Advertisement
ಮಾರ್ಚ್ 1 ರಂದು ಆತ ಅಮೇರಿಕಾದಿಂದ ಬೆಂಗಳೂರಿಗೆ ಹಿಂದಿರುಗಿದ್ದು, ಎರಡು ದಿನ ಆಫೀಸ್ ಗೆ ತೆರಳಿ ಕೆಲಸ ಮಾಡಿದ್ದಾರೆ. ಮಾರ್ಚ್ 5 ರಂದು ಅನಾರೋಗ್ಯ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಪಟ್ಟಿದ್ದಾರೆ. ವೈದ್ಯರು ಎರಡು ಬಾರಿ ಸೋಂಕು ಪರೀಕ್ಷೆ ಮಾಡಿ ಸೋಮವಾರ ಬೆಳಗ್ಗೆ ಕೊರೊನಾ ಸೋಂಕು ತಗುಲಿರುವುದಾಗಿ ದೃಢಪಡಿಸಿಕೊಂಡಿದ್ದಾರೆ.
Related Articles
ಬೆಂಗಳೂರಿನ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಬಿಬಿಎಂಪಿ ಸೇರಿದಂತೆ ಬೆಂಗಳೂರಿನ ಎರಡು ಜಿಲ್ಲೆಗಳ ಶಾಲೆಗಳಲ್ಲಿ 5 ನೇ ತರಗತಿವರೆಗೂ ರಜೆ ಘೋಷಿಸಲಾಗಿದೆ.
Advertisement
ಸೋಮವಾರದಿಂದ ಎಲ್ ಕೆಜಿ, ಯುಕೆಜಿ ವರೆಗು ರಜೆ ನೀಡಿಲಾಗಿತ್ತು. ಸದ್ಯ ನಗರದಲ್ಲಿ ಒಂದು ಪ್ರಕರಣ ದೃಢವಾದ ಹಿನ್ನೆಲೆ ಒಂದರಿಂದ ಐದನೇ ತರಗತಿವರೆಗೂ ರಜೆ ಘೋಷಿಸಲಾಗಿದೆ.
ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ಶಾಲೆಗಳಿಗೆ ನಾಳೆಯಿಂದ ಮುಂದಿನ ಆದೇಶದವರೆಗೂ ರಜೆ ಘೋಷಣೆ ಮಾಡಲಾಗಿದೆ
ಅಂಗನವಾಡಿ ಕೇಂದ್ರಗಳಿಗೂ ರಜೆ :10 ವರ್ಷದೊಳಗಿನ ಮಕ್ಕಳಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಸೋಂಕು ಬೇಗನೆ ಸಾಧ್ಯತೆ ಇದೆ. ಹಾಗಾಗಿ ಮುಂಜಾಗ್ರತೆ ಕ್ರಮವಾಗಿ ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾರ್ಚ್ 10 ರಿಂದ 17ರವರೆಗೆ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಜೆ ಘೋಷಣೆ ಮಾಡಲಾಗಿದೆ. ಕೊರೊನಾ ದೃಢಪಟ್ಟ ಟೆಕ್ಕಿ ಫೆಬ್ರವರಿ ಕೊನೆಯ ವಾರ ಅಮೆರಿಕಕ್ಕೆ ತೆರಳಿ ಮಾರ್ಚ್ 1 ರಂದು ಬೆಂಗಳೂರಿಗೆ ಬಂದಿದ್ದರು. ಸದ್ಯ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಪತ್ನಿ ಮಗು ಮತ್ತು ಕಾರು ಚಾಲಕನನ್ನು ಬೇರೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಸಲಾಗಿದೆ. ಆತನೊಟ್ಟಿಗೆ ನೇರ ಸಂಪರ್ಕ ಹೊಂದಿದವರನ್ನು ಪತ್ತೆಮಾಡಿ ತಪಾಸಣೆ ಮಾಡಲಾಗುತ್ತಿದೆ.
– ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ.