ಬಣ್ಣದ ಲೋಕಕ್ಕೆ ಲಗ್ಗೆ ಇಡುವ ಪ್ರತಿಯೊಬ್ಬರು ಕೂಡ ಸಿನಿ ದುನಿಯಾದಲ್ಲಿ ತಮ್ಮದೊಂದು ಛಾಪು ಮೂಡಿಸಬೇಕು, ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಸಿನಿಮಾ ಕೊಡಬೇಕು ಅಂತಲೇ ಬಯಸ್ತಾರೆ. ಇದಕ್ಕೆ ರೂರಲ್ ಸ್ಟಾರ್ ಖ್ಯಾತಿಯ ಅಂಜನ್ ಹಾಗೂ ಸದಭಿರುಚಿಯ ಸಿನಿಮಾಸಕ್ತ ನಿರ್ಮಾಪಕ ಕಂ ನಿರ್ದೇಶಕ ಸುರೇಶ್ ಅವರು ಹೊರತಾಗಿಲ್ಲ. ಉತ್ತರ ಕರ್ನಾಟಕದ ಬಡಕುಟುಂಬದಿಂದ ಗಾಂಧಿನಗರಕ್ಕೆ ಬಂದಿಳಿದ ಅಂಜನ್, ಒಂದೇ ಸಿನಿಮಾದಿಂದ ತನ್ನ ಪ್ರತಿಭೆ ಎಂತಹದ್ದು ಅನ್ನೋದನ್ನ ಪ್ರೂ ಮಾಡಿ ತೋರಿಸಿದ್ದಾರೆ. ಯಾವ ಸ್ಟಾರ್ ಗೂ ಕಮ್ಮಿಯಿಲ್ಲದ ಕ್ರೇಜ್ ಹುಟ್ಟು ಹಾಕಿಕೊಂಡಿದಲ್ಲದೇ, ಸ್ಯಾಂಡಲ್‍ವುಡ್ ಅಂಗಳದಲ್ಲಿ ಭದ್ರಬುನಾದಿ ಹಾಕಿಕೊಂಡಿದ್ದಾರೆ. ಈಗ `ಚೋಳ’ನಾಗಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದ್ದಾರೆ.
`ಚೋಳ’ ಟೈಟಲ್ಲೇ ಕುತೂಹಲ ಕೆರಳಿಸುತ್ತೆ. ಐತಿಹಾಸಿಕ ಚರಿತ್ರೆಯನ್ನೊಳಗೊಂಡಿರೋ ಸಿನಿಮಾನಾ? ಹೀಗೊಂದು ಸಂಶಯ ಮೂಡುತ್ತೆ. ಆದರೆ, ಚೋಳ ಆಧುನಿಕ ಕಥನವನ್ನೊಳಗೊಂಡಿರೋ ಚಿತ್ರ. ಪ್ರೀತಿ, ಸ್ನೇಹ, ರೌಡಿಸಂ ಸೇರಿದಂತೆ ಎಮೋಷನಲ್ ಎಲಿಮೆಂಟ್ಸ್‍ಗಳು ಈ ಮೂವಿಯಲ್ಲಿ ಕಾಣಬಹುದು. ಬಜೆಟ್‍ಗಿಂತ ಕಂಟೆಂಟ್ ಮುಖ್ಯ ಎನ್ನುವ, ಹೊಸತನ ಹಾಗೂ ಪ್ರಯೋಗಾತ್ಮಕ ಸಿನಿಮಾಗಳಿಗೆ ಹೆಚ್ಚು ಆಸಕ್ತಿ ತೋರಿಸುವ ಸುರೇಶ್ ಅವರು ಈ ಸಿನಿಮಾ ಡೈರೆಕ್ಟ್ ಮಾಡಿದ್ದಾರೆ.
ಇಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ಸುರೇಶ್ ಡಿ.ಎಂ ಅವರು ಅನ್ನದಾತರಾಗಿ ಗುರ್ತಿಸಿಕೊಂಡಿದ್ದರು.ಈಗ `ಚೋಳ’ ಚಿತ್ರದ ಸಾರಥ್ಯ ವಹಿಸಿದ್ದಾರೆ. ಇದೇ ಮೊದಲ ಭಾರಿಗೆ ಡೈರೆಕ್ಟರ್ ಹ್ಯಾಟ್ ತೊಟ್ಟು, ನಿರ್ದೇಶಕರ ಕುರ್ಚಿ ಮೇಲೆ ಕುಳಿತು `ಚೋಳ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನೂ ಹೊತ್ತಿರೋ ಸುರೇಶ್ ಅವರು `ಚೋಳ’ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗಿಳಿಯೋದ್ರ ಜೊತೆಗೆ ಚರಿತ್ರೆ ಸೃಷ್ಟಿ ಮಾಡಬೇಕು ಅಂತ ಹೊರಟಿದ್ದಾರೆ.
