Advertisement
ಇದೀಗ ಈ ಸೋಂಕು ತಗಲಿದವರ ಸಂಖ್ಯೆ ಎರಡಕ್ಕೇರಿದೆ.ಕೇರಳದಿಂದ ಇತ್ತೀಚೆಗೆ ಚೀನ ಸಂದರ್ಶಿಸಿದ ಆಲಪ್ಪುಳ ನಿವಾಸಿ ವೈದ್ಯಕೀಯ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ಲಕ್ಷಣ ಪತ್ತೆಹಚ್ಚಲಾಗಿದೆ. ಅವರನ್ನು ಆಲಪ್ಪುಳ ವೈದ್ಯಕೀಯ ಕಾಲೇಜಿನ ಐಸೋಲೇಶನ್ ವಾರ್ಡ್ ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚೈನಾದಿಂದ ಹಿಂದಿರುಗಿದ ವಿದ್ಯಾರ್ಥಿನಿಯ ರಕ್ತ ಮಾದರಿಯನ್ನು ಪುಣೆಯಲ್ಲಿರುವ ವೈರೋಲಜಿ ಇನ್‌ಸ್ಟಿಟ್ಯೂಟಿಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿತ್ತು. ಇದರಲ್ಲಿ ಸೋಂಕು ತಗಲಿರುವುದು ಖಾತರಿಪಡಿಸಲಾಗಿದೆ. ಈ ಮೂಲಕ ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ತಗಲಿದವರ ಸಂಖ್ಯೆ ಎರಡಕ್ಕೇರಿದೆ.
Related Articles
Advertisement
ಕೊರೊನಾ ವೈರಸ್ ಬಾಧಿಸಿದಲ್ಲಿ ಎಲ್ಲ ರೀತಿಯಲ್ಲೂ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಜ್ಜಾಗಿರುವುದಾಗಿ ಜಿಲ್ಲಾ ವೈದ್ಯಾಧಿಕಾರಿ ಎ.ಪಿ. ದಿನೇಶ್ ಕುಮಾರ್ ತಿಳಿಸಿದ್ದಾರೆ. ಇನ್ನು ವೈರಸ್ ಬಾಧಿತರನ್ನು ತಪಾಸಣೆ ಮಾಡಲು ಪ್ರತ್ಯೇಕ ಸುರಕ್ಷಾ ಧಿರಿಸು, ಕೈಕವಚ, ಮಾಸ್ಕ್ ಪೂರೈಕೆಯಾಗಿದ್ದು, ಇವುಗಳನ್ನು ಬಳಸುವ ವಿಧಾನದ ಬಗ್ಗೆ ಆಸ್ಪತ್ರೆ ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ.
ವೈರಸ್ ಬಾಧಿತರನ್ನು ಅಥವಾ ಚೀನದಿಂದ ಬಂದವರನ್ನು ಹೆಚ್ಚಿನ ನಿಗಾ ವಹಿಸಿ ತಪಾಸಣೆ ನಡೆಸುವ ಬಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ತರಬೇತಿಯನ್ನು ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ರೋಗ ಲಕ್ಷಣಗಳಿಲ್ಲಕೊರೊನಾ ವೈರಸ್‌ಗೆ ಸಂಬಂಧಿಸಿ ಜಿಲ್ಲೆಯಲ್ಲಿ ನಿಗಾಯಿರಿಸಿದ್ದ ವ್ಯಕ್ತಿಗಳಿಗೆ ರೋಗ ಲಕ್ಷಣಗಳಿಲ್ಲವೆಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ 70ರಷ್ಟು ಮಂದಿಯನ್ನು ಪರೀಕ್ಷಿಸಲಾಗಿದೆ. ಇನ್ನಷ್ಟು ಮಂದಿ ರೋಗ ತಪಾಸಣೆಗಾಗಿ ಆರೋಗ್ಯ ಕೇಂದ್ರಗಳಿಗೆ ತಲುಪಬೇಕೆಂದು ವೈದ್ಯಾಧಿಕಾರಿ ಸೂಚಿಸಿದ್ದಾರೆ. ಚೀನದ ವುಹಾನ್‌ನಿಂದ ಜ. 15ರ ಬಳಿಕ ಜಿಲ್ಲೆಗೆ ತಲುಪಿದವರು ಕಡ್ಡಾಯವಾಗಿ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಜಿಲ್ಲಾ ಆರೋಗ್ಯ ಇಲಾಖೆಯ ಕಂಟ್ರೋಲ್ ಸೆಲ್ 9946000493 ಎಂಬ ನಂಬ್ರದಲ್ಲಿ ಸಂಪರ್ಕಿಸಲು ತಿಳಿಸಲಾಗಿದೆ.