Advertisement

ಸಿಕೆಪಿಗೆ ಬಂದ “ಕಾಟನ್‌’ಪೇಟೆ! 

02:58 PM May 27, 2017 | |

ದೇಶದ ಅತ್ಯುತ್ತಮ ನೇಕಾರರಿಂದ ತಯಾರಾದ, ಕೂಲ್‌ ಕಾಟನ್‌ ಹ್ಯಾಂಡ್‌ಲೂಮ್‌ ಉತ್ಪನ್ನಗಳು ಬೆಂಗಳೂರಿಗೆ ಪ್ರವೇಶ ಕೊಟ್ಟಿವೆ. ಸೀದಾ ಚಿತ್ರಕಲಾ ಪರಿಷತ್ತಿಗೆ ಹೋದರೆ, ಅಲ್ಲಿ ನಿಮ್ಮನ್ನು ಕೈಮಗ್ಗ ಬಟ್ಟೆಗಳು ಸ್ವಾಗತಿಸಲಿವೆ. ಕರ್ನಾಟಕದ ಕಾಟನ್‌ ಮತ್ತು ರೇಷ್ಮೆ ಕೈಮಗ್ಗಗಳಿಂದ ತಯಾರಿಸಲಾದ ಆಕರ್ಷಕ ಬಟ್ಟೆಗಳು, ಒರಿಸ್ಸಾದ ಕಣ್ಣು ಕೋರೈಸುವ ಸೀರೆಗಳು, ಪಶ್ಚಿಮ ಬಂಗಾಳದ ಕಾಟನ್‌ ಸೀರೆಗಳು ಇಲ್ಲಿನ ವಿಶೇಷ ಆಕರ್ಷಣೆ. ಮೇ 29ರ ವರೆಗೆ ಈ ಮೇಳ ನಡೆಯಲಿದೆ. ಒಟ್ಟು 150 ಮಳಿಗೆಗಳು ತಮ್ಮ ವಿಭಿನ್ನ ಉತ್ಪನ್ನಗಳನ್ನು ತೆರೆದಿಟ್ಟಿವೆ. 

Advertisement

ಅಂದಹಾಗೆ, ಇದು ಕೈಮಗ್ಗಗಳ ನೇಕಾರರು ಒಟ್ಟಾಗಿ ಸೇರಿ ಆಯೋಜಿಸಿರುವ “ಕಾಟನ್‌ ಮತ್ತು ಸಿಲ್ಕ್ ಫ್ಯಾಬ್‌ಧಿ 2017′. ಹ್ಯಾಂಡ್‌ಲೂಂ ಬಟ್ಟೆಗಳಲ್ಲದೇ, ಆಭರಣಗಳು, ಕುಂದನ್‌, ಮೀನಾಕರಿ, ಜವಳಿ, ಕೈಯಿಂದ ತಯಾರಿಸಿದ ಕಾಗದ, ಹವಳ, ಪೇಂಟಿಂಗ್ಸ್‌, ಚರ್ಮೋತ್ಪನ್ನಗಳು, ಮರ, ದಂತ, ಗಾಜಿನಲ್ಲಿ ಕುಸುರಿ ಮಾಡಿರುವ ಅಲಂಕಾರಿಕ ವಸ್ತುಗಳು, ಕಂಚು, ಬೆಳ್ಳಿ ಮತ್ತು ಚಿನ್ನದ ಆಭರಣಗಳು ಇಲ್ಲಿರಲಿವೆ. ಕರಕುಶಲ ಆಭರಣಗಳು, ಕಾಪೆìಟ್‌ಗಳು, ಡುರೀಸ್‌, ಮೊಜಾರಿಸ್‌, ಮಾರ್ಬಲ್‌ ಕ್ರಾಫ್ಟ್, ಗುಜರಾತಿನ ವಿಖ್ಯಾತ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಬಂಧಾನಿ ಮತ್ತು ಬಂಧೇಜ್‌ನಂ ಕಲೆಯನ್ನು ಒಳಗೊಂಡ ವೈವಿಧ್ಯ ಬಟ್ಟೆಗಳ ಪ್ರದರ್ಶನವೂ ಗ್ರಾಹಕರನ್ನು ಸೆಳೆಯಲಿವೆ. ಅಂದಹಾಗೆ, ಈ ಕೈಮಗ್ಗ ಮೇಳವನ್ನು ಉದ್ಘಾಟಿಸಿದ್ದು ಕನ್ನಡದ ಖ್ಯಾತ ನಟಿ ಶ್ರುತಿ ಹರಿಹರನ್‌.

ಎಲ್ಲಿ?: ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ, ಬೆಂಗಳೂರು
ಯಾವಾಗ?: ಮೇ 27ಧಿ-29
ಸಂಪರ್ಕ: 9457955838

Advertisement

Udayavani is now on Telegram. Click here to join our channel and stay updated with the latest news.

Next