Advertisement

ಉತ್ತಮ ಸಂಯೋಜನೆಯ ಪಟ್ಟಾಭಿಷೇಕ- ಇಂದ್ರಜಿತು ಕಾಳಗ 

06:00 AM Aug 31, 2018 | Team Udayavani |

ಯಕ್ಷಸಂಗಮ ಮೂಡಬಿದಿರೆ ಇದರ 19ನೇ ವರ್ಷದ ಅಹೋರಾತ್ರಿ ತಾಳಮದ್ದಳೆ ಕೂಟ ಇತ್ತೀಚೆಗೆ ಸಂಪನ್ನಗೊಂಡಿತು. ಎಂ. ಶಾಂತರಾಮ ಕುಡ್ವರ ಸಂಚಾಲಕತ್ವದ ಯಕ್ಷಸಂಗಮ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಹೋರಾತ್ರಿ ತಾಳಮದ್ದಳೆ ಕೂಟ ಸಂಘಟಿಸುವ ಏಕೈಕ ಸಂಘಟನೆ.

Advertisement

 ಈ ವರ್ಷ ಹಮ್ಮಿಕೊಂಡ ಪಟ್ಟಾಭಿಷೇಕ – ಇಂದ್ರಜಿತು ಕಾಳಗ ಯಕ್ಷಪ್ರೇಮಿಗಳ ಮನಸೂರೆಗೊಂಡಿತು. ಪದ್ಯಾಣ ಗಣಪತಿ ಭಟ್‌ , ಶಂಕರನಾರಾಯಣ ಭಟ್‌ , ಚೈತನ್ಯ , ಗಣೇಶ್‌ ರಾವ್‌ ಹೆಬ್ರಿ , ಪಿ.ಟಿ. ಜಯರಾಮ ಭಟ್‌ , ಕೊಂಕಣಾಜೆ , ಉಳಿತ್ತಾಯ , ರಾಜೇಂದ್ರಕೃಷ್ಣ , ಮುಂತಾದವರಿಂದ ಕೂಡಿದ ಹಿಮ್ಮೇಳ ಹಾಗೂ ಮೂಡಂಬೈಲು , ಕುಂಬ್ಳೆ , ಶಂಭುಶರ್ಮ , ವಾ. ಸಾಮಗ , ಸುಣ್ಣಂಬಳ , ಉಜ್ರೆ , ವರ್ಕಾಡಿ , ವಾ. ರಂಗಭಟ್‌ , ಕಲ್ಲೂರಾಯ , ಗಾಳಿಮನೆ , ರಜನೀಶ ಹೊಳ್ಳ ಇವರೆಲ್ಲರ ಸಮಾಗಮದಲ್ಲಿ ನಡೆದ ಕೂಟ ರಂಜಿಸಿತು. ಪಾತ್ರ ಹಂಚಿಕೆಯನ್ನು ಎಲ್ಲರ ನಿರೀಕ್ಷೆಗಿಂತಲೂ ಭಿನ್ನವಾಗಿ ಮಾಡಿ ಅದರಲ್ಲಿ ಯಶಸ್ವಿಯಾಗಿರುವುದು ಕುಡ್ವರ ಸಂಯೋಜನೆಯ ಪಕ್ವತೆಗೆ ಹಿಡಿದ ಕೈಗನ್ನಡಿ . 

ಪಟ್ಟಾಭಿಷೇಕ ಪ್ರಸಂಗಕ್ಕೆ ಹಿರಿಯ ಕಲಾವಿದರನ್ನೇ ಆಯ್ಕೆಮಾಡಿದ್ದ ಕಾರಣ ಭಾವನಾತ್ಮಕ ಪ್ರಪಂಚ ನಿರ್ಮಾಣಗೊಂಡಿತು.ದಶರಥನಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು ದಶರಥನ ಮಾನಸಿಕ ಸ್ಥಿತಿಯನ್ನು ಉತ್ತಮವಾಗಿ ಚಿತ್ರಿಸಿದರು . ಕೈಕೇಯಿಯ ಕೋರಿಕೆ ಹಾಗೂ ರಾಮನ ಬಗೆಗಿನ ವಾತ್ಸಲ್ಯವನ್ನು ಚೆನ್ನಾಗಿ ಬಿಂಬಿಸುವಲ್ಲಿ ಯಶಸ್ವಿಯಾದರು . ಪೀಠಿಕೆ ತುಸು ದೀರ್ಘ‌ವಾಗಿ ಕಂಡರೂ ಬೇಕಾದಷ್ಟು ಹೊಸ ವಿಚಾರಗಳನ್ನು ಅನಾವರಣಗೊಳಿಸಿ ಪ್ರೇಕ್ಷಕರನ್ನು ವಾಗ್ಮೋಯ ಲೋಕಕ್ಕೆ ಕೊಂಡೊಯ್ದರು .ಮಂಥರೆಯಾಗಿ ಶಂಭುಶರ್ಮರು ಹಾಸ್ಯದೊಂದಿಗೆ ವೈಚಾರಿಕತೆಯನ್ನೂ ಅಳವಡಿಸಿದ ವಿಧಾನ ಮೆಚ್ಚುಗೆ ಗಳಿಸಿತು . ಭರತನಿಗೆ ಪಟ್ಟಾಭಿಷೇಕ ಏಕೆ ಆಗಬೇಕು ಎಂಬ ಮಂಥರೆಯ ಅಭಿಲಾಷೆ ಚೆನ್ನಾಗಿ ಮೂಡಿಬಂತು . 

ರಾಮನ ಬಗ್ಗೆ ಮಾತೃಹೃದಯ ಹೊಂದಿದ ಕೈಕೇಯಿಯು ಮಂಥರೆಯ ದುಷೊºàಧನೆಗಳಿಂದಾಗಿ ಮನ ಕಲುಷಿತಗೊಳ್ಳುವ ಮಲತಾಯಿಯಾಗಿ ಮಲ್ಪೆ ವಾಸುದೇವ ಸಾಮಗರ ಚಿತ್ರಣ ಅದ್ಭುತ ರೀತಿಯಲ್ಲಿ ಅನಾವರಣಗೊಂಡಿತು .ಪ್ರಾರಂಭದಲ್ಲಿ ರಾಮನ ಬಗ್ಗೆ ಮಾತೃ ಹೃದಯದ ವಾತ್ಸಲ್ಯವನ್ನು ಚೆನ್ನಾಗಿ ಚಿತ್ರಿಸಿದ ಸಾಮಗರು , ಮಂಥರೆಯ ದುಬೋಧನೆಗೊಳಗಾಗಿ ಮನೋಚಾಂಚಲ್ಯವುಳ್ಳ ಹೆಣ್ಣಾಗಿ , ತನ್ನ ಸ್ವಾರ್ಥ ಸಾಧನೆಯೇ ಮುಖ್ಯವೆಂದು ಬಿಂಬಿಸಿದ ಕೈಕೇಯಿಯ ಪಾತ್ರ ಚಿತ್ರಣವಂತೂ ಮರೆಯಲಾಗಲಾಗದು.ಕೈಕೇಯಿಯಿಂದಾಗಿ  ಪಟ್ಟಾಭಿ ಭಂಗಗೊಂಡರೂ, ಕೈಕೇಯಿಯ ಬಗ್ಗೆ ಮಾತೃಪ್ರೇಮವನ್ನೇ ಹೊಂದಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರದಲ್ಲಿ ಕುಂಬ್ಳೆ ಸುಂದರ್‌ ರಾವ್‌ ಅವರ ನಿರ್ವಹಣೆ ಮೆಚ್ಚಲೇಬೇಕು.
  
