Advertisement

ಕೊರೊನಾ ಎಫೆಕ್ಟ್: ಭಾರತದ ಶೂಟಿಂಗ್‌ ವಿಶ್ವಕಪ್‌ ಕೂಡ ರದ್ದು?

10:24 AM Feb 29, 2020 | sudhir |

ಹೊಸದಿಲ್ಲಿ: ಕೊರೊನಾ ಪರಿಣಾಮದಿಂದಾಗಿ ಭಾರತದಲ್ಲಿ ಮಾ. 15ರಿಂದ 26ರ ವರೆಗೆ ನಡೆಯುವ ಐಎಸ್‌ಎಸ್‌ಎಫ್ ಶೂಟಿಂಗ್‌ ವಿಶ್ವಕಪ್‌ ರದ್ದಾಗುವ ಲಕ್ಷಣಗಳು ಕಾಣುತ್ತಿವೆ. ಈ ಬಗ್ಗೆ ಎನ್‌ಆರ್‌ಎಐ (ಭಾರತ ಶೂಟಿಂಗ್‌ ಸಂಸ್ಥೆ) ಇನ್ನಷ್ಟೇ ಅಧಿಕೃತ ನಿರ್ಧಾರ ಪ್ರಕಟಿಸಬೇಕಿದೆ.

Advertisement

ಭಾರತಕ್ಕೆ ಮರು ಪತ್ರ
ಈಗಾಗಲೇ ಕೂಟದಿಂದ ಬಹ್ರೈನ್‌, ಇರಾನ್‌, ಚೀನ, ತೈವಾನ್‌, ಹಾಂಕಾಂಗ್‌, ಮಕಾವು, ಉತ್ತರ ಕೊರಿಯ, ತುರ್ಕ್‌ಮೆನಿಸ್ಥಾನ ಹಿಂದೆ ಸರಿದಿವೆ. ಹೊಸ ಬೆಳವಣಿಗೆ ಯೊಂದರಲ್ಲಿ ಕೂಟದಲ್ಲಿ ಭಾಗ ವಹಿಸಲು ತುದಿಗಾಲಲ್ಲಿ ನಿಂತಿರುವ ದಕ್ಷಿಣ ಕೊರಿಯ ಮಾತ್ರ, ತಾನು ಏನು ಮಾಡುವುದು, ನಿಮ್ಮ ನಿಲುವೇನು ಖಚಿತಪಡಿಸಿ ಎಂದು ಭಾರತಕ್ಕೆ ಮರುಪತ್ರ ಬರೆದಿದೆ.

ಜಗತ್ತಿನಲ್ಲಿ ಚೀನ ಹೊರತು ಪಡಿಸಿದರೆ ಕೊರೊನಾ ಅತೀ ಹೆಚ್ಚು ಬಾಧಿಸಿರುವುದೇ ದಕ್ಷಿಣ ಕೊರಿಯದಲ್ಲಿ. ಆದರೂ ಕೊರಿಯಾ ತಾನು ಈ ಕೂಟದಲ್ಲಿ ಪಾಲ್ಗೊಳ್ಳಲು ಸಿದ್ಧ ಎಂದಿರುವುದು ಅಚ್ಚರಿ ಮೂಡಿಸಿದೆ.
ಆದರೆ ದಕ್ಷಿಣ ಕೊರಿಯದಿಂದ ಬರುವ ಯಾವುದೇ ವ್ಯಕ್ತಿ ಯನ್ನು ಸತತ 14 ದಿನ ಚಿಕಿತ್ಸೆಗೊಳಪಡಿಸಬೇಕು ಎಂದು ಭಾರತ ಸರಕಾರ ಹೇಳಿದೆ. ಇದು ದ.ಕೊರಿಯಕ್ಕೆ ಸಂಕಷ್ಟ ತರಿಸಿದೆ.

ಆ ತಂಡ ಈಗಾಗಲೇ ವೀಸಾಕ್ಕೆ ಹಣ ಕೊಟ್ಟಾಗಿದೆ, ಟಿಕೆಟ್‌ಗಳನ್ನು ಖರೀದಿಸಿದೆ. ಈಗ 14 ದಿನ ಚಿಕಿತ್ಸೆಗೊಳಗಾಗುವುದು ಸಾಧ್ಯವಿಲ್ಲದ ಮಾತು. ಆದ್ದರಿಂದಲೇ ಅದು ಸ್ಪಷ್ಟನೆ ಕೇಳಿರುವುದು!

Advertisement

Udayavani is now on Telegram. Click here to join our channel and stay updated with the latest news.

Next