Advertisement
ಹೊಸ ಹೂಡಿಕೆದೇಶದಲ್ಲಿ ಉತ್ಪಾದನ ವಲಯಕ್ಕೆ ಇನ್ನಷ್ಟು ಬಂಡವಾಳ ಹರಿದು ಬರಲಿದೆ. ಹೊಸ ಕಂಪೆನಿಗಳಿಗೆ ವಿಶೇಷವಾಗಿ ಅ. 1ರ ಅನಂತರ ಸ್ಥಾಪನೆಯಾಗುವುದಕ್ಕೆ ತೆರಿಗೆ ದರ ಶೇ.15ರಷ್ಟು ಮಾತ್ರ ಎಂದು ಘೋಷಣೆ ಮಾಡಲಾಗಿದೆ. ಸರ್ಚಾರ್ಜ್ ಮತ್ತು ಸೆಸ್ ಸೇರಿಸಿ ಈ ಪ್ರಮಾಣ ಶೇ.17ರಷ್ಟು ಆಗಲಿದೆ. ಈ ವರೆಗೆ ಈ ಪ್ರಮಾಣ ಶೇ.25ರಷ್ಟಿತ್ತು. ಇದರೊಂದಿಗೆ ಹೊಸ ಕಂಪೆನಿಗಳು ಕನಿಷ್ಠ ಪರ್ಯಾಯ ಚ (ಎಂಎಟಿ)ಯನ್ನೂ ಪಾವತಿಸಬೇಕೆಂದಿಲ್ಲ. ವಿಶೇಷವಾಗಿ ಐಟಿ ಕಂಪೆನಿಗಳಿಗೆ ಇದರಿಂದ ಪ್ರಯೋಜನವಾಗಲಿದ್ದು, ಹೊಸ ಕಂಪೆನಿಗಳ ಸ್ಥಾಪನೆಗೆ ಹೂಡಿಕೆ ಹರಿದು ಬರುವ ನಿರೀಕ್ಷೆ ಯಿದೆ. ದೇಶೀಯವಾಗಿಯೂ ಹಲವು ಕಂಪೆನಿಗಳು ಹೊಸದಾಗಿ ಸ್ಥಾಪನೆಯಾಗುವ ನಿರೀಕ್ಷೆ ಇದೆ.
ಆರ್ಥಿಕತೆ ಕುಸಿಯುತ್ತಿದೆ ಎಂಬ ಗುಲ್ಲಿನ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಂಡವಾಳ ಹೊರ ಹರಿವು ಹೆಚ್ಚಾಗಿದ್ದು ಇದರಿಂದ ಹೊಸ ಬಂಡವಾಳ ಹೂಡಿಕೆ ಕಡಿಮೆಯಾಗಿತ್ತು. ಇದು ಷೇರು ಮಾರುಕಟ್ಟೆ ಮೇಲೆ ಅಗಾಧ ಪರಿಣಾಮ ಬೀರಿದ್ದರಿಂದ ಸೆ.17ರ ಬಳಿಕ ಎರಡೇ ದಿನಗಳಲ್ಲಿ ಹೂಡಿಕೆದಾರರ 2.72 ಲ. ಕೋಟಿ ರೂ. ಮೌಲ್ಯದ ಸಂಪತ್ತು ಕುಸಿದಿತ್ತು. ಇದನ್ನು ತಡೆಯಲು ಕಾರ್ಪೋರೆಟ್ ತೆರಿಗೆಯನ್ನು ದೇಶೀಯ ಕಂಪೆನಿಗಳಿಗೆ ಶೇ.25.2ರಷ್ಟು ವಿಧಿಸಲಾಗಿದೆ ಇದು ಸಿಂಗಾಪುರದಲ್ಲಿ ವಿಧಿಸುವ ತೆರಿಗೆ ಪ್ರಮಾಣದಷ್ಟೇ ಇದೆ. ಇದರಿಂದ ಇನ್ನಷ್ಟು ಬಂಡವಾಳ ಹೊರ ಹರಿವು ತಪ್ಪಲಿದ್ದು, ದೇಶಕ್ಕೆ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ಚೈನ್ ಎಫೆಕ್ಟ್
ಕಾರ್ಪೋರೆಟ್ ವಲಯಕ್ಕೆ ನೀಡಿದ ರಿಲೀಫ್ನಿಂದ ಒಂದಷ್ಟು ಚೈನ್ ಎಫೆಕ್ಟ್ ಆಗಲಿದೆ ಎಂದು ತಜ್ಞರು ಹೇಳುತ್ತಾರೆ. ಹೊಸ ಹೂಡಿಕೆಗೆ ಬ್ಯಾಂಕ್‌ಗಳಿಂದ ಹೊಸ ಸಾಲ, ಕಂಪೆನಿ ಸ್ಥಾಪನೆಗೆ ಮೂಲಸೌಕರ್ಯ ವೃದ್ಧಿಗೊಳಿಸುವುದು, ಉತ್ಪಾದನೆ ಕಂಪೆನಿಗಳು ಸ್ಥಾಪನೆಗೊಂಡು ಹೊಸ ಉದ್ಯೋಗಾವಕಾಶ, ದೇಶದ ಒಟ್ಟಾರೆ ರಫ್ತಿನಲ್ಲಿ ಏರಿಕೆ ಪರೋಕ್ಷವಾಗಿ ಇದು ಜಿಡಿಪಿ ಏರಿಕೆಗೂ ಕಾರಣವಾಗುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಕಾರ್ಪೋರೆಟ್ ತೆರಿಗೆ ಇಳಿಕೆ ಮಾಡಲಾಗಿದೆ ಮತ್ತು ಇದರಿಂದಾಗುವ ಪರಿಣಾಮ ದೀರ್ಘಾವಧಿಯದ್ದು ಎನ್ನಲಾಗಿದೆ.
