ಮೈಸೂರು: ನೈರುತ್ಯ ಪದವೀಧರ ಕ್ಷೇತ್ರ, ನೈರುತ್ಯ ಶಿಕ್ಷಕರ ಕೇತ್ರ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಅಂತಿಮವಾಗಿ 29 ಮಂದಿ ಕಣದಲ್ಲಿ ಉಳಿದಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ 12 ಮಂದಿ ಸ್ಪರ್ಧೆ ಮಾಡಿದ್ದಾರೆ. ನೈರುತ್ಯ ಪದವೀಧರ ಕ್ಷೇತ್ರದಿಂದ 8 ಮಂದಿ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ 9 ಮಂದಿ ಅಂತಿಮ ಕಣದಲ್ಲಿದ್ದಾರೆ.
ನೈರುತ್ಯ ಪದವೀಧರ ಕ್ಷೇತ್ರದಿಂದ ಎಸ್.ಪಿ.ದಿನೇಶ್ (ಕಾಂಗ್ರೆಸ್), ಆಯನೂರು ಮಂಜುನಾಥ್ (ಬಿಜೆಪಿ), ಅರುಣ್ ಕುಮಾರ್ (ಜೆಡಿಎಸ್), ಜಿ.ಸಿ.ಪಟೇಲ್ (ಸರ್ವ ಜನತಾ ಪಾರ್ಟಿ), ಪಕ್ಷೇತರ ಅಭ್ಯರ್ಥಿಗಳಾದ ಜಫ್ರುಲ್ಲಾ ಸತ್ತಾರ್ ಖಾನ್, ಬಿ.ಕೆ.ಮಂಜುನಾಥನ್, ಪ್ರಭುಲಿಂಗ್, ಜಿ.ಎಂ.ಜೈಕುಮಾರ್ ಅಂತಿಮ ಕಣದಲ್ಲಿ ಉಳಿದಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಕೊಡಗು ಜಿಲ್ಲೆ ಶನಿವಾರ ಸಂತೆಯ ದೇವರಾಜ ಎಚ್.ಎನ್., ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶುಕ್ರವಾರ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಹಾಲಿ ಸದಸ್ಯ ಬಿಜೆಪಿಯ ಕ್ಯಾ.ಗಣೇಶ್ ಕಾರ್ಣಿಕ್, ಜೆಡಿಎಸ್‌ನ ಎಸ್.ಎಲ್.ಭೋಜೇಗೌಡ, ಕಾಂಗ್ರೆಸ್‌ನ ಕೆ.ಕೆ.ಮಂಜುನಾಥ ಕುಮಾರ್, ಪಕ್ಷೇತರ ಅಭ್ಯರ್ಥಿಗಳಾದ ಡಾ.ಅರುಣ್ ಹೊಸಕೊಪ್ಪ, ಅಲೋಸಿಯಸ್ ಡಿಸೋಜಾ, ಕೆ.ಬಿ.ಚಂದ್ರೋಜಿರಾವ್, ಡಿ.ಕೆ.ತುಳಸಪ್ಪ, ಅಂಪಾರು ನಿತ್ಯಾನಂದ ಶೆಟ್ಟಿ, ಬಿ.ಆರ್. ಪ್ರಭುಲಿಂಗ, ಕೆ.ಸಿ.ಬಸವರಾಜಪ್ಪ, ಎಂ.ರಮೇಶ್, ರಾಜೇಂದ್ರ ಕುಮಾರ್ ಕೆ.ಪಿ. ಅಂತಿಮ ಕಣದಲ್ಲಿ ಉಳಿದಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಲೀನಾ ಶ್ರುತಿ ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, ಅಂತಿಮ ಕಣದಲ್ಲಿ ಎಂ.ಲಕ್ಷ್ಮಣ (ಕಾಂಗ್ರೆಸ್), ಬಿ.ನಿರಂಜನ ಮೂರ್ತಿ (ಬಿಜೆಪಿ), ಮರಿತಿಬ್ಬೇಗೌಡ (ಜೆಡಿಎಸ್), ಪಕ್ಷೇತರ ಅಭ್ಯರ್ಥಿಗಳಾಗಿ ತುಳಸಪ್ಪ ದಾಸರ, ಡಾ.ಪ್ರಸನ್ನ, ಎನ್.ಎಂ.ರವಿಶಂಕರ್, ಡಾ.ಮಹದೇವ್, ಎ.ಎಚ್.ಗೋಪಾಲಕೃಷ್ಣ, ಶರತ್ ರಾಜ್ ಕಣದಲ್ಲಿ ಉಳಿದಿದ್ದಾರೆ. ಜೂನ್ 8ರಂದು ಮತದಾನ ನಡೆಯಲಿದ್ದು, 12ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾಧಿಕಾರಿ ಮೈಸೂರು ಪ್ರಾದೇಶಿಕ ಆಯುಕ್ತೆ ಪಿ.ಹೇಮಲತಾ ತಿಳಿಸಿದ್ದಾರೆ.