Advertisement
ಚೀನಾದ ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ, ಮಾರ್ಚ್ 22ರಂದು ಯುನ್ನಾನ್ ಪ್ರದೇಶದಲ್ಲಿ ಹ್ಯಾಂಟಾವೈರಸ್ ಪಾಸಿಟಿವ್ ಎಂದು ಗುರುತಿಸಲ್ಪಟ್ಟಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೂ 32 ಜನರು ಹ್ಯಾಂಟಾವೈರಸ್ ಪೀಡಿತರಾಗಿದ್ದಾರೆ ಎಂದು ವಿವರಿಸಿದೆ.
ಹ್ಯಾಂಟಾ ಹೊಸ ವೈರಸ್ ಅಲ್ಲ. ಇದು ಮುಖ್ಯವಾಗಿ ಇಲಿಗಳ ಮೂಲಕ ಹರಡುವ ವೈರಸ್ ಆಗಿದೆ. ಹೆಗ್ಗಣಗಳ ಮೂಲಕ ಹರಡುವ ಯಾವುದೇ ಕಾಯಿಲೆಗಳಿಗೂ ಹ್ಯಾಂಟಾವೈರಸ್ ಎಂದು ಕರೆಯಲಾಗುತ್ತದೆ. ಅಮೆರಿಕದಲ್ಲಿ ಇದನ್ನು ನ್ಯೂ ವರ್ಲ್ಡ್ ಹ್ಯಾಂಟಾವೈರಸ್ ಎಂದು ಹಾಗೂ ಯುರೋಪ್, ಏಷ್ಯಾದಲ್ಲಿ ಓಲ್ಡ್ ವರ್ಲ್ಡ್ ಹ್ಯಾಂಟಾವೈರಸ್ ಎಂದು ಕರೆಯುತ್ತಾರೆ ಎಂದು ಸಿಡಿಸಿ ವೆಬ್ ಸೈಟ್ ತಿಳಿಸಿದೆ. ಹ್ಯಾಂಟಾವೈರಸ್ ಹರಡೋದು ಹೇಗೆ?
ಹ್ಯಾಂಟಾವೈರಸ್ ಹೊಸ ಸೋಂಕು ಅಲ್ಲ. ಈ ಹಿಂದೆಯೇ ವೈರಸ್ ಪತ್ತೆಯಾಗಿತ್ತು. ಇದು ಸೋಂಕಿತ ಇಲಿಗಳ ಹಿಕ್ಕೆ, ಮೂತ್ರ ಅಥವಾ ಜೊಲ್ಲು ಮನುಷ್ಯನಿಗೆ ತಗುಲಿದರೆ ಸೋಂಕು ಹರಡುತ್ತದೆ. ಹೀಗೆ ಮನುಷ್ಯನೊಳಗೆ ಸೇರುವ ಹ್ಯಾಂಟಾವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಬಳಿಕ ರಕ್ತದ ಕಣಗಳ (ಲೋಮನಾಳ) ಮೇಲೆ ದಾಳಿ ಆರಂಭಿಸುತ್ತವೆ. ತದನಂತರ ರಕ್ತ ಲೀಕ್ ಆಗುತ್ತಾ…ಶ್ವಾಸಕೋಶದಿಂದ ಹೊರಬರಲಾರಂಭಿಸುತ್ತದೆ. ಇದರಿಂದ ಯಾವುದೇ ರೀತಿಯ ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳಬಹುದು.
Related Articles
Advertisement
ಹ್ಯಾಂಟಾವೈರಸ್ ಎರಡು ಹಂತಗಳದ್ದಾಗಿದೆ. ಮೊದಲ ಕುರುಹು ಫ್ಲೂ ರೀತಿ ಜ್ವರ, ಚಳಿ ಇರುತ್ತದೆ. ತಲೆನೋವು, ಸ್ನಾಯು ಸೆಳೆತ, ವಾಂತಿ, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಆರಂಭಿಕ ಹಂತದಲ್ಲಿ ಈ ವೈರಸ್ ಅನ್ನು ಪತ್ತೆಹಚ್ಚುವುದು ಕಷ್ಟ. ನ್ಯೂಮೋನಿಯಾ ಅಥವಾ ಇತರ ಜ್ವರ ಇದ್ದಾಗ ಹ್ಯಾಂಟಾವೈರಸ್ ಪತ್ತೆ ಅಸಾಧ್ಯ. ಆದರೆ ಹತ್ತು ದಿನಗಳ ನಂತರ ಅದರ ಲಕ್ಷಣ ಗಂಭೀರವಾಗುತ್ತದೆ. ಕೆಮ್ಮ, ಉಸಿರಾಟದ ತೊಂದರೆ, ಶ್ವಾಸಕೋಶದೊಳಗೆ ತೊಂದರೆ, ರಕ್ತದೊತ್ತಡ ಕಡಿಮೆಯಾವುದು ಮತ್ತು ಹೃದಯಬಡಿತ ಕೂಡ ನಿಧಾನವಾಗಲಿದೆ ಎಂದು ತಿಳಿಸಿದೆ.
ಕೋವಿಡ್ 19:ಕೋವಿಡ್ 19 ಹೊಸ ವೈರಸ್ ಆಗಿದೆ. ಇದು ದೊಡ್ಡ ತಳಿಯ ವೈರಸ್ ಆಗಿದೆ. ಇದನ್ನು ಸುಲಭವಾಗಿ ಪತ್ತೆಹಚ್ಚಲು ಕಷ್ಟ. ಇದು ಮನುಷ್ಯರಿಂದಲೂ, ಪ್ರಾಣಿಯಿಂದಲೂ ಹರಡುತ್ತವೆ. ಚೀನಾದ ವುಹಾನ್ ನಲ್ಲಿ ಪತ್ತೆಯಾದ ಈ ವೈರಸ್ ಗೆ ಕೆಲವು ಮೀನು ಹಾಗೂ ಪ್ರಾಣಿಗಳಿಂದ ಹರಡಿರುವುದಾಗಿ ವರದಿ ವಿವರಿಸಿದೆ. ಕೋವಿಡ್ 19ಗೆ ಈವರೆಗೂ ಲಸಿಕೆ ಕಂಡು ಹಿಡಿದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕೆಲವೊಂದು ಲಕ್ಷಣಗಳನ್ನು ಗುರುತಿಸಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಕೋವಿಡ್ 19 ಈಗಾಗಲೇ ಜಗತ್ತಿನಾದ್ಯಂತ ಹತ್ತು ಸಾವಿರಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದೆ.