Advertisement

ಮಾದರಿ ಬ್ಯಾಂಕ್‌ ಆಗಿ ಕಾರ್ಪ್‌ ಬ್ಯಾಂಕ್‌: ಜೈಕುಮಾರ್‌ ಗರ್ಗ್‌

03:05 AM Jun 29, 2017 | Team Udayavani |

ಮಂಗಳೂರು: ಕಾರ್ಪೊರೇಶನ್‌ ಬ್ಯಾಂಕ್‌ ಸಮಗ್ರ ಬೆಳವಣಿಗೆ ಹಾಗೂ ತನ್ನ ವಿನೂ ತನ ಬ್ಯಾಂಕಿಂಗ್‌ ಸೇವೆಯ ಮೂಲಕ ಮಾದರಿ ಬ್ಯಾಂಕ್‌ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೈಕುಮಾರ್‌ ಗರ್ಗ್‌ ಹೇಳಿದರು. ಅವರು ಬುಧವಾರ ನಡೆದ ಬ್ಯಾಂಕಿನ 20ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ದೇಶದ ಆರ್ಥಿಕತೆಯನ್ನು ನಗದು ಆಧಾರಿತ ವ್ಯವಸ್ಥೆಯಿಂದ ನಗದು ರಹಿತ ವ್ಯವಸ್ಥೆಯ ಕಡೆಗೆ ಕೊಂಡೊಯ್ಯಲು ಕೇಂದ್ರ ಸರಕಾರ ಹಮ್ಮಿಕೊಂಡಿರುವ ಜನಧನ್‌ ಯೋಜನೆ, ಎಲ್ಲರಿಗೂ ಬ್ಯಾಂಕ್‌ ಖಾತೆ ತೆರೆಯಲು ಅವಕಾಶ, ಸಬ್ಸಿಡಿ ಮತ್ತು ಇತರ ಸವಲತ್ತುಗಳನ್ನು ಹಾಗೂ ಹೊಸ ಉತ್ಪನ್ನಗಳನ್ನು ಒದಗಿಸುವ ಮೂಲಕ ನೆರವಾಗಿದೆ ಎಂದು ವಿವರಿಸಿದರು.

ತಂತ್ರಜ್ಞಾನ ಅಳವಡಿಕೆ: ಭದ್ರತಾ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ವ್ಯವಹಾರವನ್ನು ಸರಳೀಕರಿಸಲು ಹೊಸ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಕೋರ್‌ ಬ್ಯಾಂಕ್‌ ಸೊಲ್ಯೂಶನ್‌ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಿ ಹೊಸ ಜನಾಂಗದ ಗ್ರಾಹಕರ ಆಶೆ ಆಕಾಂಕ್ಷೆಗಳನ್ನು ಈಡೇರಿಸಲು ಯತ್ನಿಸಿದೆ ಎಂದರು. ಎಸ್‌ಎಂಎಸ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಸರಳೀಕರಿಸಲು ಏಳು ಭಾಷೆಗಳಲ್ಲಿ ಕಾರ್ಪ್‌ ಅಪ್ನಾ ಆ್ಯಪ್‌ ಉತ್ಪನ್ನವನ್ನು ಪರಿಚಯಿಸಿದೆ ಎಂದರು. ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಮುರಳಿ ಭಗತ್‌, ಇತರ ನಿರ್ದೇಶಕರು, ಅಧಿಕಾರಿಗಳು, ಷೇರುದಾರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next