Related Articles
ಗ್ರಾಹಕ ಸರಕು ತಯಾರಿಸುವ ಕಂಪೆನಿಗಳು (ನಿತ್ಯೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ವಸ್ತುಗಳು) ತೆರಿಗೆ ಇಳಿಕೆಯಿಂದ ಸಾಕಷ್ಟು ಪ್ರಯೋಜನ ಪಡೆಯಲಿದೆ. ಕಳೆದ ಕೆಲವು ತಿಂಗಳಿಂದ ಮಾರುಕಟ್ಟೆ ಕುಸಿದಿದ್ದು, ತಯಾರಿಸಿದ ವಸ್ತುಗಳು ಮಾರಾಟವಾಗದೆ ಕೋಟ್ಯಂತರ ರೂ. ನಷ್ಟದಲ್ಲಿವೆ. ಹೊಸ ತೆರಿಗೆ ಕ್ರಮದಿಂದ ಕಂಪೆನಿಗಳು ಉತ್ಪನ್ನಗಳ ಬಗ್ಗೆ ಹೆಚ್ಚಿನ ಪ್ರಚಾರ, ದರ ಕಡಿತ ಅನ್ವಯಿಸಲು ಸಾಧ್ಯವಾಗಲಿದೆ. ಇದರಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆ ಇದೆ.
Advertisement
ಜಿಎಸ್‌ಟಿ ದರ ಕಡಿತ ಬಗ್ಗೆ ಆಲೋಚನೆ ಏಕಿಲ್ಲ?ಕಾರ್ಪೊರೆಟ್ ತೆರಿಗೆ ಇಳಿಕೆ ಬದಲಿಗೆ ಜಿಎಸ್‌ಟಿ ದರ ಕಡಿತ ಮಾಡಿದ್ದರೆ, ಕಂಪೆನಿಗಳಿಗೆ ಉತ್ತೇಜನ ಸಿಗುತ್ತಿತ್ತಲ್ಲವೇ ಎಂಬ ಪ್ರಶ್ನೆ ಬರಬಹುದು. ಇದು ಸರಿಯಾದ್ದೇ ಆದರೂ ಸದ್ಯ ಆರ್ಥಿಕತೆಗೆ ಏನಾಗಿದೆ ಎಂದು ತಿಳಿಯುವ ಯತ್ನ ಸರಕಾರದ್ದಿರಬಹುದು. ಕಾರ್ಪೊರೆಟ್ ತೆರಿಗೆ ಕಡಿತದಿಂದ ತತ್‌ಕ್ಷಣದ ಪರಿಣಾಮ ಬಂಡವಾಳ ಹೂಡಿಕೆ ಮೇಲೆ ಆಗುತ್ತದೆ. ಇದು ಹೂಡಿಕೆ ಹೆಚ್ಚಿಸಲು ಕಾರಣವಾಗುತ್ತದೆ. ಇನ್ನು ಜಿಎಸ್‌ಟಿ ದರ ಕಡಿತದ ನಿರ್ಧಾರ ಕೇವಲ ಕೇಂದ್ರ ಸರಕಾರದ್ದು ಮಾತ್ರವಲ್ಲ, ಇದಕ್ಕೆ ರಾಜ್ಯಗಳ ಸಮ್ಮತಿಯೂ ಬೇಕು. ಇನ್ನು ಕಾರ್ಪೊರೆಟ್ ತೆರಿಗೆ ಇಳಿಕೆಯಿಂದ ಒಟ್ಟಾರೆ ಆರ್ಥಿಕತೆ ಮೇಲೆ ಸುದೀರ್ಘಾವಧಿಗೆ ಪರಿಣಾಮ ಬೀರುತ್ತದೆ ಎನ್ನುವಂತಿಲ್ಲ. ಆದರೆ ಕಾರ್ಪೊರೆಟ್ ತೆರಿಗೆಯಿಂದ ಕಂಪೆನಿಗಳಿಗೆ, ಹೂಡಿಕೆದಾರರಿಗೆ ಉತ್ತೇಜನ ಸಿಕ್ಕಿ ಆರ್ಥಿಕತೆ ಚಿಗಿತುಕೊಳ್ಳಲಿದೆ ಎನ್ನುವ ನಿರೀಕ್ಷೆ ಕೇಂದ್ರ ಸರಕಾರದ್ದು. ಚೀನ, ಅಮೆರಿಕದೊಂದಿಗೆ ಟ್ರೇಡ್ ವಾರ್?
