ವಾಷಿಂಗ್ಟನ್ : ಭಯಾನಕ ಕೋವಿಡ್-19 ವೈರಸ್ ಸೋಂಕಿಗೆ ಜಗತ್ತಿನಾದ್ಯಂತ 1ಮಿಲಿಯನ್ ಜನರು ತುತ್ತಾಗಿದ್ದು, 50,000ಕ್ಕಿಂತ ಹೆಚ್ಚು ಜನರು ದಾರುಣವಾಗಿ ಬಲಿಯಾಗಿದ್ದಾರೆ ಎಂದು ಜಾನ್ಸ್ ಹಾಫ್ಕಿಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ.
ಇಂದು ಬೆಳಗ್ಗೆ 7 ಗಂಟೆಯ ವೇಳೆಗೆ 1,015,466 ಜನರು ಈ ಸೋಂಕಿಗೆ ಒಳಗಾಗಿದ್ದರೆ, 53,190 ಜನರು ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ 2,12,229 ಜನರು ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ
ಅಮೆರಿಕಾದಲ್ಲಿ ಈ ಸೋಂಕು ರುದ್ದರ ನರ್ತನ ಮೆರೆಯುತ್ತಿದ್ದು, ಅತೀ ಹೆಚ್ಚು ಸೋಂಕಿತರಿರುವ ದೆಶ ಎಂಬ ಕುಖ್ಯಾತಿಗೆ ಒಳಗಾಗಿದೆ. ಈಗಾಗಲೇ ಯುಎಸ್ ನಲ್ಲಿ ಈ ಮಾರಣಾಂತಿಕ ವೈರಸ್ ಗೆ 5,926 ಜನರು ಬಲಿಯಾಗಿದ್ದಾರೆ. ದುರಂತರವೆಂದರೆ 2,42,182 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸ್ಪೇನ್ ಕೂಡ ಅಕ್ಷರಶಃ ನಲುಗಿಹೋಗಿದ್ದು, ಗುರುವಾರ ಒಂದೇ ದಿನ 950 ಜನರು ಬಲಿಯಾಗಿದ್ದಾರೆ. ಈ ದೇಶದಲ್ಲಿ 1.12.065 ಜನರು ವೈರಾಣುವಿಗೆ ತುತ್ತಾಗಿದ್ದಾರೆ.
ಭಾರತದಲ್ಲೂ ಕೂಡ ಸೋಂಕಿತರ ಸಂಖ್ಯೆ ದಿನೇ ದಿನೇ ಏರುಗತಿಯಲ್ಲಿಯಲ್ಲಿ ಸಾಗಿದ್ದು 2000ರ ಗಡಿ ದಾಟಿದೆ. ಮೃತರ ಸಂಖ್ಯೆಯೂ 53ಕ್ಕೆ ಏರಿದೆ.