Advertisement

ತಮಿಳುನಾಡು ಪ್ರೀಮಿಯರ್‌ ಲೀಗ್‌ ನಲ್ಲಿ ಫಿಕ್ಸಿಂಗ್‌ ಪ್ರಯತ್ನ? : ಬಿಸಿಸಿಐಗೆ ಆಟಗಾರರ ದೂರು

09:47 AM Sep 17, 2019 | Team Udayavani |

ಚೆನ್ನೈ: ಕೆಪಿಎಲ್‌ ಮಾದರಿಯ ತಮಿಳುನಾಡಿನ ಟಿ ಟ್ವೆಂಟಿ ಕ್ರೀಡಾಕೂಟ ತಮಿಳುನಾಡು ಪ್ರೀಮಿಯರ್‌ ಲೀಗ್‌ (ಟಿಎಂಪಿಎಲ್‌)ಗೆ ಈಗ ಭ್ರಷ್ಟಾಚಾರದ ಕರಿ ನೆರಳು ಬಿದ್ದಿದೆ. ಈ ಬಗ್ಗೆ ಕೆಲವು ಆಟಗಾರರು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ತನಿಖೆ ಆರಂಭವಾಗಿದೆ.

Advertisement

ಈ ಬಾರಿಯ ಟಿಎಂಪಿಎಲ್‌ ಜುಲೈ 19ರಿಂದ ಆಗಸ್ಟ್‌ 15ರವರೆಗೆ ನಡೆದಿತ್ತು. ಈ ಸಮಯದಲ್ಲಿ ಕೆಲ ಆಟಗಾರರಿಗೆ ಅಪರಿಚಿತ ವ್ಯಕ್ತಿಗಳಿಂದ ಫಿಕ್ಸಿಂಗ್‌ ಮಾಡುವಂತೆ ಒತ್ತಾಯಿಸಿ ಮೊಬೈಲ್ ಸಂದೇಶಗಳು ಬಂದಿದ್ದವು. ಈ ವಿಷಯವನ್ನು ಈಗಾಗಲೇ ಆಟಗಾರರು ನಮಗೆ ತಿಳಿಸಿದ್ದು, ತನಿಖೆ ಆರಂಭವಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಅಜಿತ್‌ ಸಿಂಗ್‌ ಹೇಳಿದ್ದಾರೆ.

ನಾವು ಆಟಗಾರರಿಂದ ಹೇಳಿಕೆ ಪಡೆದು ಕೊಂಡಿದ್ದೇವೆ. ಅದನ್ನು ರೆಕಾರ್ಡ್‌ ಕೂಡಾ ಮಾಡಿದ್ದೇವೆ ಎಂದಿರುವ ಅಜಿತ್‌ ಸಿಂಗ್‌ ಆಟಗಾರರ ಹೆಸರನ್ನು ಬಹಿರಂಗಗೊಳಿಸಿಲ್ಲ. ಆದರೆ ಯಾವುದೇ ಅಂತಾರಾಷ್ಟ್ರೀಯ ಆಟಗಾರರು ಇದರಲ್ಲಿಲ್ಲ ಎಂದು ಖಚಿತಪಡಿಸಿದ್ದಾರೆ.

ತಾರಾ ಆಟಗಾರರಾದ ರವಿಚಂದ್ರನ್‌ ಅಶ್ವಿನ್‌, ಮುರಳಿ ವಿಜಯ್‌, ದಿನೇಶ್‌ ಕಾರ್ತಿಕ್‌ ಮುಂತಾದ ಅಟಗಾರರು ತಮಿಳುನಾಡು ಪ್ರೀಮಿಯರ್‌ ಲೀಗ್‌ ನಲ್ಲಿ ಆಡಿದ್ದರು. ಕೂಟದ ಎಲ್ಲಾ ಪಂದ್ಯಗಲು ಚೆನ್ನೈನ ಚೇಪಾಕ್‌ ಸ್ಟೇಡಿಯಂ ನಲ್ಲಿ ನಡೆದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next