ಕಾರ್ಪೋರೆಟ್ ತೆರಿಗೆ ಇಳಿಕೆಯಿಂದ ಲಾಭಾಂಶದಲ್ಲಿ ಹೆಚ್ಚಿನ ಪ್ರಮಾಣ ಕಂಪೆನಿಗಳಿಗೆ ಉಳಿತಾಯವಾಗುತ್ತದೆ. ಹೆಚ್ಚು ತೆರಿಗೆ ಕಟ್ಟುವುದು ತಪ್ಪುತ್ತದೆ. ಈಗಾಗಲೇ ಚೀನ-ಅಮೆರಿಕದ ವ್ಯಾಪಾರ ಯುದ್ಧದಿಂದಾಗಿ ಪರಿಣಾಮ ಕಂಪೆನಿಗಳ ಮೇಲಾಗಿದ್ದು, ದೇಶೀಯ ಕಂಪೆನಿಗಳ ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರಿತ್ತು. ಸದ್ಯ ತೆರಿಗೆ ರಿಲೀಫ್ನಿಂದ ಆಸಿಯಾನ್ ದೇಶಗಳ ಸಮಕ್ಕೆ ತೆರಿಗೆ ಇರಲಿದ್ದು, ಉತ್ಪಾದಕ ಕಂಪೆನಿಗಳು ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರದಲ್ಲಿ ತಯಾರು ಮಾಡಿ ಮಾರಾಟ ಮಾಡಬಹುದು. ಮೋದಿ ಸರಕಾರ ಮುಂದೇನು ಮಾಡಬಹುದು?
· ಖಾಸಗೀಕರಣಕ್ಕೆ ಇನ್ನಷ್ಟು ಮಣೆ; ಇದರಿಂದ ಹೆಚ್ಚಿನ ವಿದೇಶಿ ಬಂಡವಾಳ ಹೂಡಿಕೆ
· ದೇಶೀಯ ರಫ್ತು ಹೆಚ್ಚಿಸಲು ನಿಯಮಗಳ ಸಡಿಲಿಕೆ
· ದೇಶದಲ್ಲಿ ಉದ್ಯಮ ಸ್ಥಾಪನೆಗೆ ಸಾಲ ನೀಡಿಕೆ ಕ್ರಮಗಳ ಸರಳೀಕರಣ
· ಸ್ಟಾರ್ಟಪ್‌ಗ್ಳ ಸ್ಥಾಪನೆ ಉತ್ತೇಜನಕ್ಕೆ ಇನ್ನಷ್ಟು ಕ್ರಮಗಳು
· ರಾಜ್ಯಗಳನ್ನು ವಿಶ್ವಾಸಕ್ಕೆ ಪಡೆದು ಆಯ್ದ ಉತ್ಪನ್ನಗಳ ಜಿಎಸ್‌ಟಿ ದರ ಕಡಿತ
· ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬೆಂಬಲ ಕ್ರಮಗಳು
· ಸಣ್ಣ, ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ; ಈ ಮೂಲಕ ಉದ್ಯೋಗಾವಕಾಶ ಸೃಷ್ಟಿ
· ಕೃಷಿ ಆಧಾರಿತ ಕೈಗಾರಿಕೆಗಳಿಗೆ ಬೆಂಬಲ ಪರಿಣತರು ಏನಂತಾರೆ?
