Advertisement

Yakshagana ಕಲೆ ಅಪಾಯದಂಚಿನಲ್ಲಿ: ಪ್ರಭಾಕರ ಜೋಷಿ

12:18 AM Mar 19, 2024 | Team Udayavani |

ಹೊನ್ನಾವರ: ಇಂದಿನ ಯಕ್ಷಗಾನ ಅಪಾಯದ ಸ್ವರೂಪದಲ್ಲಿದೆ. ಪಾರಂಪರಿಕ ವೇಷಗಳು ಮತ್ತು ಪೌರಾಣಿಕ ಪ್ರಸಂಗಗಳನ್ನು ಆಧುನಿಕ ಯಕ್ಷಗಾನ ಪರಂಪರೆ ಮರೆಮಾಚಿದೆ. ಈ ಅಪಾಯವನ್ನು ತಡೆಯುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಹಿರಿಯ ವಿಮರ್ಶಕ ಎಂ. ಪ್ರಭಾಕರ್‌ ಜೋಷಿ ಅಭಿಪ್ರಾಯಪಟ್ಟರು.

Advertisement

ಅವರು ಗುಣವಂತೆ ಕೆರಮನೆ ಶಂಭು ಹೆಗಡೆ ಬಯಲು ರಂಗಮಂದಿರದಲ್ಲಿ 14ನೇ ರಾಷ್ಟ್ರೀಯ ನಾಟ್ಯೋತ್ಸವ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಜಾನನ ಹೆಗಡೆ ಅಭಿನಯದ ರಹಸ್ಯವನ್ನು ತಿಳಿದ ಅಪರೂಪದ ಕಲಾವಿದರಾಗಿದ್ದರು ಎಂದ ಅವರು, ಡಾ| ಎಂ.ಎಲ್‌. ಸಾಮಗರು ಗಜಾನನ ಹೆಗಡೆ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂದರು.

ಹಿರಿಯ ಕಲಾವಿದ, ಚಿಂತಕ ಎಂ.ಎಲ್‌. ಸಾಮಗ ಮಲ್ಪೆ ಅವರಿಗೆ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎಂ.ಎಲ್‌. ಸಾಮಗರು ಯಾವ ವೃತ್ತಿ ಕಲಾವಿದನಿಗೂ ಕಡಿಮೆ ಇಲ್ಲದ, ಉಭಯತಿಟ್ಟುಗಳಲ್ಲಿ ಸೈ ಎನಿಸಿ ಕೊಂಡು ಕಲಾ ಪ್ರೌಢಿಮೆ ಮೆರೆದ ಕಲಾವಿದರು ಎಂದು ಹಿರಿಯ ಉಪನ್ಯಾಸಕ ನಾರಾಯಣ ಹೆಗಡೆ ಅವರು ಅಭಿ ನಂದನಾ ನುಡಿಯಲ್ಲಿ ತಿಳಿಸಿದರು.

ಧನ್ಯತಾ ಭಾವ: ಸಾಮಗಪ್ರಶಸ್ತಿ ಸ್ವೀಕರಿಸಿದ ಎಂ.ಎಲ್‌. ಸಾಮಗ ಮಾತನಾಡಿ, ಸಾಮಗ ಮನೆತನಕ್ಕೂ, ಕೆರೆಮನೆ ಮನೆತನಕ್ಕೂ ಅನಾದಿಕಾಲದ ನಂಟಿದೆ. ಆದಕಾರಣ ಸಂತೋಷ ಮತ್ತು ಸಂಕೋಚ ಭಾವದಿಂದ ಪ್ರಶಸ್ತಿಯನ್ನು ಧನ್ಯತಾ ಭಾವದಿಂದ ಸ್ವೀಕರಿಸಿದ್ದೇನೆ. ಕೆರೆಮನೆಯ ಮೂರು ತಲೆಮಾರಿನ ಕಲಾವಿದರ ಸಂಗಡ ವೇಷ ಮಾಡಿ ಸಾರ್ಥಕತೆ ಮತ್ತು ಸಾತ್ವಿಕಭಾವ ಪಡೆದಿದ್ದೇನೆ ಎಂದರು.

Advertisement

ಕೆರಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಪ್ರಶಸ್ತಿ
ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪ, ಹಿರಿಯ ಪ್ರಸಂಗಕರ್ತ ಕಂದಾವರ ರಘುರಾಮ್‌ ಶೆಟ್ಟಿ ಮತ್ತು ಶಿಕ್ಷಣ ತಜ್ಞ, ಬರಹಗಾರ ಡಾ| ಚಂದ್ರಶೇಖರ ದಾಮ್ಲೆ ಅವರಿಗೆ ಕೆರಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉದ್ಯಮಿ, ಕಲಾಪೋಷಕ ಕೃಷ್ಣಮೂರ್ತಿ ಮಂಜರು, ಕಲಾಪೋಷಕರಾದ ವೆಂಕಟರಮಣ ಹೆಗಡೆ, ಅಪೋಲೋ ಆಸ್ಪತ್ರೆ ಸರ್ಜನ್‌ ಡಾ| ನಾರಾಯಣ ಹೆಗಡೆ ಮತ್ತು ಸ್ಥಳೀಯ ಮುಖಂಡ ಗಣಪಯ್ಯ ಗೌಡರು ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next