Advertisement
ಈವೇಳೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡುವ ಮೂಲಕ ನಿಯಮ ಉಲ್ಲಂ ಸಿದ್ದರು. ಸಾರ್ವಜನಿಕವಾಗಿ ಇದಕ್ಕೆ ಸಾಕಷ್ಟು ಆಕ್ಷೇಪವೂ ವ್ಕಕ್ತವಾಯಿತು. ಸರ್ಕಾರ ಹೊರಡಿಸಿರುವ ಆದೇಶವನ್ನು ಉಲ್ಲಂ ಸಿ, ತೆರೆದ ಕಾರಿನಲ್ಲಿ ರೋಡ್ ಶೋ ನಡೆಸಿದ ಇಮ್ರಾನ್ ಪಾಷಾನನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿ, ವಿಕ್ಟೋರಿಯಾ ಆಸ್ಪತ್ರೆಯ ಜೈಲು ವಾರ್ಡ್‌ನಲ್ಲಿ ಇರಿಸಿದ್ದಾರೆ. ಘಟನೆ ಸಂಬಂಧ ಜೆ.ಜೆ.ನಗರ ಪೊಲೀಸರು ಇಮ್ರಾನ್ ಪಾಷಾ ಹಾಗೂ ಮತ್ತಿತರರ ವಿರುದಟಛಿ ಎನ್‌ಡಿಎಂಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಪಾದರಾಯನಪುರ ವಾರ್ಡ್ ನಲ್ಲಿ ಕೋವಿಡ್ 19 ತಗುಲಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು.
Related Articles
Advertisement
ನಿಷೇಧಾಜ್ಞೆ: ಪಾದರಾಯನಪುರ ವಾರ್ಡ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಆದರೂ ಕೆಲ ಕಿಡಿಗೇಡಿಗಳು ಗುಂಪುಗಾರಿಕೆ ಮಾಡುತ್ತಿದ್ದಾರೆ. ಅದರಿಂದ ಅಮಾಯಕ ಜನರಿಗೂ ಸೋಂಕು ತಗುಲುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಜೂನ್ 12ರವರೆಗೆ ಈ ಭಾಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಕಾನೂನು ಕ್ರಮಕ್ಕೆ ಜಮೀರ್ ಆಗ್ರಹ: ಪಾದರಾಯನಪುರ ವಾರ್ಡ್ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಕ್ವಾರಂಟೈನ್ ನಿಂದ ಹೊರ ಬರುವಾಗ ಮೆರವಣಿಗೆ ಮಾಡಿರುವುದು ಖಂಡನೀಯ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್ 19 ಸಂದಿಗ್ಧ ಪರಿಸ್ಥಿತಿಯಲ್ಲಿ ಜನರನ್ನು ಸೇರಿಸಿ ಮೆರವಣಿಗೆ ಮಾಡಿರುವುದು ಬೇಜವಾಬ್ದಾರಿ ನಡವಳಿಕೆಯಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದವರೆ ಈ ರೀತಿ ಮಾಡಿದರೆ ಹೇಗೆ? ಇಮ್ರಾನ್ ಪಾಷಾ ಗುಣಮುಖರಾಗಿ ಬಂದಿದ್ದು ಸಂತೋಷವಾಗಿತ್ತು. ಆದರೆ, ಯುದಟಛಿ ಗೆದ್ದು ಬಂದಂತೆ ಮೆರವಣಿಗೆ ಮಾಡಿರುವುದು ಖಂಡನೀಯ. ಅವರ ವಿರುದಟಛಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇಮ್ರಾನ್ ಪಾಷಾ ಬೇಜವಾಬ್ದಾರಿ ವರ್ತನೆಯಿಂದ ಸೋಂಕು ಭೀತಿ: ಇಮ್ರಾನ್ ಪಾಷಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೇ 30ರಿಂದ ಕೋವಿಡ್ 19 ಸೋಂಕು ಪರೀಕ್ಷೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಕಡ್ಡಾಯವಾಗಿ 14 ದಿನ ಹೋಂಕ್ವಾರಂಟೈನ್‌ಗೆ ಒಳಗಾಗುವಂತೆ ಹಾಗೂ ಯಾರೊಂದಿಗೂ ಸೇರದಂತೆ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದರು. ಆದರೆ, ಆರೋಗ್ಯ ಇಲಾಖೆ ನಿಯಮಗಳನ್ನು ಗಾಳಿಗೆ ತೂರಿ ಇಮ್ರಾನ್‌ಪಾಷಾ ಬೆಂಬಲಿಗರೊಂದಿಗೆ ಮೆರವಣಿಗೆ ಮಾಡಿದ್ದು, ಕೋವಿಡ್ 19 ಸೋಂಕು ಹರಡುವ ಆತಂಕ ಎದುರಾಗಿದೆ.
ಪಾದರಾಯನಪುರದಲ್ಲಿ ಈಗಾಗಲೇ ನಗರದಲ್ಲೇ ಅತೀ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈವರೆಗೆ ಪಾದರಾಯನಪುರದಲ್ಲಿ 67 ಜನರಿಗೆ ಕೋವಿಡ್ 19 ದೃಢಪಟ್ಟಿದ್ದು, ಈ ಭಾಗದಲ್ಲಿ ಸೋಂಕಿಗೆ ಕಡಿವಾಣ ಹಾಕಲು ಬಿಬಿಎಂಪಿ, ಆರೋಗ್ಯ ಇಲಾಖೆ ಹರಸಾಹಸಪಡುತ್ತಿದೆ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿ ಪದೇ ಪದೆ ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವುದಕ್ಕೆ ಬಿಬಿಎಂಪಿಯ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮೇ 29 ರಂದು ಇಮ್ರಾನ್‌ಪಾಷಾಗೆ ಸೋಂಕು ದೃಢಪಟ್ಟಿತ್ತು. ಆಯುಕ್ತ ಭಾಸ್ಕರ್ ರಾವ್ ಅವರು ಎಚ್ಚರಿಕೆ ನೀಡಿದ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದರು.