Advertisement

Viral ತುಣುಕು: 31 ವರ್ಷಗಳ ಹಿಂದೆ ‘ತರಂಗದಲ್ಲಿ ಬಂದಿತ್ತು ಕೊರೊನಾ ಸುದ್ದಿ!

03:07 PM Mar 18, 2020 | Hari Prasad |

ಮಣಿಪಾಲ: ಇದೀಗ ಎಲ್ಲೆಡೆಯೂ ಕೊರೊನಾ ವೈರಸ್ ನದ್ದೇ ಸುದ್ದಿ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭೀತಿಯ ಅಲೆಯನ್ನೇ ಎಬ್ಬಿಸಿ ಮರಣ ಮೃದಂಗ ನುಡಿಸುತ್ತಿರುವ ಈ ಮಾರಣಾಂತಿಕ ವೈರಸ್ ಹೊಸದಾಗಿ ಸೃಷ್ಟಿಯಾದದ್ದಲ್ಲ. ಈ ವೈರಸ್ ಗೆ ಸುಮಾರು ಅರ್ಧ ಶತಮಾನಗಳ ಇತಿಹಾಸವಿದೆ. ಇದೀಗ ಈ ವೈರಸ್ ಕುರಿತಾದ ಮಾಹಿತಿ ಒಂದು 1989ರ ‘ತರಂಗ’ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಇದರ ತುಣುಕೊಂದು ಇದೀಗ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advertisement

ಪತ್ರಿಕೆಗಳಲ್ಲಿ  ಬರುವ ಆರೋಗ್ಯ ಸಂಬಂಧಿ ಮಾಹಿತಿ, ಲೆಖನಗಳನ್ನು ಸಂಗ್ರಹಿಸಿಡುವ ಹವ್ಯಾಸವನ್ನು ಹೊಂದಿರುವ ಮುಕುಂದ ಚಿಪ್ಲೂಂಕರ್ ಎನ್ನುವವರು 31 ವರ್ಷಗಳ ಹಿಂದೆ ಜುಲೈ 16ರ ತರಂಗದಲ್ಲಿ ಪ್ರಕಟಗೊಂಡಿದ್ದ ವೈರಸ್ ಸಂಬಂಧಿ ಮಾಹಿತಿ ಲೇಖನವೊಂದರಲ್ಲಿ ಕೊರೊನಾ ವೈರಸ್ ಕುರಿತಾದ ಮಾಹಿತಿ ಪ್ರಕಟವಾಗಿತ್ತು ಎಂಬುದನ್ನು ಮುಕುಂದ ಅವರು ಪತ್ತೆ ಹಚ್ಚಿ ತಮ್ಮ ಫೇಸ್ಬುಕ್ ಪುಟದಲ್ಲಿ ಹಾಕಿಕೊಂಡಿದ್ದಾರೆ.

ಈ ಸಂಚಿಕೆಯಲ್ಲಿ ವಿವಿಧ ವೈರಸ್ ಗಳ ಕುರಿತಾದ ಮಾಹಿತಿ ಇದ್ದು ಅದರಲ್ಲಿ ಒಂದು ಕೊರೊನಾ ವೈರಸ್ ಕುರಿತಾಗಿಯೂ ಮಾಹಿತಿಯನ್ನು ನೀಡಲಾಗಿದೆ. ಈ ವೈರಸ್ ಹೇಗೆ ಪರಾವಲಂಬಿಯಾಗಿದೆ ಮತ್ತು ಇವುಗಳು ಹೇಗೆ ತಮ್ಮ ಸಂತಾನಾಭಿವೃದ್ಧಿಯನ್ನು ಮಾಡುತ್ತವೆ ಎಂಬ ಕಿರು ಮಾಹಿತಿ ಈ ಪುಟದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next