ನವ ದೆಹಲಿ : ದೇಶದಲ್ಲಿ ಹೆಚ್ಚಳವಾಗುತ್ತಿರುವ ಕೋವಿಡ್ ನ ೆರಡನೇ ಅಲೆಯ ಸಂದರ್ಭದಲ್ಲಿ ವಿದೇಶಿ ಮಾಧ್ಯಮಗಳು ಈ ರೂಪಾಂತರಿ ಅಲೆಯನ್ನು ‘ಇಂಡಿಯನ್ ವೇರಿಯಂಟ್’ ಎಂದು ಉಲ್ಲೇಖಿಸಿ ಸುದ್ದಿ ಮಾಡುತ್ತಿರುವುದಕ್ಕೆ ಭಾರಿ ಚರ್ಚೆಯಾಗುತ್ತಿರುವ ಹಿನ್ನೆಯಲ್ಲಿ ವಿಶ್ವ ಸಂಸ್ಥೆ ಹಾಗೆ ಉಲ್ಲೇಖಿಸಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಇದನ್ನೂ ಓದಿ : ಭೀಮಾ ಕೋರೆಗಾಂವ್ ಪ್ರಕರಣ : ಗೌತಮ್ ನವ್ಲಖಾ ಜಾಮೀನು ವಜಾಗೊಳಿಸಿದ ‘ಸುಪ್ರೀಂ’
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್ ಒ) ತನ್ನ 32 ಪುಟಗಳ ದಾಖಲೆಯಲ್ಲಿ ಕೋವಿಡ್ ನ ಬಿ .1.617 ರೂಪಾಂತರಿಯನ್ನು “ಇಂಡಿಯನ್ ವೇರಿಯಂಟ್” ಎಂಬ ಪದದಲ್ಲಿ ಕರೆದಿಲ್ಲವೆಂದು ಸಚಿವಾಲಯ ತಿಳಿಸಿದೆ.
ಕೆಲವು ವರದಿಗಳು ಬಿ .1.617 ಕೋವಿಡ್ ರೂಪಾಂತರಿ ವೈರಸ್ ನನ್ನು ಜಾಗತಿಕ ರೂಪಾಂತರವೆಂದು ಮತ್ತು ನನ್ನು “ಇಂಡಿಯನ್ ವೆರಿಯಂಟ್” ಎಂದು ಕರೆದಿವೆ. ವಿಶ್ವ ಸಂಸ್ಥೆ ತನ್ನ ವರದಿಯಲ್ಲಿ ‘ಇಂಡಿಯನ್’ ಎನ್ನುವ ಶಬ್ದವನ್ನೇ ಬಳಸಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿವೆ.
ಇದನ್ನೂ ಓದಿ : ನಿತ್ಯ ಎರಡು ಟನ್ ಕೋವಿಡ್ ತ್ಯಾಜ್ಯ ಸೃಷ್ಟಿ! ಖಾಸಗಿ ಸಂಸ್ಥೆಯಿಂದ ವೈಜ್ಞಾನಿಕವಾಗಿ ನಿರ್ವಹಣೆ