Advertisement

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

04:16 AM Nov 13, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಲೋಕಾಯುಕ್ತ ಪೊಲೀಸರು ಭ್ರಷ್ಟರ ಬೇಟೆ ಮುಂದುವರಿಸಿದ್ದು, ಮಂಗಳವಾರ ರಾಜ್ಯಾದ್ಯಂತ ಏಕಕಾಲಕ್ಕೆ 8 ಅಧಿಕಾರಿಗಳಿಗೆ ಸೇರಿದ 37 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ದಾಳಿಗೆ ಒಳಗಾದ ಅಧಿಕಾರಿಗಳ ಬಳಿ 22.50 ಕೋಟಿ ರೂ. ಮೌಲ್ಯದ ಆದಾಯ ಮೀರಿದ ಆಸ್ತಿ ಪತ್ತೆಯಾಗಿದೆ.

Advertisement

ಕರ್ನಾಟಕ ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಳಗಾವಿಯಲ್ಲಿ 2, ಹಾವೇರಿ, ದಾವಣಗೆರೆ, ಬೀದರ್‌, ಮೈಸೂರು, ರಾಮನಗರ ಮತ್ತು ಧಾರವಾಡದಲ್ಲಿ ತಲಾ ಒಂದರಂತೆ ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 8 ಸರಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ರಾಮನಗರದ ಕೆಎಸ್ಸಾರ್ಟಿಸಿ ನಿವೃತ್ತ ಅಧಿಕಾರಿ ಪ್ರಕಾಶ್‌ ವಿ. ಮನೆ ಮೇಲೆಯೂ ದಾಳಿ ನಡೆದಿದ್ದು, ಒಟ್ಟು 4.26 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಎಲ್ಲೆಲ್ಲಿ ದಾಳಿ?
ಬೆಳಗಾವಿ, ಹಾವೇರಿ, ದಾವಣ ಗೆರೆ, ಬೀದರ್‌, ಮೈಸೂರು, ರಾಮನಗರ ಮತ್ತು ಧಾರವಾಡ ಜಿಲ್ಲೆಗಳ ಒಟ್ಟು 37 ಸ್ಥಳಗಳಲ್ಲಿ ದಾಳಿ.

ಬಾಡಿಗೆ ಮನೆಯಲ್ಲೂ ಹಣ
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಟ್ಠಲ ಶಿವಪ್ಪ ಢವಳೇಶ್ವರ ಮನೆ ಮೇಲೆ ದಾಳಿ ನಡೆದಿದ್ದು, ಅವರ ಕಚೇರಿಯಲ್ಲೂ ದಾಖಲೆ  ಪರಿಶೀಲಿ ಸಿದರು. 3 ತಿಂಗಳ ಹಿಂದೆಯಷ್ಟೇ ಅಕ್ರಮ ವಾಗಿ ಹಣ ಸಾಗಿಸುತ್ತಿದ್ದ ವೇಳೆ ರಾಮದುರ್ಗ ಚೆಕ್‌ಪೋಸ್ಟ್‌ನಲ್ಲಿ ವಿಟ್ಠಲ ಢವಳೇಶ್ವರ ಸಿಕ್ಕಿಬಿದ್ದಿ ದ್ದರು. ಆಗ ದಾಖಲೆ ಇಲ್ಲದ 1.10 ಕೋಟಿ ರೂ. ಪತ್ತೆಯಾಗಿತ್ತು. ಹೀಗಾಗಿ ಈಗ ಅವರ ಮನೆ, ಕಚೇರಿ ಮೇಲೆ ದಾಳಿ ಮಾಡ ಲಾಗಿದೆ. ನಿಪ್ಪಾಣಿ ನಗರ ದಲ್ಲಿ ರುವ ಅವರ ಬಾಡಿಗೆ ಮನೆ ಯಲ್ಲಿಯೂ ದಾಖಲೆ ಇಲ್ಲದ ಹಣ ಸಿಕ್ಕಿದೆ ಎಂದು ತಿಳಿದು ಬಂದಿದೆ.

9 ಲಕ್ಷ ರೂ. ಗಂಟು ಕಟ್ಟಿ ಎಸೆದ ಕಾಶೀನಾಥ!
ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ, ಹಿರೇಕೆರೂರ ಉಪವಿಭಾಗದ ಎಇ ಕಾಶೀನಾಥ ಭಜಂತ್ರಿ ಲೋಕಾಯುಕ್ತ ದಾಳಿ ವೇಳೆ 9 ಲಕ್ಷ ರೂ. ಹಣವನ್ನು ಗಂಟು ಕಟ್ಟಿ ಕಿಟಕಿ ಮೂಲಕ ಹೊರಗೆ ಎಸೆದ ಘಟನೆ ನಡೆದಿದೆ. ಅಲ್ಲದೆ 2 ಲಕ್ಷ ರೂ. ಹಣವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿದ್ದರು.

