Advertisement

ಆಸ್ಪತ್ರೆಯ 5ನೇ ಮಹಡಿಯಿಂದ ಹಾರಿದ ಕೋವಿಡ್ ರೋಗಿ

05:15 PM Apr 26, 2021 | Team Udayavani |

ಹೈದರಾಬಾದ್ : ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಆಸ್ಪತ್ರೆಯ ಕಟ್ಟಡದ ಮೇಲಿಂದ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Advertisement

ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ. 45 ವರ್ಷ ವಯಸ್ಸಿನ ರೋಗಿಯೋರ್ವ ಕೋವಿಡ್ ಸೋಂಕಿಗೆ ಭಯ ಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೋಮವಾರ ಮುಂಜಾನೆ ಸರಿಸುಮಾರು 3 ಗಂಟೆ ಸಮಯದಲ್ಲಿ ಆಸ್ಪತ್ರೆಯ ಐದನೇ ಮಹಡಿಯಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದಾನೆ.

ಈತನ ಆತ್ಮಹತ್ಯೆಗೆ ಕಾರಣ ಕೋವಿಡ್ ಕುರಿತು ಆತನಲ್ಲಿದ್ದ ಭಯ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇನ್ನು ತೆಲಂಗಾಣದಲ್ಲಿಯೂ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲಿಯ ಸರ್ಕಾರ ಕೋವಿಡ್ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. 18 ವರ್ಷ ವಯಸ್ಸಿನ ಮೇಲ್ಪಟ್ಟವರಿಗೆಲ್ಲರಿಗೂ ಉಚಿತವಾಗಿ ಲೆಸಿಕೆ ನೀಡಲು ನಿರ್ಧರಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next