Advertisement

ಕಾರ್ಪೊರೇಟ್‌ ಕ್ರಿಕೆಟ್‌: ಫೋರಂ ಮಾಲ್‌ ಕ್ವಾರ್ಟರ್‌ಫೈನಲಿಗೆ

06:05 AM Nov 24, 2017 | Harsha Rao |

ಮಂಗಳೂರು: ಇಲ್ಲಿನ ಬ್ರ್ಯಾಂಡ್‌ ವಿಷನ್‌ ಇವೆಂಟ್‌ ಸಂಸ್ಥೆಯು ಅಡ್ಯಾರ್‌ನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಆಯೋಜಿಸಿದ ಎಕೆ ಕಾರ್ಪೊರೇಟ್‌ ಕ್ರಿಕೆಟ್‌ ಬ್ಯಾಶ್‌ ಕೂಟದಲ್ಲಿ ಮರಿಯನ್‌ ಪ್ರೊಜೆಕ್ಟ್ ಮತ್ತು ಪರ್‌ಫಾರ್ಮ್ ಗ್ರೂಪ್‌ ತಂಡದ ವಿರುದ್ಧ ಗೆಲುವು ಸಾಧಿಸಿದ ಫೋರಂ ಮಾಲ್‌ ತಂಡವು ಕ್ವಾರ್ಟರ್‌ಫೈನಲಿಗೇರಿದೆ. 
ಸಹ್ಯಾದ್ರಿಯ ನೂತನ ಹುಲ್ಲುಹಾಸಿನ ಕ್ರೀಡಾಂಗಣದಲ್ಲಿ ನಡೆದ ಈ ಕೂಟದ ಪಂದ್ಯದಲ್ಲಿ ಪ್ರೊಜೆಕ್ಟ್ ತಂಡ 54 ರನ್‌ ಗಳಿಸಿದ್ದರೆ ಫೋರಂ ತಂಡ ದಾಮೋದರ್‌ ಅವರ ಉತ್ತಮ ಆಟದಿಂದಾಗಿ 4 ವಿಕೆಟ್‌ ನಷ್ಟದಲ್ಲಿ ಜಯ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಪರ್‌ಫಾರ್ಮ್ ನೀಡಿದ 76 ರನ್‌ ಸವಾಲನ್ನು ಫೋರಂ ತಂಡ 2 ವಿಕೆಟ್‌ ನಷ್ಟದಲ್ಲಿ ಗುರಿ ತಲುಪಿತು. 35 ರನ್‌ ಗಳಿಸಿದ ಜೋಯೆಲ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

ಪರ್‌ಫಾರ್ಮ್ ತಂಡ ದಿನದ ಅಂತಿಮ ಪಂದ್ಯದಲ್ಲಿ ಮರಿಯನ್‌ ಪ್ರೊಜೆಕ್ಟ್ ತಂಡವನ್ನು ಸೋಲಿಸಿತ್ತು. ಪರ್‌ಫಾರ್ಮ್ ತಂಡ 78 ರನ್‌ ಗಳಿಸಿದ್ದರೆ ಮರಿಯನ್‌ ತಂಡ ಕೇವಲ 43 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ರೋಚಕವಾಗಿ ಸಾಗಿದ ಇನ್ನೊಂದು ಪಂದ್ಯದಲ್ಲಿ ಎಕೆ ಗ್ರೂಪ್‌ 49 ರನ್‌ ಗಳಿಸಲಷ್ಟೇ ಶಕ್ತವಾಗಿ 6 ರನ್ನಿನಿಂದ ಶರಣಾಯಿತು. 4 ವಿಕೆಟಿಗೆ 55 ರನ್‌ ಹೊಡೆದ ಎದುರಾಳಿ ತಂಡ ಎನೊÌàಯಿ ಕಂಪೆನಿ ಜಯಭೇರಿ ಬಾರಿಸಿತು.

24 ತಂಡಗಳು ಭಾಗವಹಿಸಲಿರುವ ಈ ಕೂಟವನ್ನು ತುಳು ಚಿತ್ರ ತಾರೆ ಅರ್ಜುನ್‌ ಕಾಪಿಕಾಡ್‌ ಉದ್ಘಾಟಿಸಿದರು. ಕಾರ್ಪೋರೇಟ್‌ ಕ್ರಿಕೆಟಿನ ಆರಂಭವು ಸಂಸ್ಥೆಗಳು ಮತ್ತು ನೌಕರರ ನಡುವಣ ಸೌಹಾರ್ದತೆಗೆ ಸೇತುವೆಯಾಗಿ ನಿಲ್ಲಬಲ್ಲುದು ಎಂದು ಪ್ರಾಯೋಜಕರಾದ ಎಕೆ ಸಮೂಹ ಸಂಸ್ಥೆಯ ಅಬ್ದುಲ್‌ ರಝಾಕ್‌ ಹೇಳಿದ್ದಾರೆ. ಕೂಟದ ಪ್ರಮುಖ ರೂವಾರಿ ಸಿರಾಜುದ್ದೀನ್‌, ನಾಗರಾಜ್‌, ನಟಿಯರಾದ ಪೂಜಾ ಶೆಟ್ಟಿ, ಆರಾಧ್ಯ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕೂಟದ ಟ್ರೋಫಿಯನ್ನು ಅನಾ ವರಣಗೊಳಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next