Advertisement

ದಾಳಿ ವೇಳೆ ಸಿಕ್ಕ ಆಸ್ತಿಗಳ ವಿವರ
* ವಿಟ್ಠಲ ಶಿವಪ್ಪ ಧವಳೇಶ್ವರ್‌, ಗ್ರಾಮ ಆಡಳಿತಾಧಿಕಾರಿ, ಬೋರೆಗಾವ್‌ ಗ್ರಾಮ, ನಿಪ್ಪಾಣಿ ತಾಲೂಕು, ಬೆಳಗಾವಿ ಜಿಲ್ಲೆ (1.08 ಕೋಟಿ ರೂ.) 4 ಸ್ಥಳಗಳಲ್ಲಿ ಶೋಧ. 1 ವಾಸದ ಮನೆ, 4 ಎಕ್ರೆ ಕೃಷಿ ಜಮೀನು, 1,55,195 ರೂ. ನಗದು, 3,02,049 ರೂ. ಮೌಲ್ಯದ ಚಿನ್ನಾಭರಣ, 3,45,000 ರೂ. ಮೌಲ್ಯದ ವಾಹನಗಳು.

* ವೆಂಕಟೇಶ್‌ ಎಸ್‌. ಮುಜುಂದಾರ್‌, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ, ಕೋರಮಂಗಲ, ಬೆಂಗಳೂರು (2.21 ಕೋಟಿ ರೂ.) 5 ಸ್ಥಳಗಳಲ್ಲಿ ಶೋಧ. 2 ವಾಸದ ಮನೆಗಳು, 1 ಗ್ಯಾಸ್‌ ಗೋಡೌನ್‌, 1 ಎಕ್ರೆ ಕೃಷಿ ಜಮೀನು, 1,42,000 ರೂ. ನಗದು, 39,31,900 ರೂ. ಮೌಲ್ಯದ ಚಿನ್ನಾಭರಣಗಳು, 17,70,000 ರೂ. ಮೌಲ್ಯದ ವಾಹನಗಳು.

* ಕಮಲ್‌ ರಾಜ್‌, ಸಹಾಯಕ ನಿರ್ದೇಶಕ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೈಗಾರಿಕಾ ಪ್ರದೇಶ, ಕರೂರು, ದಾವಣಗೆರೆ. (1.99 ಕೋಟಿ ರೂ.) 4 ಸ್ಥಳಗಳಲ್ಲಿ ಶೋಧ. 6 ನಿವೇಶನಗಳು, 2 ವಾಸದ ಮನೆಗಳು, 1 ಎಕ್ರೆ ಕೃಷಿ ಜಮೀನು, 1,15,000 ರೂ. ನಗದು, 15,79,000 ರೂ. ಮೌಲ್ಯದ ಚಿನ್ನಾಭರಣಗಳು, 32.30 ಲಕ್ಷ ರೂ. ಮೌಲ್ಯದ ವಾಹನಗಳು, 18 ಲಕ್ಷ ರೂ. ಬೆಲೆಬಾಳುವ ಇತರ ವಸ್ತುಗಳು,

* ನಾಗೇಶ್‌ ಡಿ., ಸಾರ್ವಜನಿಕ ಸಂಪರ್ಕ ಅಧಿಕಾರಿ, ಮೈಸೂರು ಸಿಟಿ ಕಾರ್ಪೊರೇಷನ್‌, ಮೈಸೂರು. (2.72 ಕೋಟಿ ರೂ.) 5 ಸ್ಥಳಗಳಲ್ಲಿ ಶೋಧ. 2 ನಿವೇಶನಗಳು, 1 ವಾಸದ ಮನೆ, 98, ಸಾವಿರ ರೂ. ನಗದು, 29,25,360 ರೂ. ಮೌಲ್ಯದ ಚಿನ್ನಾಭರಣಗಳು, 13,61,901 ರೂ. ಮೌಲ್ಯದ ವಾಹನಗಳು, 33,89,455 ರೂ. ಮೌಲ್ಯದ ಇತರ ವಸ್ತುಗಳು.

*ಗೋವಿಂದಪ್ಪ ಹನುಮಂತಪ್ಪ ಭಜಂತ್ರಿ, ಸಹಾಯಕ ಕಾರ್ಯದರ್ಶಿ, ಕೆ.ಐ.ಎ.ಡಿ.ಬಿ., ಲಕ್ಕಮನಹಳ್ಳಿ, ಧಾರವಾಡ ಜಿಲ್ಲೆ. (2.79 ಕೋಟಿ ರೂ.)
7 ಸ್ಥಳಗಳಲ್ಲಿ ಶೋಧ. 3 ನಿವೇಶನ ಗಳು, 1 ವಾಸದ ಮನೆ, 7. 26 ಎಕ್ರೆ ಕೃಷಿ ಜಮೀನು. 41.11 ಲಕ್ಷ ರೂ. ನಗದು, 27,11,300 ರೂ. ಮೌಲ್ಯದ ಚಿನ್ನಾಭರಣಗಳು, 20 ಲಕ್ಷ ರೂ. ಮೌಲ್ಯದ ವಾಹನಗಳು, 6 ಲಕ್ಷ ರೂ. ಮೌಲ್ಯದ ಇತರ ವಸ್ತುಗಳು.

Advertisement

Udayavani is now on Telegram. Click here to join our channel and stay updated with the latest news.

Next