Advertisement

ಕಾಂಗ್ರೆಸ್‌ ಪರ ಒಲವಿಗೆ ಪರಿಷತ್‌ ಫಲಿತಾಂಶ ಸಾಕ್ಷಿ

03:34 PM Dec 18, 2021 | Team Udayavani |

ಸಿಂಧನೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ರಾಜ್ಯದ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಭೇರಿ ಬಾರಿಸಿರುವುದು ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.

Advertisement

ಇದು ಮುಂದಿನ ವಿಧಾನಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ತಮ್ಮ ನಿವಾಸದಲ್ಲಿ ನಗರ ಬ್ಲಾಕ್‌ ಕಾಂಗ್ರೆಸ್‌ ಮತ್ತು ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ರಾಯಚೂರು ಮತ್ತು ಕೊಪ್ಪಳ ವಿಧಾನ ಪರಿಷತ್‌ ನೂತನ ಸದಸ್ಯ ಶರಣಗೌಡ ಬಯ್ನಾಪುರಗೆ ಸನ್ಮಾನಿಸಿ ಅವರು ಮಾತನಾಡಿದರು.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಮತ್ತು ಸಂವಿಧಾನ ವಿರೋಧಿ ನೀತಿಗಳಿಂದ ಜನ ಬೇಸತ್ತಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.

ಶರಣಗೌಡ ಬಯ್ನಾಪುರ ಮಾತನಾಡಿ, ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದ ಮತದಾರ ಪ್ರಭುಗಳಿಗೆ ಕಾಂಗ್ರೆಸ್‌ ಪಕ್ಷದ ಹಿರಿಯರಿಗೆ, ಮುಖಂಡರಿಗೆ ಅಭಿನಂದನೆಗಳು. ಈ ಗೆಲುವನ್ನು ಮತದಾರರಿಗೆ ಅರ್ಪಿಸಿದ್ದೇನೆ. ತಮ್ಮ ಅವಧಿಯಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳ ಸೇವೆಗೆ ಸದಾ ಸಿದ್ಧನಿರುವೆ ಎಂದು ಭರವಸೆ ನೀಡಿದರು.

Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರ ಬ್ಲಾಕ್‌ ಕಾಂಗ್ರೆಸ್‌ ಖಾಜಿಮಲ್ಲಿಕ್‌, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಅನಿಲಕುಮಾರ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌, ನಗರಸಭೆ ಮಾಜಿ ಅಧ್ಯಕ್ಷ ಜಾಫರಅಲಿ ಜಾಗಿರದಾರ್‌, ನಗರಸಭೆ ಸದಸ್ಯರಾದ ಶೇಖರಪ್ಪ ಗಿಣಿವಾರ್‌, ಶಬ್ಬಿರ ಅಹ್ಮದ್‌, ಮುನೀರಪಾಷ, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ್‌, ಮುಖಂಡರಾದ ಎಂ.ಕಾಳಿಂಗಪ್ಪ ವಕೀಲ, ಅಶೋಕ ಭೂಪಾಲ, ದೊಡ್ಡಪ್ಪ ತಿಡಿಗೋಳ, ಶ್ರೇಣಿಕರಾಜ್‌ ಶೇಟ, ಪ್ರಭುರಾಜ, ನನ್ನುಸಾಬ ಮೇಸ್ತ್ರಿ, ಯುವ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಶಫಿಯುಲ್ಲಾ ಖಾನ್‌, ಖಾಸಿಂಸಾಬ ದಢೇಸುಗೂರು, ದೊಡ್ಡನಗೌಡ ಕಲ್ಲೂರು, ದಶರಥ ರೆಡ್ಡಿ ಚನ್ನಳ್ಳಿ, ಹನುಮಂತಪ್ಪ ಗೋಮರ್ಸಿ, ನರಸಪ್ಪ ಕಟ್ಟಿಮನಿ, ಛತ್ರಪ್ಪ ಕುರುಕುಂದಿ, ಶಬ್ಬೀರ್‌ ಹುಸೇನ ನಾಯಕ, ಮಹಿಬೂಬ, ವೆಂಕಟೇಶ, ನಾಗರಾಜ, ಕ್ರಾಂತಿಕುಮಾರ ಬಾದರ್ಲಿ, ಅಯ್ಯಪ್ಪ ಬಾದರ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next