Advertisement

ವಿಶ್ವ ಅರ್ಥವ್ಯವಸ್ಥೆಗೆ 2 ಟ್ರಿಲಿಯನ್‌ ಡಾಲರ್‌ ನಷ್ಟ

10:44 PM Mar 20, 2020 | Hari Prasad |

ಕೊರೊನಾ ವೈರಸ್‌ನಿಂದಾಗಿ ವಿಶ್ವದ ಅರ್ಥ ವ್ಯವಸ್ಥೆಗೆ 2 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ನಷ್ಟವಾಗುವ ಸಾಧ್ಯತೆ ಇದೆ. ಹೀಗೆಂದು ವಿಶ್ವಸಂಸ್ಥೆಯ ಅಂಗಸಂಸ್ಥೆ ಅಂಕ್‌ಟಡ್‌ ಹೇಳಿದೆ.

Advertisement

ಜತೆಗೆ ವಿಶ್ವದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವನ್ನು ಶೇ.2.5ರಷ್ಟು ಕುಗ್ಗಿಸುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನದ ಜಾಗತೀಕರಣ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ರಿಚರ್ಡ್‌ ಕೌಜೋ- ರೈಟ್‌ ಹೇಳಿದ್ದಾರೆ.

ಮಾನವ ಜೀವ ಹಾನಿಯ ಜತೆಗೆ ವಿಶ್ವದ ಅರ್ಥ ವ್ಯವಸ್ಥೆಗೆ 1 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ನಷ್ಟ ಉಂಟು ಮಾಡಲಿದೆ. ಇದು ಹಲವು ರೀತಿಯ ಆರ್ಥಿಕ ಅನಿಶ್ಚಿತತೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next