Advertisement

ಸಾರ್ಸ್ ಮೀರಿಸಿದ ಕೊರೊನಾ: ಸಾವಿನ ಸಂಖ್ಯೆ 803ಕ್ಕೆ ಏರಿಕೆ,ತಪ್ಪು ಮಾಹಿತಿ ನೀಡಬೇಡಿ ಎಂದ WHO

07:44 PM Mar 20, 2020 | Mithun PG |

ಚೀನಾ: ಪ್ರತಿನಿತ್ಯ ಸಾವಿನ ಸಂಖ್ಯೆ ಏರುತ್ತಿರುವುದರಿಂದ ಚೀನಾ ತತ್ತರಿಸಿ ಹೋಗಿದ್ದು ಶನಿವಾರ ಒಂದೇ ದಿನ ಹುಬೈ ನಲ್ಲಿ 81 ಜನರು ಮೃತಪಟ್ಟಿದ್ದಾರೆ. ಪರಿಣಾಮವಾಗಿ ಸರಣಿ ಸಾವಿನ ಸಂಖ್ಯೆ 803ಕ್ಕೆ ಏರಿದೆ. ಈ ಹಿಂದೆ 774ಕ್ಕಿಂತಲೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಸಾರ್ಸ್ ವೈರಸ್ ಗಿಂತಲೂ, ಕೊರೊನಾ ವೈರಸ್ ರಣಭೀಕರವಾಗಿದ್ದು ಸಾವಿನ ಸಂಖ್ಯೆ ದಿನೇ ದಿನೇ ಏರುತ್ತಿದೆ.

Advertisement

ಹುಬೈ ಪ್ರಾಂತ್ಯದ ಆರೋಗ್ಯ ಸಂಸ್ಥೆ ಮತ್ತೆ 2,147 ಜನರಿಗೆ ಸೋಂಕು ತಗುಲಿರುವ ಮಾಹಿತಿಯನ್ನು ಖಚಿತಪಡಿಸಿವೆ. ಹಾಗಾಗಿ ಸೋಂಕು ತಗುಲಿದವರ ಪ್ರಮಾಣ 36,690ಕ್ಕೆ ಏರಿಕೆಯಾಗಿದೆ. ಶನಿವಾರ 60 ವರ್ಷದ ಅಮೆರಿಕಾ ಪ್ರಜೆ ವುಹಾನ್ ನಲ್ಲಿ ಮೃತರಾಗಿದ್ದರು.

ವಿಶ್ವ ಆರೋಗ್ಯ ಸಂಸ್ಥೆ (WHO) ಚೀನಾದಿಂದ ವರದಿಯಾದ ಪ್ರಕರಣಗಳ ಸಂಖ್ಯೆ “ಸ್ಥಿರವಾಗುತ್ತಿದೆ” – ಆದರೆ ನಿಖರವಾದ ಮಾಹಿತಿ ಹಲವು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು WHO ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಕೊರೊನಾ ವೈರಸ್ ಕುರಿತು ತಪ್ಪು ಮಾಹಿತಿ  ನೀಡುವುದರಿಂದ ಆರೋಗ್ಯ ಕಾರ್ಯಕರ್ತರಿಗೆ ಕೆಲಸ ನಿರ್ವಹಿಸಲು ಕಠಿಣವಾಗುತ್ತದೆ, ಮಾತ್ರವಲ್ಲದೆ ಗೊಂದಲಕ್ಕೆ ಎಡೆಮಾಡಿಕೋಡುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next