Advertisement
ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆ ಸುರಕ್ಷಿತವೇ?ಖಂಡಿತವಾಗಿ ಕಾಸ್ಮೆಟಿಕ್ ಸರ್ಜರಿ (ಶಸ್ತ್ರಚಿಕಿತ್ಸೆ) ಸುರಕ್ಷಿತ ಎಂಬುದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ಬಹಳಷ್ಟು ವಿಧಾನಗಳಿರುತ್ತವೆ. ಇವುಗಳ ಮುಖ್ಯ ಉದ್ದೇಶ, ಯಾವುದೇ ವ್ಯಕ್ತಿಯ ಹುಟ್ಟಿನಿಂದ ಅಥವಾ ಪೆಟ್ಟಿನಿಂದಾದ ಅಥವಾ ಇನ್ನಿತರ ರೀತಿಯಿಂದಾದ ನ್ಯೂನತೆ, ಏರುಪೇರುಗಳನ್ನು ಸರಿಪಡಿಸುವ ವಿಧಾನವೇ ಕಾಸ್ಮೆಟಿಕ್ ಸರ್ಜರಿ. ತಲೆಯಿಂದ ಪಾದದವರೆಗೆ ಅನೇಕ ಥರದ ಕಾಸ್ಮೆಟಿಕ್ ಸರ್ಜರಿಗಳಿರುತ್ತವೆ. ಇಲ್ಲಿ ಮುಖ್ಯ ಅಂಶ, ಕಾಸ್ಮೆಟಿಕ್ ಸರ್ಜರಿಗಳಿಗೆ ಅರ್ಹ ವ್ಯಕ್ತಿಗಳು ಯಾರು ಎಂಬುದು. ಯಾವ್ಯಾವ ಕಾರಣಗಳಿಗೆ ಕಾಸ್ಮೆಟಿಕ್ ಸರ್ಜರಿ ಸಹಾಯಕವಾಗುತ್ತದೆ? ಸುಮಾರು 13ರಿಂದ 70 ವಯಸ್ಸಿನವರೆಗೆ ದೇಹದ ಯಾವುದೇ ರೀತಿಯ ಬಾಹ್ಯ ರೂಪದ ಏರುಪೇರುಗಳನ್ನು ಇಲ್ಲಿ ಸರಿಪಡಿಸಬಹುದು.
Related Articles
Advertisement
ಬೊಜ್ಜಿನ ಸಮಸ್ಯೆ: ಬೊಜ್ಜು ನಿವಾರಣೆಗೆ ಪರಿಹಾರ ಹುಡುಕಲು ಹೋಗಿ ಹೈರಾಣಾದವರೇ ಹೆಚ್ಚು. ಅಂಥವರಿಗೆ ‘ಲೈಪೋಸಕ್ಷನ್’ ಎಂಬುದು ಶಾಶ್ವತ ಪರಿಹಾರ. ದೇಹದ ಯಾವುದೇ ಭಾಗದಲ್ಲಿನ ಬೊಜ್ಜು ಇಳಿಸುವುದರಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಸರಿಯಾದ ಆಕಾರ ಪಡೆಯಲು ಇದು ಸಹಕಾರಿ.
ಗೈನೆಕೋಮಾಸ್ಟಿಯಾ: ಹುಡುಗರಿಂದ ವಯಸ್ಸಾದವರಿಗೂ ಕಾಡುವ ಒಂದು ಮುಜುಗರ ಸಂಗತಿ ‘ಗೈನೆಕೋಮಾಸ್ಟಿಯಾ’. ಇದು ಪುರುಷರಿಗೆ ಸಂಬಂಧಪಟ್ಟ ಸ್ತನಗಳ ಸಮಸ್ಯೆ. ಎದೆಯ ಭಾಗ ಹೆಚ್ಚು ಉಬ್ಬಿದಂತಾಗಿರುತ್ತದೆ. ಇದೂ ಒಂದು ಸಾಮಾಜಿಕ ಪಿಡುಗಾಗಿದ್ದು, ಪುರುಷರೂ ಇದರಿಂದ ಖನ್ನತೆಗೊಳಗಾಗಿರುತ್ತಾರೆ. ಇಂಥವರಿಗೆ ಕಾಸ್ಮೆಟಿಕ್ ಸರ್ಜರಿ ಮೂಲಕ ಪರಿಹಾರ ಕಲ್ಪಿಸಲಾಗುವುದು.
