Advertisement

ಪ್ಯಾರಾಸೆಟಮಾಲ್‌ ಸಹಿತ ಔಷಧಗಳ ದರ ಇಳಿಕೆ

12:36 PM Dec 23, 2022 | Team Udayavani |

ಹೊಸದಿಲ್ಲಿ: ಪ್ಯಾರಾಸೆಟಮಾಲ್‌, ಮೆಟ್‌ಫಾರ್ಮಿನ್‌ ಸಹಿತ ಸಾಮಾನ್ಯವಾಗಿ ಬಳಕೆ ಯಾಗುವಂಥ ಔಷಧಗಳೂ ಸಹಿತ ಒಟ್ಟು 127 ಔಷಧಗಳು ಶೀಘ್ರವೇ ಕಡಿಮೆ ದರದಲ್ಲಿ ಸಿಗಲಿವೆ.

Advertisement

ರಾಷ್ಟ್ರೀಯ ಔಷಧ ದರ ನಿಗದಿ ಪ್ರಾಧಿಕಾರ (ಎನ್‌ಪಿಪಿಎ) ಈ ಔಷಧಗಳ ದರಕ್ಕೆ ಮಿತಿ ಹೇರಲು ನಿರ್ಧರಿಸಿದೆ. ಈ ಮೂಲಕ ಪ್ರಸಕ್ತ ವರ್ಷ 5ನೇ ಬಾರಿಗೆ ಪ್ರಾಧಿಕಾರವು ಅಗತ್ಯ ಔಷಧಗಳ ದರ ಇಳಿಕೆ ಮಾಡಿದಂತಾಗಿದೆ.

ಪ್ರಸ್ತುತ ಪ್ಯಾರಾಸೆಟಮಾಲ್‌(650 ಎಂಜಿ) ಮಾತ್ರೆಯ ದರ 2.30 ರೂ. ಆಗಿದೆ. ಈಗ ಇದನ್ನು ಶೇ.25ರಷ್ಟು ತಗ್ಗಿಸಲಾಗಿದ್ದು, 1.80 ರೂ.ಗೆ ಸಿಗಲಿದೆ. ಅಮೋಕ್ಸಿಸಿಲ್ಲಿನ್‌ ದರ ಟ್ಯಾಬ್ಲೆಟ್‌ಗೆ 22.30 ರೂ. ಇದ್ದಿದ್ದು, ಇನ್ನು 16.80 ರೂ. ಆಗಲಿದೆ. ಔಷಧ ಗಳ ಹೊಸ ಸ್ಟಾಕ್‌ ಮಾರುಕಟ್ಟೆಗೆ ಬರಲು ಸಮಯ ಬೇಕಾಗಿರುವ ಕಾರಣ, ಜನವರಿ ಅಂತ್ಯದಲ್ಲಿ ಪರಿಷ್ಕೃತ ದರ ಅನ್ವಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next