ಯಸ್, ಸೃಷ್ಟಿ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲೇ `ಚೋಳ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ `ಪ್ರಯಾಣಿಕರ ಗಮನಕ್ಕೆ’, `ರಣಹೇಡಿ’ ಸೇರಿದಂತೆ ಕೆಲ ಸಿನಿಮಾಗಳನ್ನ ನಿರ್ಮಿಸಿದ್ದರು. ಈ ಭಾರಿ ಡೈರೆಕ್ಷನ್ ಜೊತೆಗೆ ಪ್ರೊಡಕ್ಷನ್ ಇನ್‍ಚಾರ್ಜ್ ತಗೊಂಡಿದ್ದಾರೆ. ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ಅಂಜನ್‍ರನ್ನ ತಮ್ಮ `ಚೋಳ’ ಚಿತ್ರಕ್ಕೆ ನಾಯಕರನ್ನಾಗಿಸಿದ್ದಾರೆ. ಯರ್ರಾಬಿರ್ರಿ ಅಂತೊಂದು ಸಿನಿಮಾ ಮಾಡಿ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ನಿಂತಿದಲ್ಲದೇ ಇಡೀ ಕರುನಾಡಿನ ತುಂಬೆಲ್ಲಾ ಅಂಜನ್ ಖ್ಯಾತಿ ಗಳಿಸಿದ್ದಾರೆ. ಅಪಾರ ಅಭಿಮಾನಿ ಬಳಗವನ್ನ ಸಂಪಾದನೆ ಮಾಡ್ಕೊಂಡು ತಮ್ಮದೇ ಆದ ಕ್ರೇಜ್ ಸೃಷ್ಟಿಸಿದ್ದಾರೆ. ಈಗ `ಚೋಳ’ ಚಿತ್ರದ ಮೂಲಕ ಮಾಸ್ ಹೀರೋ ಆಗಿ ಹವಾ ಸೃಷ್ಟಿಸಲು ರೆಡಿಯಾಗಿ ನಿಂತಿದ್ದಾರೆ.
ಮಾಸ್ ಲುಕ್ಕಿನಲ್ಲಿ, ಎರಡು ಡಿಫರೆಂಟ್ ಶೇಡ್‍ನಲ್ಲಿ ಎಂಟ್ರಿಕೊಡಲಿರೋ ಚೋಳ ಅಲಿಯಾಸ್ ರೂರಲ್ ಸ್ಟಾರ್ ಗೆ ದಿಶಾ ಪಾಂಡೆ ಮತ್ತು ಪ್ರತಿಭಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ದಿನೇಶ್ ಮಂಗಳೂರು ಮತ್ತು ರಾಜ ಬಲವಾಡಿ ವಿಲನ್ನುಗಳಾಗಿ ನಟಿಸಿದ್ದಾರೆ ಮನಮೋಹನ್ ರಾಯ್ ರಂಥ ಹಿರಿಯ ನಟರು ವಿಶೇಷಪಾತ್ರಗಳನ್ನು ನಿಭಾಯಿಸಿದ್ದಾರೆ. ಮಜಾ ಭಾರತ ಖ್ಯಾತಿಯ ಜಗಪ್ಪ, ಮಿಂಚು, ವರ್ಧನ್ ತೀರ್ಥಹಳ್ಳಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಸಂದೀಪ್ ಹೊನ್ನಾಳ್ಳಿ ಛಾಯಾಗ್ರಹಣ, ಶಿವಶಂಕರ್ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ಭರದಿಂದ ಒಂದಷ್ಟು ಚಿತ್ರೀಕರಣ ನಡೆದಿದೆ. ಮುಖ್ಯ ಭಾಗಗಳ ಇನೊಂದಿಷ್ಟು ಚಿತ್ರೀಕರಣ ಬಾಕಿ ಇದೆ. ಅದು ಮುಗಿದಾಕ್ಷಣವೇ ಆಡಿಯೋ ರಿಲೀಸ್ ಮಾಡಿ, ಅದರ ಬೆನ್ನಲ್ಲಿಯೇ ಟ್ರೈಲರ್ ಅನ್ನೂ ಬಿಡುಗಡೆಗೊಳಿಸುವ ಯೋಜನೆ ಚಿತ್ರತಂಡದ್ದಾಗಿದೆ. ಇದೇ ಆಗಸ್ಟ್ 20ರಂದು `ಚೋಳ’ ಚಿತ್ರದ ಟೀಸರ್ ಹೊರಬೀಳಲಿದೆ.