Advertisement

ಬೈಕ್‌ನಲ್ಲಿ ಶಾಸಕ ಅಜಯಸಿಂಗ್‌ ನಗರ ಸಂಚಾರ

03:52 PM Apr 15, 2017 | Team Udayavani |

ಜೇವರ್ಗಿ: ಪಟ್ಟಣದ 20 ವಾರ್ಡ್‌ಗಳಲ್ಲಿ ಶುಕ್ರವಾರ ಶಾಸಕ ಡಾ| ಅಜಯಸಿಂಗ್‌ ಪುರಸಭೆ ಸದಸ್ಯರ ಹಾಗೂ ಅಧಿಕಾರಿಗಳ ಜೊತೆ ಬೈಕ್‌ನಲ್ಲಿ ನಗರ ಸಂಚಾರ ಮಾಡಿ ಸ್ಥಳಿಯ ಜನರ ಸಮಸ್ಯೆ ಆಲಿಸಿದರು. ಅಂಬೇಡ್ಕರ್‌ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿವಪೂಜೆ, ಕಿರಿಯ ಇಂಜಿನೀಯರ್‌ ನಾನಾಸಾಹೇಬ ಹಾಗೂ ಸದಸ್ಯರ ಜೊತೆ ಬೈಕ್‌ ಮೂಲಕ ಪ್ರತಿ ವಾರ್ಡ್‌ಗಳಿಗೆ ತೆರಳಿ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. 

Advertisement

ಅಖಂಡೇಶ್ವರ ವೃತ್ತದಿಂದ ಷಣ್ಮುಖ ಶಿವಯೋಗಿ ವಿರಕ್ತ ಮಠದ ವರೆಗೆ ಸಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಶಾಸಕರು ನಗರ ಸಂಚಾರ ಕೈಗೊಂಡ ವೇಳೆ ಬಹುತೇಕ ವಾರ್ಡ್‌ಗಳಲ್ಲಿ ಜನ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಬಗ್ಗೆ ಗಮನಕ್ಕೆ ಬಂತು. 

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ|ಅಜಯಸಿಂಗ್‌, ಪಟ್ಟಣದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಒದಗಿಸಲಾಗಿದೆ. ಪ್ರತಿ ಗಲ್ಲಿ ಗಲ್ಲಿಯಲ್ಲೂ ಸಿಸಿ ರಸ್ತೆ, ಚರಂಡಿ, ಶೌಚಾಲಯ, ಬೀದಿ ದೀಪ, ಕಸ ವಿಲೇವಾರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಪಟ್ಟಣದ ಸೌಂದಯಿìಕರಣಕ್ಕಾಗಿ ಫುಟ್‌ಪಾತ್‌ ನಿರ್ಮಾಣ, ಟೌನ್‌ ಹಾಲ್‌, ಶಾಪಿಂಗ್‌ ಮಹಲ್‌, ತರಕಾರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. 

ಬರುವ ವರ್ಷದೊಳಗೆ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುತ್ತವೆ ಎಂದು ಭರವಸೆ ನೀಡಿದರು. ಸ್ಲಂ ಬೋರ್ಡ್‌ ವತಿಯಿಂದ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಅಖಂಡೇಶ್ವರ ವೃತ್ತದಿಂದ ಮಹಾಲಕ್ಷಿ ಮಂದಿರದವರೆಗೆ, ಅಂಚೆ ಕಚೇರಿಯಿಂದ ಜೋಪಡಪಟ್ಟಿಯ ಮದೀನಾ ಮಸೀದಿವರೆಗೆ ಸಿಸಿ ರಸ್ತೆ,  ಬೀದಿ ದೀಪ, ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಪುರಸಭೆ ಅಧಿಕಾರಿಗಳಿಗೆ ಪ್ರತಿ ವಾರ್ಡ್‌ಗಳಲ್ಲಿ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆ ಆಲಿಸುವ ಕೆಲಸ ಮಾಡಬೇಕು.

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮಕೈಗೊಳ್ಳಬೇಕು, ಅವಶ್ಯವಿದ್ದ ಕಡೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಸೂಚಿಸಿದರು. ಪುರಸಭೆ ಅಧ್ಯಕ್ಷೆ ರೇಣುಕಾ ಶರಣು ಗುತ್ತೇದಾರ, ರವಿ ಕೋಳಕೂರ, ಇಬ್ರಾಹಿಂ ಪಟೇಲ, ಸೋಮಣ್ಣ ಕಲ್ಲಾ, ನಿಂಗಣ್ಣ ರದ್ಧೇವಾಡಗಿ, ಗನಿಸಾಬ ಮಿರ್ಚಿ, ನಿಂಗಣ್ಣ ಹಳಿಮನಿ ಹಾಗೂ ಪುರಸಭೆ ಅಧಿಕಾರಿಗಳು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next