Advertisement

ಕೊರೊನಾ ನಿರ್ಲಕ್ಷ ಬೇಡ: ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ

10:38 AM Feb 06, 2020 | sudhir |

ಸಾಮಾನ್ಯವಾಗಿ ತ್ವರಿತವಾಗಿ ಹರಡುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ರಾಜ್ಯ ವಿಪತ್ತು ಅಥವಾ ದೇಶ ವಿಪತ್ತು ಎಂದು ಘೋಷಿಸಲಾಗುತ್ತದೆ.ಇಂತಹ ಸಂದರ್ಭದಲ್ಲಿ ಮುಕ್ತವಾಗಿ ಹಾಗೂ ಸುಲಭವಾಗಿ ಔಷಧಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ.

Advertisement

ಹೆಚ್ಚುವರಿ ಕ್ಲಿನಿಕ್‌ಗಳ ಮೂಲಕ ಜನರನ್ನು ಸುಲಭವಾಗಿ ಆರೈಕೆ ಮಾಡಲು ಹೆಚ್ಚುವರಿ ಸಿಬಂದಿಯನ್ನು ನಿಯೋಜಿಸಲಾಗುತ್ತದೆ. ಸಾಂಕ್ರಾಮಿಕರೋಗಗಳು ತೀವ್ರವಾಗಿ ಹರಡುತ್ತಿರುವುದರಿಂದ ಜನರು ಜೀವಾಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಗಟ್ಟಲು ಹೆಚ್ಚುವರಿ ತೀವ್ರ ನಿಗಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದು ಪ್ರತಿಯೊಬ್ಬರು ಚಿಕಿತ್ಸೆ ಪಡೆದುಕೊಳ್ಳಲು ನೆರವಾಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ರೋಗಿಯನ್ನು ಪರೀಕ್ಷೆ ಮಾಡುವುದಕ್ಕೂ ಇಂತಹ ಸಂದರ್ಭ ಪರೀಕ್ಷೆ ಮಾಡುವುದಕ್ಕ ತುಂಬಾ ವ್ಯತ್ಯಾಸಗಳಿರುತ್ತದೆ.

ಯಾವಾಗೆಲ್ಲ ಈ ಹಿಂದೆ ಘೋಷಣೆಯಾಗಿತ್ತು?
2009 ಪ್ರಪಂಚಾದ್ಯಂತ ಹಂದಿ ಜ್ವರ ವ್ಯಾಪಿಸಿದ ಹಿನ್ನೆಲೆ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಈ ವೈರಸ್‌ನಿಂದ 5.75 ಲಕ್ಷಕ್ಕೂ ಹೆಚ್ಚು ಸಾವಿಗೀಡಾಗಿದ್ದರು.

2014 : 2012ರಲ್ಲಿ ಕಾಣಿಸಿಕೊಂಡಿದ್ದ ಪೋಲಿಯೊ ಕಾಯಿಲೆಯ ನಿಯಂತ್ರಣ ವಿಫ‌ಲವಾಗಿದ್ದಲ್ಲದೆ 2014ರ ವೇಳೆಗೆ ಬಲಿಯಾದವರ ಸಂಖ್ಯೆ ದುಪ್ಪಟ್ಟಾಗಿತ್ತು. ಈ ಹಿನ್ನೆಲೆ ಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು.

2016 : 2016ರಲ್ಲಿ ಅಮೆರಿಕಾದ್ಯಂತ ಕಾಣಿಸಿಕೊಂಡ ಜಿಕಾ ರೋಗ ವೇಗವಾಗಿ ಹರಡಿದ ಪರಿಣಾಮ ವಿಶ್ವ ಆರೋಗ್ಯ ಸಂಸ್ಥೆ 2016ರಲ್ಲಿ ಜಿಕಾವನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು.

Advertisement

ಮಾರಕ ವೈರಸ್‌ ಕೊರೊನಾಗೆ ಜಗತ್ತೇ ತತ್ತರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು “ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ’ ಘೋಷಿಸಿದೆ. ಕೇರಳ ದಲ್ಲಿಯೂ ಘೋಷಣೆ ಮಾಡಲಾಗಿದೆ. ಆರೋಗ್ಯ ತುರ್ತುಪರಿಸ್ಥಿತಿ ಎಂದರೇನು?, ಅನುಸರಿ ಸಬೇಕಾದ ಕ್ರಮಗಳೇನು ಮೊದಲಾದ ಮಾಹಿತಿ ಇಲ್ಲಿದೆ.

ನಾವು ಏನು ಮಾಡಬೇಕು ?
– ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದವರ ಮಾಹಿತಿಯು ಸದಾ ನಿಮ್ಮ ಬಳಿ ಇರಲಿ. ಫೋನ್‌ನಲ್ಲಿ ಸ್ಪೀಡ್‌ ಡಯಲ್‌ ರೂಪದಲ್ಲೋ ಅಥವಾ ಜೇಬಿನಲ್ಲಿ ಚೀಟಿ ಬರೆದಿಟ್ಟುಕೊಳ್ಳಿ.
– ನಿಮ್ಮ ಕುಟುಂಬ ಅಥವಾ ಸಂಬಂಧಿಕರೊಂದಿಗೆ ಮೊಬೈಲ್‌ನ ಜಿಪಿಎಸ್‌ ಸಂಪರ್ಕ ಇಟ್ಟುಕೊಳ್ಳಿ. ಸೋಂಕಿನ ಕುರಿತು ಸಂಶಯ ಬಂದಲ್ಲಿ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ.
– ಸೋಂಕು ಖಚಿತವಾದರೆ ನಿರ್ಲಕ್ಷ ಮಾಡಬೇಡಿ. ನಿಮ್ಮ ಗೆಳೆಯರ ಬಳಗದಲ್ಲಿಯೂ ನಿರ್ಲಕ್ಷ್ಯವಾಗದಂತಿರಲಿ.
– ಸೋಂಕು ಖಚಿತವಾದ ಮೇಲೆ ಸಾರ್ವಜನಿಕ ಸ್ಥಳ ಅಥವಾ ಸಾರ್ವಜನಿಕ ಸಾರಿಗೆ ಬಳಕೆಯಿಂದ ದೂರ ಇರಿ.

Advertisement

Udayavani is now on Telegram. Click here to join our channel and stay updated with the latest news.

Next