Advertisement

ಮಳೆಗೆ ಕೊಳೆಯುತ್ತಿದೆ ಹತ್ತಿ-ತೊಗರಿ ಬೆಳೆ

05:59 PM Aug 02, 2022 | Team Udayavani |

ಯಡ್ರಾಮಿ: ಮಳ್ಳಿ, ಕುಳಗೇರಿ, ಮಾಗಣಗೇರಿ, ಬಿರಾಳ(ಹಿಸ್ಸಾ), ಐನಾಪೂರ ಗ್ರಾಮಗಳಲ್ಲಿ ರವಿವಾರ ಸುರಿದ ವ್ಯಾಪಕ ಮಳೆಯಿಂದ ಸಣ್ಣ ಸಸಿಗಳ ಹಂತದಲ್ಲಿರುವ ಹತ್ತಿ, ತೊಗರಿ ಬೆಳೆ ಸಂಪೂರ್ಣ ಜಲಾವೃತವಾಗಿ ಕೊಳೆಯುತ್ತಿವೆ.

Advertisement

ತಾಲೂಕಿನೆಲ್ಲೆಡೆ ಕಳೆದ ಎರಡು ವಾರಗಳಿಂದ ಮಳೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ಇಜೇರಿ, ಬಿಳವಾರ, ಅರಳಗುಂಡಗಿ ವ್ಯಾಪ್ತಿಯಲ್ಲಿ ಮಳೆ ಚನ್ನಾಗಿ ಆಗಿ ಬೆಳೆಗಳು ಲಕ್ಷಣವಾಗಿ ಕಾಣುತ್ತಿವೆ. ಇದರಿಂದ ಆ ಭಾಗಗಳಲ್ಲಿ ರೈತರ ಮುಖದಲ್ಲಿಯೂ ಮಂದಹಾಸ ಮೂಡುವಂತಾಗಿತ್ತು. ಒಂದು ಗಂಟೆಗೂ ಹೆಚ್ಚು ಸಮಯ ಬಿದ್ದ ಮಳೆ ರೈತರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಒಂದುವರೆ ತಿಂಗಳಿನ ಬೆಳೆಗಳಲ್ಲಿ ರೈತರು ಈಗಾಗಲೇ ಒಂದು ಬಾರಿ ಕಳೆ ಕೀಳಿಸಿದ್ದಾರೆ. ಇನ್ನೇನು ರಸಗೊಬ್ಬರ ಕೊಡಬೇಕೆನ್ನುವಷ್ಟರಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಆಲಿಕಲ್ಲು ಮಳೆ ಕೃಷಿ ಚಟುವಟಿಕೆಗಳಿಗೆ ತಡೆ ನೀಡಿ, ರೈತರು ಕೈಕಟ್ಟಿ ಕುಳಿತು ಕೊಳ್ಳುವಂತೆ ಮಾಡಿದೆ.

ಇಲ್ಲಿಗೆ ಮಳೆ ಸರಿದು ಬಿಸಿಲು ಬಿದ್ದರೆ ಮಾತ್ರ ಅರ್ಧ ಬೆಳೆಯಾದರೂ ಉಳಿಯುತ್ತವೆ. ಇಲ್ಲವಾದರೆ ಸಂಪೂರ್ಣ ಬೆಳೆ ಅತಿಯಾದ ನೀರು ನಿಂತಿದ್ದರ ಪರಿಣಾವಾಗಿ ಕೊಳೆತು ಹೋಗುತ್ತವೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next