Advertisement

ಕೆಮ್ಮಿದರೆ ಪರೀಕ್ಷಿಸಲಿದೆ ಆ್ಯಪ್‌

03:03 PM Apr 25, 2020 | sudhir |

ಮಣಿಪಾಲ: ಸಾಂಕ್ರಾಮಿಕ ರೋಗಗಳು ಬಂದ ಬಳಿಕ ಉಸಿರಾಡಲು ಕಷ್ಟದ ಪರಿಸ್ಥಿತಿ. ಸೋಂಕಿನ ಸಣ್ಣಪುಟ್ಟ ಲಕ್ಷಣಗಳು ಕಾಣಿಸಿಕೊಂಡರೂ ಭಯ ಪಡಬೇಕಾದ ಸಂದರ್ಭ. ಆದರೆ ಇವುಗಳನ್ನು ಅಳೆಯಲು ಶೀಘ್ರದಲ್ಲಿ ಮೊಬೈಲ್‌ ಅಪ್ಲಿಕೇಶನ್‌ಗಳು ಬರಲಿವೆ. ಈ ಆ್ಯಪ್‌ ಕೆಮ್ಮನ್ನು ಗುರುತಿಸಲಿದ್ದು ಕೆಮ್ಮು ನಿಜವಾಗಿಯೂ ಕೋವಿಡ್ ಸೋಂಕಿನ ಲಕ್ಷಣವೇ ಎಂದು ಅದು ನಿರ್ಧರಿಸಲಿದೆ.

Advertisement

ಕೃತಕ ಬುದ್ಧಿಮತ್ತೆಯ (ಎಐ) ತಂತ್ರಜ್ಞಾನದಡಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ. ಸ್ವಿಸ್‌ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ತಂಡ ನಿರ್ಮಿಸುತ್ತಿರುವ ಕೊಗ್ವಿಡ್‌ ಎಂಬ ಅಪ್ಲಿಕೇಶನ್‌ ಇದಾಗಿದೆ. ಈ ಆ್ಯಪ್‌ ಜನರು ಕೆಮ್ಮುವುದನ್ನು ರೆಕಾರ್ಡ್‌ಮಾಡಿಕೊಳ್ಳುತ್ತದೆ. ಕೆಮ್ಮುವ ವೇಳೆ ಕಫ‌ಗಳು ಕೋವಿಡ್ ವೈರಸ್‌ ಸೋಂಕಿತನಂತೆ ಧ್ವನಿಸುತ್ತದೆಯೇ ಎಂಬುದನ್ನು ಪರೀಕ್ಷೆ ಮಾಡಲಿದೆ.

ಈಗಾಗಲೇ ತಂಡವು ಕೆಮ್ಮು ಇರುವ 15,000ಕ್ಕೂ ಹೆಚ್ಚು ಜನರ ಶಬ್ದ ಮಾದರಿಗಳನ್ನು ಸಂಗ್ರಹಿಸಿ¨ªಾರೆ. ಅದರಲ್ಲಿ 1,000 ಜನರು ಕೋವಿಡ್‌-14 ಎಂದು ಗುರುತಿಸಲ್ಪಟ್ಟವರಿದ್ದಾರೆ. ಕಳೆದ ವಾರ “ದಿ ವಾಲ್‌ ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದಂತೆ, ಕನಿಷ್ಠ ಮೂರು ಇತರ ಲ್ಯಾಬ್‌ಗಳು ಕೃತಕ ಬುದ್ಧಿ ಮತ್ತೆ-ಚಾಲಿತ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ. ಇದು ಉಸಿರಾಟ, ಮಾತನಾಡುವಿಕೆ ಮತ್ತು ಕೆಮ್ಮನ್ನು ವಿಶ್ಲೇಷಿಸಿ ವರದಿ ನೀಡುತ್ತದೆ ಎಂದಿದೆ. ಆದರೆ ಈ ಅಪ್ಲಿಕೇಶನ್‌ ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು ಬಳಕೆ ಬರಬೇಕಾದರೆ ಹಲವು ಸುತ್ತಿನ ಪರೀಕ್ಷೆಗಳು ಅನಿವಾರ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next