ಮುಂಬೈ: ಭಾರತದ ಮೊದಲ ಆಸ್ಕರ್ ವಿಜೇತ ವಸ್ತ್ರವಿನ್ಯಾಸಕಿ ಭಾನು ಅಥಯ್ಯಾ (91) ನಿಧನರಾಗಿದ್ದಾರೆ. ಅವರು ವಯೋ ಸಹಜ ಅನಾರೋದ್ಯದಿಂದ ಬಳಲುತಿದ್ದರು.
1983ರಲ್ಲಿ ತೆರೆಕಂಡ ಹಾಲಿವುಡ್ ಸಿನೆಮಾ “ಗಾಂಧಿ’ ಚಿತ್ರದಲ್ಲಿನ ವಸ್ತ್ರವಿನ್ಯಾಸಕ್ಕಾಗಿ ಅಥಯ್ಯಾಗೆ ಆ ಸಾಲಿನ “ಅತ್ಯುತ್ತಮ ವಸ್ತ್ರವಿನ್ಯಾಸಕಿ ಆಸ್ಕರ್’ ಪ್ರಶಸ್ತಿ ಲಭಿಸಿತ್ತು.
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಜನಿಸಿದ್ದ ಭಾನು ಅವರು 1956ರಲ್ಲಿ ಗುರು ದತ್ ಅವರ ಚಿತ್ರ ಸಿ.ಐ.ಡಿ. ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದರು.
ಇದನ್ನೂ ಓದಿ:ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ವಿವೇಕ್ ಒಬೆರಾಯ್ ಮನೆಗೆ ಸಿಸಿಬಿ ದಾಳಿ
ಭಾನು ಅವರು 100ಕ್ಕಿಂತಲೂ ಅಧಿಕ ಬಾಲಿವುಡ್ ಸಿನಿಮಾಗಳಿಗೆ ವಸ್ತ್ರವಿನ್ಯಾಸ ಮಾಡಿದ್ದರು. ಅವರು, ಕೊನೆಯ ಬಾರಿ ಆಮಿರ್ ಖಾನ್‌ರ “ಲಗಾನ್’ ಹಾಗೂ ಶಾರೂಖ್ ಖಾನ್‌ರ “ಸ್ವದೇಸ್’ ಚಿತ್ರದ ವಸ್ತ್ರವಿನ್ಯಾಸ ಮಾಡಿದ್ದರು. ಅದಕ್ಕಾಗಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದರು.