶಿವಮೊಗ್ಗ: ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಶೋಷಿತ ವರ್ಗಗಳ ಮಹಾ ಒಕ್ಕೂಟದ ಮುಖಂಡರು ಗುರುವಾರ ನಗರದ ಬೈಪಾಸ್‌ ರಸ್ತೆಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಆದರೆ ಮನೆಯ ಬಳಿಗೆ ತೆರಳುವ ಮೊದಲೇ ಪೊಲೀಸರು ಮುಖಂಡರನ್ನು ಬಂಧಿ ಸಿ ಕರೆದೊಯ್ದರು. ಪ್ರತಿಭಟನಾಕಾರರು ವಿಜಯೇಂದ್ರ ವಿರುದ್ಧ ಘೋಷಣೆ ಕೂಗಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next