ಜೈಪುರ: ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಲು ರಾಜಸ್ಥಾನ ಸರಕಾರ ಹೊಸ ಕಾನೂನು ರೂಪಿಸಿದ್ದು, ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಿಗಳ ವಿರುದ್ಧ ಖಾಸಗಿ ದೂರನ್ನು ಸರಕಾರದ ಪರವಾನಗಿ ಇಲ್ಲದೇ ಕೋರ್ಟ್‌ಗಳು ದಾಖಲಿಸಿಕೊಳ್ಳುವಂತಿಲ್ಲ.
ಅಷ್ಟೇ ಅಲ್ಲ, ಇದು ನಿವೃತ್ತ ಅಧಿಕಾರಿಗಳಿಗೂ ಅನ್ವಯಿಸುತ್ತದೆ. ಅನುಮತು ಕೋರಿ ಅರ್ಜಿ ಸ್ವೀಕರಿಸಿದ ಆರು ತಿಂಗಳೊಳಗೆ ಸರಕಾರ ತನ್ನ ಪ್ರತಿಕ್ರಿಯೆ ನೀಡಬೇಕು. ಪ್ರತಿಕ್ರಿಯೆ ನೀಡದಿದ್ದರೆ, ಅನುಮತಿ ನೀಡಲಾಗಿದೆ ಎಂದು ಪರಿಗಣಿಸಿ ಕೋರ್ಟ್ ಪ್ರಕರಣದ ದಾಖಲಿಸಿಕೊಳ್ಳಬಹುದಾಗಿದೆ. ಈ ಸಂಬಂಧ ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಈ ಅಂಶವನ್ನು ರಾಜಸ್ಥಾನ ಸರಕಾರ ಸಮರ್ಥಿಸಿಕೊಂಡಿದೆ ಕೂಡ.
ಸೋಮವಾರ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುತ್ತದೆ. ಈ ಹೊಸ ನಿಯಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೂ ಅನ್ವಯಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಪೊಲೀಸರು ದೂರಿನ ಮೇರೆಗೆ ಕ್ರಮ ಕೈಗೊಳ್ಳದಿದ್ದರೆ, ತನಿಖೆಗೆ ಆದೇಶಿಸುವಂತೆ ಕೋರಿ ವ್ಯಕ್ತಿಯು ಕೋರ್ಟ್ ಮೊರೆ ಹೋಗಬಹುದು.
ಪ್ರಕರಣವು ವಿಚಾರಣೆಗೆ ಅರ್ಹವಾಗಿದ್ದರೆ, ಸರಕಾರದ ಅನುಮತಿ ಬೇಕಿರುತ್ತದೆ. ಪ್ರಾಮಾಣಿಕ ಅಧಿಕಾರಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಸರಕಾರ ಕೂಡ ಇದೇ ರೀತಿಯ ಬದಲಾವಣೆಗಳನ್ನು ಪ್ರಸ್ತುತ
ಕಾನೂನಿಗೆ ಮಾಡಿತ್ತು.
ಆದರೆ ವಸುಂಧರಾ ರಾಜೆ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಆರೋಪ ಎದುರಿಸುತ್ತಿರುವವರ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸುವಂತಿಲ್ಲ. ಈ ನಿಯಮ ಉಲ್ಲಂ ಸಿದರೆ ಪ್ರತಕರ್ತರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ.