Advertisement

ಮುಳಬಾಗಿಲು ತಾಲೂಕಲ್ಲಿ ವ್ಯಾಪಕ ಭ್ರಷ್ಟಾಚಾರ

05:05 PM Oct 23, 2020 | Suhan S |

ಮುಳಬಾಗಿಲು: ರಾಜ್ಯದ 224 ಕ್ಷೇತ್ರಗಳ ಪೈಕಿ ಮುಳಬಾಗಿಲು ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದೆ ಎಂದು ರಾಜ್ಯ ಜೆಡಿಎಸ್‌ ಮುಖಂಡ ಸಮೃದ್ಧಿ ವಿ.ಮಂಜುನಾಥ್‌ ಆರೋಪಿಸಿದರು.

Advertisement

ನಗರದ ಅವರ ಸ್ವಗೃಹದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿ ನಿಂದ ಬಂದ ಒಂದೇ ವಾರಕ್ಕೆ ಎಚ್‌.ನಾಗೇಶ್‌ ಶಾಸಕರಾಗಿ ಆಯ್ಕೆಯಾಗಿದ್ದರೂ ಮತಹಾಕಿದವರನ್ನು ಮತ್ತು ಊರೂರು ತಲೆಯ  ಮೇಲೆ ಹೊತ್ತುಕೊಂಡು ಮತ ಹಾಕಿಸಿದವರನ್ನೇ ದೂರವಿಟ್ಟು ತಮ್ಮ ಸ್ವಂತ ಹಿತಾಸಕ್ತಿಗಾಗಿ ವರ್ಷಕ್ಕೊಬ್ಬ ಅಧಿಕಾರಿಗಳನ್ನು ಬದಲಾಯಿ ಸುತ್ತಾ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದಲ್ಲಿ ಸಚಿವರಾದರೂ ಒಂದೇ ಒಂದು ಕಾರ್ಯಕ್ರಮದಲ್ಲಿಯೂ ಬಿಜೆಪಿ ಪಕ್ಷದ ಕುರಿತಾಗಲೀ ಅಥವಾ ಸರ್ಕಾರದ ಕಾರ್ಯಕ್ರಮಗಳ ಕುರಿತಾಗಲೀಜನಕ್ಕೆ ತಿಳಿಸದೇ ಇರುವುದು ನಾಚಿಕೆಗೇಡಿತನವಾಗಿದೆ ಎಂದು ಲೇವಡಿ ಮಾಡಿದರು.

ಚೌಡರೆಡ್ಡಿಗೆ ಮತ: ಪ್ರಸ್ತುತ ನಡೆಯುತ್ತಿರುವ ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ನ ತೂಪಲ್ಲಿ ಚೌಡರೆಡ್ಡಿ ಅವರಿಗೆ ತಮ್ಮ ಮೊದಲ ಪ್ರಾಶಸ್ತ್ಯ ಮತ ನೀಡುವ ಮೂಲಕ ಗೆಲ್ಲಿಸಿ ಶಿಕ್ಷಕರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್‌ ಮಾತನಾಡಿದರು. ನಗರ ಘಟಕ ಅದ್ಯಕ್ಷ ತೇಜೋರಮಣ, ವಕ್ತಾರ ಎಂ.ಎಸ್‌. ಶ್ರೀನಿವಾಸರೆಡ್ಡಿ, ಜಂಟಿ ಕಾರ್ಯದರ್ಶಿ ಕವತನಹಳ್ಳಿ ಮುನಿಸ್ವಾಮಿಗೌಡ, ವಮ್ಮಸಂದ್ರ ಮುನಿವೆಂಕಟಪ್ಪ, ನಗರಸಭೆ ಸದಸ್ಯರಾದ ರಿಯಾಜ್‌ ಅಹಮದ್‌, ವಜಾಹತ್‌ ಉಲ್ಲಾಖಾನ್‌, ಡಿ.ಸೋಮಣ್ಣ, ಸರಳಾನವೀನ್‌, ಮುಸ್ತಾಫ‌, ವಜೀರ್‌, ರಾಮಚಂದ್ರ, ಮುನಿರಾಜ್‌, ಗ್ಯಾಸ್‌ ರಘು, ನಾಗೇಶ್‌ ಮುಖಂಡರಾದ ಟಿ.ಎಂ.ನವೀನ್‌, ವಿಜಿ ಸೇರಿದಂತೆ ಹಲವರಿದ್ದರು.

Advertisement

4 ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು :

ಕೆಜಿಎಫ್: ಕೆಜಿಎಫ್ ನಗರವನ್ನು ಪುನಃ ಹಳೇ ವೈಭವಕ್ಕೆ ತರಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮನಸ್ಸು ಮಾಡಿದ್ದಾರೆ. ಚಿನ್ನದ ನಿಕ್ಷೇಪಗಳನ್ನು ಹೊರ ತೆಗೆಯಲು ಈಗಾಗಲೇ ಕಾರ್ಯಾಚರಣೆ ನಡೆದಿದೆ. ಮತ್ತಷ್ಟು ತಂತ್ರಜ್ಞರನ್ನು ಕೇಂದ್ರ ಸರ್ಕಾರ ಕಳಿಸಬೇಕು ಎಂದು ಸಚಿವ ನಾಗೇಶ್‌ ಮನವಿ ಮಾಡಿದರು.

ನಗರದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಎಲ್ಲಾ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ ಎಂದರು.

ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳಬಹುದು.ಅಧ್ಯಕ್ಷ ಕಮಲನಾಥನ್‌ ಎಲ್ಲರನ್ನು ಒಂದಾಗಿಕರೆದುಕೊಂಡು ಹೋಗಬೇಕು ಎಂದು ಹೇಳಿದರು.ವಿವಾದ ಸೃಷ್ಟಿಸಿದ ಅಭ್ಯರ್ಥಿತನ: ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮತಯಾಚನೆ ಮಾಡಲು ಬಂದ ಸಚಿವ ನಾಗೇಶ್‌, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಉಳಿಯಬೇಕಾದರೆ ಸಂಪಂಗಿ ಅವರೇ ಅಭ್ಯರ್ಥಿಯಾಗಬೇಕು ಎಂದರು.

ಕೆಜಿಎಫ್ ಕ್ಷೇತ್ರದಲ್ಲಿ ಬಿಜೆಪಿಯನ್ನು ಹುಟ್ಟು ಹಾಕಿದವರು ಅವರು. ಪಕ್ಷದ ಹಿತದೃಷ್ಟಿಯಿಂದ ಪಕ್ಷ ಉಳಿಸಿಕೊಳ್ಳಬೇಕಾದರೆ, ಬೆಳೆಸಬೇಕಾದರೆ ಅವರೇಬೇಕು. ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕಾದರೆ ಅವರಿಗೇ ಟಿಕೆಟ್‌ ಕೊಡಬೇಕು ಎಂದರು.

ಈಗಾಗಲೇ ಬಿಜೆಪಿಯಲ್ಲಿ ಹಲವು ಬಣಗಳು ಇದ್ದು, ಮುಂದಿನ ಚುನಾವಣೆಗೆ ಟಿಕೆಟ್‌ ಪಡೆಯಲು ಹಲವಾರು ಮಂದಿ ಪ್ರಯತ್ನದಲ್ಲಿದ್ದಾರೆ.ಇಂತಹ ಸಂದರ್ಭದಲ್ಲಿ ಸಚಿವರು ನಿರ್ದಿಷ್ಟಅಭ್ಯರ್ಥಿ ಪರವಾಗಿ ಬ್ಯಾಟಿಂಗ್‌ ಮಾಡಿದ್ದು ಎಲ್ಲರ ಹುಬ್ಬೇರಿಸಿದೆ.

ಈ ಮಧ್ಯೆ ನಗರದಲ್ಲಿ ಚುನಾವಣೆ ನಿಮಿತ್ತ ಆಗಮಿಸಿದ್ದ ರಾಜ್ಯ ಬಿಜೆಪಿ ಕಾರ್ಯದರ್ಶಿ ಕೇಶವಪ್ರಸಾದ್‌, ಈ ವಾದವನ್ನು ತಳ್ಳಿ ಹಾಕಿದ್ದಾರೆ. ಬಿಜೆಪಿಯಲ್ಲಿ ಈ ವ್ಯವಸ್ಥೆ ಇಲ್ಲ. ರಾಜಕೀಯ ನಿಂತ ನೀರಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂಬಹಳಷ್ಟು ಕಾಲ ಇದೆ. ಚುನಾವಣೆ ಸಂದರ್ಭದಲ್ಲಿಪರಿಸ್ಥಿತಿಗೆ ಅನುಗುಣವಾಗಿ ವರಿಷ್ಠರು ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಇಲ್ಲಿ ಪಕ್ಷ ಮುಖ್ಯ, ಅಭ್ಯರ್ಥಿ ಅಲ್ಲ. ಸಚಿವರು ಈ ರೀತಿ ಯಾಕೆ ಹೀಗೆಮಾತನಾಡಿದರೋ ತಿಳಿದಿಲ್ಲ. ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನ ಮಾಡಿದರು.

ಬಿಜೆಪಿ ನಗರಾಧ್ಯಕ್ಷ ಕಮಲನಾಥನ್‌, ಸುರೇಶ್‌ ನಾರಾಯಣಕುಟ್ಟಿ, ನಯನಾ ರವಿ ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next