ತಮ್ಮದೇ ಆದ ಸರಳ ,ಸುಂದರ ಪ್ರಾಸಭರಿತ ಭಾಷೆಯಿಂದ ಪ್ರೇಕ್ಷಕರ ಮನ ಸೂರೆಗೊಂಡ ಕುಂಬ್ಳೆಯವರು ಇತ್ತೀಚೆಗಿನ ಕೂಟಗಳಲ್ಲಿ ಸಕ್ರಿಯರಾಗಿಲ್ಲ ಎಂಬ ಅಭಿಮಾನಿಗಳ ವ್ಯಥೆಯನ್ನು ದೂರ ಮಾಡುವಲ್ಲಿ ಯಕ್ಷಸಂಗಮದ ಕಾರ್ಯಕ್ರಮ ಚೇತೋಹಾರಿಯಾಗಿತ್ತು .ಶ್ರೀರಾಮಚಂದ್ರನ ಉದಾತ್ತ ಗುಣಗಳನ್ನು ಪ್ರಕಟಿಸುವಲ್ಲಿ ಕುಂಬ್ಳೆಯವರು ತಮ್ಮ ಹಿಂದಿನ ಕಾಲದ ಕ್ಷಮತೆ ತೋರಿದರು .ಲಕ್ಷ್ಮಣನಾಗಿ ತಾರಾನಾಥ ವರ್ಕಾಡಿಯವರು ದೊರೆತ ಸೀಮಿತ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಪ್ರೇಕ್ಷಕರ ಗಮನ ಸೆಳೆದರು .

ಇಂದ್ರಜಿತು ಕಾಳಗದಲ್ಲಿ ಉಜ್ರೆ ಅಶೋಕ ಭಟ್‌ ಇಂದ್ರಜಿತುವಿನ ಖಳತ್ವವನ್ನು ಚೆನ್ನಾಗಿ ಚಿತ್ರಿಸಿದರು . ಹನುಮಂತನ ಪಾತ್ರದಲ್ಲಿ ವಾಸುದೇವ ರಂಗಾಭಟ್ಟರ ನಿರ್ವಹಣೆ ತೃಪ್ತಿ ತಂದಿತು . ಇಂದ್ರಜಿತು – ಹನುಮಂತರ ವಾದ – ಸಂವಾದಗಳು ಅತ್ಯುತ್ತಮವಾಗಿ ಮಟ್ಟದಲ್ಲಿ ಪ್ರಕಟವಾಯಿತು.

Advertisement

ಮಾಯಾಸೀತೆಯಾಗಿ ವಾದಿರಾಜ ಕಲ್ಲೂರಾಯ ,ರಾಮನಾಗಿ ಡಾ| ಗಾಳಿಮನೆ ವಿನಾಯಕ ಭಟ್‌ , ವಿಭೀಷಣನಾಗಿ ರಜನೀಶ ಹೊಳ್ಳರ ನಿರ್ವಹಣೆಯೂ ಪ್ರಸಂಗದ ಉತ್ಕರ್ಷೆಗೆ ಕಾರಣವಾಯಿತು .ಲಕ್ಷ್ಮಣನ ಪಾತ್ರದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ವೀರರಸ ಸ್ಪುರಿಸುವಲ್ಲಿ ಸಫ‌ಲರಾದರೂ , ಅವರಿಗೆ ಸಿಕ್ಕಿದ ಅವಕಾಶ ಕಡಿಮೆಯಾಯಿತು . ಭಾಗವತಿಕೆಯಲ್ಲಿ ಪದ್ಯಾಣ ಗಣಪತಿ ಭಟ್‌ ಹಾಗೂ ತೆಂಕು – ಬಡಗು ತಿಟ್ಟುಗಳ ಭಾಗವತರಾದ ಹೆಬ್ರಿ ಗಣೇಶ್‌ ರಾವ್‌ ಅವರ ಹಾಡುಗಾರಿಕೆ ಮನ ಸೆಳೆಯಿತು.

ಎಂ.ಗಿರಿಧರ್‌ ಪಿ. ನಾಯಕ್‌ 

Advertisement

Udayavani is now on Telegram. Click here to join our channel and stay updated with the latest news.

Next