Advertisement
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿರುವ ಕಾರಣ ಕರಾವಳಿಗೆ ಮಕ್ಕಳನ್ನು ಕಳುಹಿಸಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಡ್ರಗ್ಸ್ ಜಾಲದ ಆರೋಪಿಗಳು ಸಿಕ್ಕಿಬಿದ್ದರೂ ಅವರು ಕೆಲವೇ ದಿನದ ಅಂತರದಲ್ಲಿ ಜಾಮೀನಿನಲ್ಲಿ ಹೊರಬಂದು ಮತ್ತೆ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕಾನೂನಿಗೆ ತಿದ್ದುಪಡಿ ತಂದು ಕಠಿನ ನಿಯಮ ರೂಪಿಸಬೇಕಾಗಿದೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಬಿಜೆಪಿಗೆ ಈ ಹಿಂದೆ ಯಾವ ರೀತಿ ಮೋಸ ಮಾಡಿದ್ದರು ಹಾಗೂ ಈಗ ಯಾರ ಜತೆ ಇದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಜೈಲಿಗೆ ಕಳುಹಿಸುತ್ತೇನೆ ಎಂದು ಪದೇಪದೆ ಹೇಳುತ್ತಾರೆ. ಅವರನ್ನು ತಡೆದವರಾರು? ಯಾವ ಕ್ರಮ ಬೇಕಾದರೂ ಕೈಗೊಳ್ಳಿ ಎಂದು ಭಂಡಾರಿ ಹೇಳಿದರು.
ಸಿ.ಪಿ. ಯೋಗೇಶ್ವರ್ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರು. ಪಕ್ಷದ ತತ್ವ-ಸಿದ್ಧಾಂತ ನಂಬಿ ಬರುವುದಾದರೆ ಸ್ವಾಗತ. ನಮಗೇನೂ ಅವರ ಅನಿವಾರ್ಯತೆ ಇಲ್ಲ. ಬರುತ್ತೇವೆ ಎಂದವರಿಗೆ ಬೇಡ ಎನ್ನಲ್ಲ ಎಂದರು. ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕೆರಾಡಿ, ಜಡ್ಕಲ್ ಪ್ರದೇಶದ ಜನರು ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದಾಗ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಮನವೊಲಿಕೆ ಮಾಡಿದ್ದೇವೆ. ಕಸ್ತೂರಿ ರಂಗನ್ ವರದಿ ಶಿಫಾರಸು ಕಾಂಗ್ರೆಸ್ ಅನುಷ್ಠಾನ ಮಾಡಲ್ಲ ಎಂಬುದು ನಮ್ಮ ನಿಲುವು. ಈ ಪ್ರದೇಶ ಗಳಲ್ಲಿ ಕಾಂಗ್ರೆಸ್ ಬಲವಾಗಿದೆ. ಬಹಿಷ್ಕಾರದಿಂದ ಕೊಂಚ ಹಿನ್ನಡೆ ಆಗಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Related Articles
Advertisement