ಆರ್ಥಿಕ ಹಿಂಜರಿತವನ್ನು ನಿಯಂತ್ರಿಸಿ ದೇಶದ ವಿತ್ತೀಯ ಬೆಳವಣಿಗೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕಾರ್ಪೋರೇಟ್ ತೆರಿಗೆ ಕಡಿತ ಒಳ್ಳೆಯ ಬೆಳವಣಿಗೆ. ಇದರಿಂದ ಉಪಖಂಡದ ಇತರ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಪ್ರಮಾಣಕ್ಕೆ ಸಮನಾಗಿ ನಮ್ಮಲ್ಲಿನ ತೆರಿಗೆಗಳನ್ನು ಸರಿತೂಗಿಸಿದಂತಾಗಿದೆ.
– ಶಕ್ತಿಕಾಂತ ದಾಸ್,
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಕೇಂದ್ರದ ಈ ನೂತನ ನಿರ್ಧಾರ ಸ್ವಾಗತಾರ್ಹ. ಈ ಕ್ಷಣಕ್ಕೆ ತೀರಾ ಅಗತ್ಯವೂ ಹೌದು. ಇದರ ಪ್ರಯೋಜನ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.
– ಸಂದೀಪ್ ಸೋಮಾಣಿ,ಅಧ್ಯಕ್ಷರು, ಎಫ್ಸಿಸಿಐ ಈ ಕ್ರಮದಿಂದ ಕಂಪೆನಿಗಳಿಗೆ ಉತ್ತೇಜನ ದೊರೆತಂತಾಗಿದ್ದು, ಹಲವು ರಂಗಗಳಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗಲಿದೆ. ಇಂದು ಈ ನಿರ್ಧಾರ ಮುಂಬರುವ ದಿನಗಳಲ್ಲಿ ಕ್ಷಿಪ್ರ ವಾದ ಆರ್ಥಿಕ ಚೇತರಿಗೆ ಕಾರಣವಾಗಲಿದೆ.
– ವಿಕ್ರಂ ಕಿರ್ಲೊಸ್ಕರ್, ಅಧ್ಯಕ್ಷರು ಸಿಐಐ ಕಾರ್ಪೋರೆಟ್ ತೆರಿಗೆಯನ್ನು ಕಡಿತಗೊಳಿಸಿದ್ದರಿಂದ ಉದ್ಯಮ ಸ್ಪಲ್ಪ ನಿರಾಳವಾಗಬಹುದು. ಇದು ತನ್ನ ಬೆಳವಣಿಗೆ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದ್ದು, ಹೂಡಿಕೆ ಮತ್ತು ಔದ್ಯೋಗಿಕ ಕ್ಷೇತ್ರಕ್ಕೆ ಪುನರ್ ಜೀವನ ಲಭಿಸಲಿದೆ.
– ಡಾ| ಓಂಕಾರ್ ರೈ, ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಇಂಡಿಯಾದ ಸಿಇಒ ಈ ಬೆಳವಣಿಗೆ ಅನಿರೀಕ್ಷಿತವಾಗಿದ್ದು, ಮಾರುಕಟ್ಟೆ ವಲಯದಲ್ಲಿ ದೀರ್ಘಾವಧಿ ಬದಲಾವಣೆ ಆಗಲಿದೆ. ಜತೆಗೆ ವ್ಯಾಪಾರ-ವಹಿವಾಟಿನಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ನೆರವಾಗಲಿದೆ.
ಮುಸ್ತಫಾ ನದೀಮ್, ಸಿಇಒ ಎಪಿಕ್ ರಿಸರ್ಚ್. ಹಣಕಾಸು ಸಚಿವರ ಈ ನಿರ್ಧಾರ ಭಾರತದ ಆರ್ಥಿಕ ವ್ಯವಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡತೆ ಭಾಸವಾಗುತ್ತಿದೆ. ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಉತ್ತಮ ದಾರಿಯಾಗಿದೆ.’
– ವಿ.ಕೆ. ವಿಜಯ್ ಕುಮಾರ್, ಜಿಯೋಜಿತ್ ಫೈನಾಶಿಯಲ್ ಸರ್ವಿಸ್ ಈ ಕ್ರಮದಿಂದ ನಿಧಾನವಾಗುತ್ತಿದ್ದ ಆರ್ಥಿಕತೆ, ಮಾರುಕಟ್ಟೆ ಚಿಗುರಲು ಉತ್ತೇಜನ ನೀಡಿದೆ. ತೆರಿಗೆ ಕಡಿತದಿಂದ ಭಾರತೀಯ ಕಂಪೆನಿಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲು ಪ್ರಯೋಜನವಾಗಲಿದೆ.
