Advertisement

ಮೆಕ್ಕಾ , ಮದೀನಾ ಯಾತ್ರೆಗೆ ನಿರ್ಬಂಧ

10:33 PM Mar 20, 2020 | mahesh |

ರಿಯಾದ್‌: ವಿಶ್ವಾದ್ಯಂತ ವ್ಯಾಪಿಸಿರುವ ಮಾರಣಾಂತಿಕ ಕೊರೊನಾ ವೈರಸ್‌ ಸೋಂಕು ಮುಸ್ಲಿಮರ ವಾರ್ಷಿಕ ಹಜ್‌ ಯಾತ್ರೆ ಮತ್ತು ಉಮ್ರಾ ಮೇಲೂ ಪರಿಣಾಮ ಬೀರಿದೆ. ಸದ್ಯಕ್ಕೆ ಮೆಕ್ಕಾ ಮತ್ತು ಮದೀನಾ ಭೇಟಿಗೆ ನಿಷೇಧ ಹೇರಿರುವ ಸೌದಿ ಅರೇಬಿಯಾವು ಇಸ್ಲಾಂನ ಪವಿತ್ರ ಯಾತ್ರಾಸ್ಥಳಕ್ಕೆ ಆಗಮಿಸುವವರ ವೀಸಾಗಳನ್ನು ರದ್ದು ಮಾಡಿದೆ.

Advertisement

ಪ್ರತಿ ವರ್ಷವೂ ಮೆಕ್ಕಾ ಮತ್ತು ಮದೀನಾಗಳಿಗೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಹಜ್‌ ಯಾತ್ರೆಯ ದಿನಗಳನ್ನು ಹೊರತುಪಡಿಸಿಯೂ ಉಮ್ರಾ ಯಾತ್ರೆಗಾಗಿ ಆಗಮಿಸುತ್ತಾರೆ. ಸದ್ಯಕ್ಕೆ ಸೌದಿ ಅರೇಬಿಯಾ ದಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟ ಪ್ರಕರಣಗಳು ವರದಿ ಯಾಗಿಲ್ಲ. ಆದರೆ ನೆರೆಹೊರೆಯ ರಾಷ್ಟ್ರಗಳಲ್ಲಿ, ಅಂದರೆ ಒಟ್ಟಾರೆ ಮಧ್ಯ ಪ್ರಾಚ್ಯದಲ್ಲಿ 240 ಮಂದಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ ಯಾರಿಗೂ ವೀಸಾ ನೀಡದಿರಲು ನಿರ್ಧರಿಸಲಾಗಿದೆ ಎಂದು ಸೌದಿ ಸರಕಾರ ತಿಳಿಸಿದೆ.

ಈ ನಿರ್ಬಂಧ ಎಷ್ಟು ದಿನಗಳ ಕಾಲ ಇರಲಿದೆ ಎಂಬ ಮಾಹಿತಿಯನ್ನು ಸರಕಾರ ನೀಡಿಲ್ಲ. ಹೀಗಾಗಿ ಮೆಕ್ಕಾ ಯಾತ್ರೆ ತೆರಳಲು ಸಿದ್ಧತೆ ನಡೆಸಿದ ಲಕ್ಷಾಂತರ ಮಂದಿ ಗೊಂದಲದಲ್ಲಿ ಸಿಲುಕುವಂತಾಗಿದೆ. ಜಗತ್ತಿನಾದ್ಯಂತ ಕೊರೊನಾ ಪೀಡಿತ ಸಂಖ್ಯೆ ಹೆಚ್ಚುತ್ತಿದ್ದು, ಇರಾನ್‌ನಲ್ಲಿ 26 ಮಂದಿ ಸಾವಿಗೀಡಾಗಿದ್ದಾರೆ. ಚೀನದಲ್ಲಿ ಮೃತರ ಸಂಖ್ಯೆ 2,744ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next