Advertisement
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸರ್ಕಾರಗಳ ಅವಧಿಯಲ್ಲಿ ನಡೆದಿರುವ ಹಗರಣ, ಭ್ರಷ್ಟಾಚಾರದ ತನಿಖೆ ಮಾಡಿಸುತ್ತೇವೆ ಎಂದು ಸಿದ್ದರಾಮಯ್ಯ ಬ್ಲ್ಯಾಕ್ ಮೇಲ್ ಮಾಡುವ ಬದಲಿಗೆ ಅವರದ್ದೇ ಸರ್ಕಾರ, ಅಧಿಕಾರ ಇದೆ. ಕಾಂಗ್ರೆಸ್ ಮಾತ್ರವಲ್ಲ ಅಧಿಕಾರ ನಡೆಸಿದ ಎಲ್ಲ ಪಕ್ಷಗಳ ಸರ್ಕಾರದ ಅವಧಿಯಲ್ಲಿನ ಹಗರಣ, ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಲಿ ಬೇಡ ಅಂದವರು ಯಾರು ಎಂದು ಪ್ರಶ್ನಿಸಿದರು.
Related Articles
Advertisement
ಸಿದ್ದರಾಮಯ್ಯನವರೇ 2013 ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದಿರಿ. ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಮೇಲೆ ಆರೋಪ ಮಾಡಿದ್ದಾರೆ, ಅರ್ಕಾವತಿ ಬಡಾವಣೆಯ ಹಗರಣದ ಕಡತವನ್ನು ಜಗದೀಶ ಶೆಟ್ಟರ್ ಕಡತವನ್ನು ತಿರಸ್ಕರಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರದ ಅರ್ಕಾವತಿ ಕಡತಕ್ಕೆ ರೀಡೂ ಅಂತಾ ಮಾಡಿದ್ದೀರಿ. ಮಾಡಿ ಫೈ ಮಾಡಿ, ರೀಡೂ ಮಾಡಿದ್ದೂ ನೀವಲ್ಲವೇ ಎಂದು ಪ್ರಶ್ನಿಸಿದರು.
ಬೆಳೆ ಹಾನಿ ಪರಿಹಾರ ನೀಡುವ ಕಡೆ ಸಿದ್ದರಾಮಯ್ಯ ಸರ್ಕಾರ ಗಮನಹರಿಸಲಿ. ಇಂದಿಗೂ ಬರ ಪರಿಹಾರವನ್ನೇ ಈ ಸರ್ಕಾರ ನೀಡಿಲ್ಲ. ಹಿಂದಿನಿಂದಲೂ ಕೇಂದ್ರದತ್ತ ಬೊಟ್ಟು ಮಾಡುವ ಕೆಲಸ ಸಿದ್ದರಾಮಯ್ಯ ಮಾಡುತ್ತಲೇ ಬಂದಿ ದ್ದಾರೆ. ಈಗಲೂ ಅದನ್ನೇ ಮಾಡದೆ ರೈತರಿಗೆ ಬರ ಪರಿಹಾರ ನೀಡುವ ಮನಸ್ಸು ಮಾಡಲಿ ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಒಂದೇ ಒಂದು ಗ್ರಾಪಂಗೆ ಒಂದು ಮನೆಯನ್ನೂ ಕೊಟ್ಟಿಲ್ಲ. ನಮ್ಮ ಸರ್ಕಾರವಿದ್ದಾಗ ನಮ್ಮ ನಮ್ಮ ಕ್ಷೇತ್ರಕ್ಕೆ 4500 ಮನೆ ತಂದಿದ್ದೆವು. ಸಿದ್ದರಾಮಯ್ಯನವರದ್ದು ದುರಂತದ ಸರ್ಕಾರವಾಗಿದೆ. ಇದೊಂದು ಪಾಪದ ಸರ್ಕಾರವಿದ್ದು, ದಪ್ಪನೆಯ ಚರ್ಮದ ಸರ್ಕಾರವಾಗಿದೆ. ರೈತರ ಬಗ್ಗೆಯೂ ಕಾಳಜಿಯೇ ಇಲ್ಲ, ಜನ ಸಾಮಾನ್ಯರಿಗೂ ಸ್ಪಂದಿಸದ ಸರ್ಕಾರವಾಗಿದೆ ಎಂದು ದೂರಿದರು.