– ಸಂಜೀವ್ ಹೂಡಾ, ಸಂಶೋಧನ ಮುಖ್ಯಸ್ಥರು, ಶೇರ್‌ಖಾನ್ ಆರ್ಥಿಕ ಸುಧಾರಣೆ ಘೋಷಿಸಿದ್ದೇನು? ಆಗಿದ್ದೇನು?
ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಹೆಚ್ಚುವರಿಯಾಗಿ 70 ಸಾವಿರ ಕೋಟಿ ರೂ.
ಸಾಲದ ಪ್ರಮಾಣ ಹೆಚ್ಚಳ. ಗ್ರಾಹಕರಿಗೆ ಸುಲಭ ಸಾಲ ದೊರೆಯಲು ಸಾಲ ಮೇಳಗಳ ಆಯೋಜನೆಗೆ ಸರಕಾರ ಸೂಚನೆ.
ಮುಂದಿನ ಐದು ವರ್ಷಗಳಲ್ಲಿ ಮೂಲ ಸೌಕರ್ಯ ವೃದ್ಧಿಗೆ 100 ಲಕ್ಷ ಕೋಟಿ ರೂ.ಗಳ ಹೂಡಿಕೆ.
ಮೂಲಸೌಕರ್ಯ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಪೂರಕ ಕ್ರಮಗಳು.
ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯಲು ರೆಪೋ ದರ ಇಳಿಕೆ.
ಮನೆ ಸಾಲ ಮತ್ತು ವಾಹನ ಸಾಲ ಪಡೆಯುವ ಸಂದರ್ಭ ರೆಪೋ ದರಕ್ಕೆ ಪೂರಕವಾಗಿ ಬಡ್ಡಿದರಗಳ ಅನ್ವಯ. ಸಾಲಗಳ ಇಎಂಐ ದರ ಕಡಿಮೆ. ಅ.1ರಿಂದ ಎಸ್‌ಬಿಐನಲ್ಲಿ ಜಾರಿ
ಕಾರುಗಳ ನೋಂದಣಿ ಶುಲ್ಕ ಹೆಚ್ಚಳ ಪ್ರಸ್ತಾವ ಮುಂದಕ್ಕೆ.
ಕಾರು ಖರೀದಿದಾರರಿಗೆ ಅನುಕೂಲ. ಹಳೇ ಶುಲ್ಕವೇ ಮುಂದುವರಿಕೆ
ಬಿಎಸ್ 4 ವಾಹನಗಳು 2020 ಮಾರ್ಚ್ ವರೆಗೆ ವಿಸ್ತರಣೆ.
ಮಾರಾಟವಾಗದೆ ಉಳಿದ ಬಿಎಸ್4 ಕಾರು ಮಾರಾಟಕ್ಕೆ ಅವಕಾಶ, ಗ್ರಾಹಕರಿಗೆ ದರ ಕಡಿತದ ಆಫರ್.
30 ದಿನದಲ್ಲಿ ಜಿಎಸ್‌ಟಿ ಪ್ರಕ್ರಿಯೆಗೆ ನಿರ್ಧಾರ.
60 ದಿನಗಳಲ್ಲಿ ಜಿಎಸ್‌ಟಿ ರಿಟರ್ನ್ಸ್ ಲಭಿಸಲಿದ್ದು, ಸಣ್ಣ ಉದ್ದಿಮೆಗಳಿಗಿದ್ದ ಹಣಕಾಸಿನ ಕೊರತೆ ನಿವಾರಣೆ.
ಗೃಹಸಾಲಕ್ಕೆ ಉತ್ತೇಜನಕ್ಕೆ ಕ್ರಮ
ಗೃಹ ಸಾಲ ಪಡೆಯಲು ಸುಲಭ ನೀತಿ. ರೆಪೋ ದರದನ್ವಯ ಬಡ್ಡಿ ಜತೆಗೆ ಮಾಸಿಕ ಇಎಂಐ ದರ ಇಳಿಕೆ.
ವಿದೇಶಿ ಹೂಡಿಕೆಕೆದಾರರ ಮೇಲಿನ ತೆರಿಗೆಗಳು ರದ್ದು.
ಹೂಡಿಕೆ ಪ್ರಮಾಣದಲ್ಲಿ ಚೇತರಿಕೆ ಸಾಧ್ಯತೆ. ಮುಂದಿನ ದಿನಗಳಲ್ಲಿ ಫಲಕೊಡುವ ನಿರೀಕ್ಷೆ