Advertisement

Council By Poll: ಕೆಲವು ಸದಸ್ಯರ ಬಹಿಷ್ಕಾರ ನಡುವೆ ಎರಡೂ ಜಿಲ್ಲೆಯಲ್ಲಿ ಶೇ. 97.91 ಮತದಾನ

01:42 AM Oct 22, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಸಂಬಂಧಿಸಿ ಸೋಮವಾರ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಸಂಸ್ಥೆಗಳ ವಿಧಾನ ಪರಿಷತ್‌ ಉಪಚುನಾವಣೆ ಶಾಂತಿಯುತವಾಗಿ ನಡೆಯಿತು. ಎರಡೂ ಜಿಲ್ಲೆ ಸೇರಿ ಶೇ.97.91 ಮತದಾನ ದಾಖಲಾಗಿದೆ. ಸ್ಥಳೀಯ ಸಂಸ್ಥೆ ಸದಸ್ಯರು, ಸಂಸದರು, ಶಾಸಕರು ಮತದಾನ ಮಾಡಿದರು.

Advertisement

ಒಟ್ಟು 6,032 ಮತದಾರರ ಪೈಕಿ 5906 ಮಂದಿ ಮತ ಚಲಾಯಿಸಿದರು. ಉಭಯ ಜಿಲ್ಲೆಗಳ 392 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ನಡೆಯಿತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆಯಾದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ಮುಂದಿನ ಮೂರು ವರ್ಷಗಳ ಅವಧಿಗೆ ಈ ಚುನಾವಣೆ ನಡೆದಿದೆ.

ಬಿರುಸಿನ ಮತದಾನ
ಮತದಾರರೆಲ್ಲರೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೇ ಆದ ಕಾರಣ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯಿತು. ಮಧ್ಯಾಹ್ನ ವೇಳೆಗಾಗಲೇ ಬಹುತೇಕ ಕಡೆ ಶೇ.90ಕ್ಕಿಂತಲೂ ಹೆಚ್ಚಿನ ಮತದಾನ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ, 223 ಗ್ರಾ.ಪಂ., 2 ನಗರಸಭೆ, 3 ಪುರಸಭೆ, 5 ನಗರ ಪಂಚಾ ಯತ್‌ಗಳ ಬಹುತೇಕ ಸದಸ್ಯರು ಮತದಾನ ಮಾಡಿದರು.

ಪಾಲಿಕೆಯ ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೇ ಪಾಲಿಕೆ ಸದಸ್ಯರು ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. 11 ಗಂಟೆ ಬಳಿಕ ಮತಗಟ್ಟೆಗಳು ಬಹುತೇಕ ಖಾಲಿ ಹೊಡೆಯುತ್ತಿದ್ದವು. ಕೆಲವೆಡೆ 12 ಗಂಟೆಯೊಳಗೆ ಎಲ್ಲ ಮತಗಳು ಚಲಾವಣೆಯಾದರೂ ನಿಯ ಮದಂತೆ ಚುನಾವಣ ಸಿಬಂದಿ ಸಂಜೆ 4 ಗಂಟೆವರೆಗೆ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಬೇಕಿತ್ತು.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಉಳ್ಳಾಲ ನಗರಸಭೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಪರಿಷತ್‌ ಸದಸ್ಯರಾದ ಐವನ್‌ ಡಿ’ಸೋಜಾ, ಮಂಜುನಾಥ್‌ ಭಂಡಾರಿ ಅವರು ಪಾಲಿಕೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಆದರೆ ಯಾವುದೇ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮತ್ತು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಮತದಾನದ ಆವಕಾಶವಿರಲಿ

Advertisement

ಲ್ಲ.

ವಿವಾಹಕ್ಕೆ ಮೊದಲು ಮತದಾನ
ಕೊಕ್ಕಡ ಗ್ರಾ.ಪಂ. ಸದಸ್ಯ ಶರತ್‌ ಅವರ ವಿವಾಹ ಮತದಾನ ದಿನವೇ ನಿಗದಿಯಾಗಿದ್ದು, ಮದುವೆ ಮಂಟಪಕ್ಕೆ ತೆರಳುವ ಮುನ್ನ ಕೊಕ್ಕಡ ಮತ ಗಟ್ಟೆಯಲ್ಲಿ ಮತದಾನ ಮಾಡಿದರು.

53 ಸೂಕ್ಷ್ಮ ಮತಗಟ್ಟೆಗಳು
ಕ್ಷೇತ್ರದಲ್ಲಿ 53 ಸೂಕ್ಷ್ಮ ಮತಗಟ್ಟೆ ಗಳನ್ನು ಗುರುತಿಸಲಾಗಿದ್ದು, ಅಲ್ಲಿ ಸಂಪೂರ್ಣ ವೀಡಿಯೋ ರೆಕಾರ್ಡಿಂಗ್‌ ವ್ಯವಸ್ಥೆ ಮತ್ತು ಹೆಚ್ಚುವರಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. 20 ಕ್ಕಿಂತ ಹೆಚ್ಚು ಮತದಾರರಿರುವ ಮತ ಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಿ ಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 540 ಮತ್ತು ಉಡುಪಿ ಜಿಲ್ಲೆಯಲ್ಲಿ 328 ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿ ನಿಯೋಜಿಸಿದ್ದು, ಮತಗಟ್ಟೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮತದಾನ ಬಳಿಕ ಮಾತನಾಡಿದ ಕ್ಯಾ| ಬ್ರಿಜೇಶ್‌ ಚೌಟ, ನಮ್ಮೆಲ್ಲ ಪಂಚಾಯತ್‌ ಸದ ಸ್ಯರೂ ಮತದಾನ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದರು.

ಅ.24ರಂದು ಮತ ಎಣಿಕೆ
ಕಿಶೋರ್‌ ಕುಮಾರ್‌ (ಬಿಜೆಪಿ), ರಾಜು ಪೂಜಾರಿ (ಕಾಂಗ್ರೆಸ್‌), ಅನ್ವರ್‌ ಸಾದತ್‌ (ಎಸ್‌ಡಿಪಿಐ) ಮತ್ತು ದಿನಕರ್‌ ಉಳ್ಳಾಲ್‌ (ಸ್ವತಂತ್ರ) ಕಣದಲ್ಲಿದ್ದು, ಅ.24ರಂದು ಮಂಗಳೂರಿನ ಸಂತ ಅಲೋಶಿಯಸ್‌ ಪ,ಪೂ.ಕಾಲೇ ಜಿನಲ್ಲಿ ಮತ ಎಣಿಕೆನಡೆದು, ಫ‌ಲಿತಾಂಶ ಘೋಷಣೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next