Advertisement

ಇಂದು ಸದನದಲ್ಲೇ ಸಚಿವರೊಬ್ಬರ ಭ್ರಷ್ಟಾಚಾರ ದಾಖಲೆ ಬಯಲು: ಎಚ್‌ಡಿಕೆ

11:45 PM Sep 21, 2022 | Team Udayavani |

ಕಲಬುರಗಿ: ಕಾನೂನನ್ನು ಗಾಳಿಗೆ ತೂರಿ ಆಸ್ತಿ ಮಾಡಿಕೊಂಡಿರುವ ರಾಜ್ಯದ ಸಚಿವರೊಬ್ಬರ ಭ್ರಷ್ಟಾಚಾರ ವನ್ನು ಗುರುವಾರ ವಿಧಾನಸಭೆ ಅಧಿ ವೇಶನದಲ್ಲಿ ದಾಖಲೆ ಸಹಿತ ಬಯಲಿ ಗೆಳೆಯುತ್ತೇನೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ಚಿಂಚೋಳಿ ತಾಲೂಕಿನ ಸಂಘಟನಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರದ ಶೇ.40 ಭ್ರಷ್ಟಾಚಾರ ಈಗಾಗಲೇ ಸಾರ್ವಜನಿಕರಿಗೆ ಅನುಭವ ವಾಗಿದೆ.

ಈಗ ನಾನು ಬಿಡುಗಡೆ ಮಾಡುವ ದಾಖಲೆಗಳು ಸಚಿವರೊಬ್ಬರ ಕರ್ಮಕಾಂಡವಾಗಿದೆ. ನನ್ನನ್ನು ಕೆಣಕಿದವರಿಗೆ ಇದೊಂದು ಮಾದರಿ ಉತ್ತರ. ರೈತರ ಸಬ್ಸಿಡಿ ಹಣದಲ್ಲೂ ಪರ್ಸಂಟೇಜ್‌ ಪಡೆದಿರುವುದು ಹಾಗೂ ಸಚಿವರೊಬ್ಬರು ಸದನದಲ್ಲೇ ಅಧಿಕಾರಿ ತಮ್ಮ ಮಾತು ಎಳ್ಳು ಕಾಳಷ್ಟು ಕೇಳುತ್ತಿಲ್ಲ ಎನ್ನುವುದು ಸರಕಾರದ ಕಾರ್ಯವೈಖರಿಗೆ ಸಾಕ್ಷಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next