ಸಿಲಿಕಾನ್ ಇಂಪ್ಲಾಂಟ್: ಮಹಿಳೆಯರಿಗೆ ಸ್ತನಗಳ ಸೌಂದರ್ಯವರ್ಧನೆ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಸ್ತನಗಳ ಗಾತ್ರ ಹೆಚ್ಚಿಸುವುದು, ತಗ್ಗಿಸುವುದು, ದೇಹದ ಗಾತ್ರಕ್ಕನುಗುಣವಾಗಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಲ್ಲಿ ಪ್ರಮುಖವಾದದ್ದು ಸಿಲಿಕಾನ್ ಇಂಪ್ಲಾಂಟೇಷನ್. ಮಹಿಳೆಯರ ದೇಹಕ್ಕನುಗುಣವಾಗಿ ‘ಸಿಲಿಕಾನ್ ಇಂಪ್ಲಾಂಟ್’ ಮಾಡಿ ಸ್ತನಗಳ ಗಾತ್ರ ಹೆಚ್ಚಿಸುವುದರ ಅಥವಾ ಕಡಿಮೆ ಮಾಡುವುದರ ಮೂಲಕ ಜೀವನಪರ್ಯಂತ ಸುಂದರವಾಗಿ ಕಾಣುವಂತೆ ಬದಲಾವಣೆ ಮಾಡಬಹುದು. ಒಮ್ಮೊಮ್ಮೆ ಸ್ತನಗಳ ಗಾತ್ರ ಹೆಚ್ಚಿದ್ದವರು ಮಾನಸಿಕ ಹಾಗೂ ದೈಹಿಕ ಅನಾನುಕೂಲಗಳಿಂದ ಖನ್ನತೆಗೆ ಒಳಗಾಗಿರುತ್ತಾರೆ. ಅಂಥವರಿಗೆ ಸ್ತನಗಳ ಗಾತ್ರವನ್ನು ಅವರ ದೇಹಕ್ಕೆ ಹೊಂದಾಣಿಕೆಯಾಗುವಂತೆ ಮಾಡುವುದರಿಂದ ಅವರು ಸಾಮಾನ್ಯ ಜೀವನ ನಡೆಸಲು ಅನುಕೂಲವಾಗುತ್ತದೆ. ಸಿಲಿಕಾನ್ ಇಂಪ್ಲಾಂಟ್ ನಂತರ ಹಾಲುಣಿಸುವುದಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಸ್ತನದ ಕ್ಯಾನ್ಸರ್ ಕೂಡ ಸುಳಿಯುವುದಿಲ್ಲ. ಒಟ್ಟಾರೆ ಇದರಿಂದ ಯಾವುದೇ ಸಮಸ್ಯೆ ಬರುವುದಿಲ್ಲ.
ಡಿಂಪಲ್ ಕ್ರಿಯೇಷನ್: ಇತ್ತೀಚಿನ ದಿನಗಳಲ್ಲಿ ಬಹುಬೇಡಿಕೆಯಾಗಿರುವ ಕಾಸ್ಮೆಟಿಕ್ ಸರ್ಜರಿಗಳೆಂದರೆ; ಡಿಂಪಲ್ ಕ್ರಿಯೇಷನ್ (ಕೆನ್ನೆಗುಳಿ) ಮಾಡುವುದು ಹಾಗೂ ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸಿ ಸುಂದರಗೊಳಿಸುವುದು. ಇತ್ತೀಚಿನ ದಿನಗಳಲ್ಲಿ ಕಾಸ್ಮೆಟಿಕ್ ಜನೈಟಲ್ ಸರ್ಜರಿಗಳೂ ಬೇಡಿಕೆಯಲ್ಲಿರುತ್ತವೆ.
ಒಂದು ದಿನದ ಶಸ್ತ್ರಚಿಕಿತ್ಸೆ: ಕಾಸ್ಮೆಟಿಕ್ ಸರ್ಜರಿ ಎಂಬುದು ಕೇವಲ ಒಂದು ದಿನದ ಶಸ್ತ್ರಚಿಕಿತ್ಸೆಯಾಗಿದ್ದು, ಕೆಲವೇ ದಿನಗಳಲ್ಲಿ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಈ ಶಸ್ತ್ರಚಿಕಿತ್ಸೆಯಲ್ಲಿ ನೋವು ಕಡಿಮೆಯಾಗಿರುತ್ತದೆ ಹಾಗೂ ಯಾವುದೇ ಸಮಸ್ಯೆಯಿಲ್ಲದಂತೆ ತಮ್ಮ ಮುಂದಿನ ಜೀವನವನ್ನು ಸುಂದರವಾಗಿಸಿಕೊಳ್ಳಬಹುದು ಎಂದು ಡಾ. ಗಿರೀಶ್ ವಿವರಿಸಿದ್ದಾರೆ.
ಮತ್ತಷ್ಟು ಮಾಹಿತಿಯನ್ನು www.curlsncurves.comನಲ್ಲಿ ಪಡೆಯಬಹುದು ಅಥವಾ ಡಾ. ಗಿರೀಶ್ ಅವರ ಮೊ. 8088400400ಗೆ ಕರೆ ಮಾಡಿ ಇಲ್ಲವೆ ವಾಟ್ಸಾಪ್: 9448571216 ಮೂಲಕ ಸಂಪರ್ಕಿಸಿ.
– ಗೋಪಾಲ್ ತಿಮ್ಮಯ್ಯ