Advertisement

ಮಾರಣಾಂತಿಕ ಕೊರೊನಾವೈರಸ್‌: ಪ್ರಾಣಭೀತಿಯಲ್ಲಿ 200 ಭಾರತೀಯರು

10:05 AM Feb 09, 2020 | sudhir |

ಬೀಜಿಂಗ್‌/ನವದೆಹಲಿ: ಮಾರಣಾಂತಿಕ ಕೊರೊನಾ ವೈರಸ್‌ನ ಕಬಂಧ ಬಾಹುಗಳು ವಿಶ್ವಾದ್ಯಂತ ವ್ಯಾಪಿಸುತ್ತಿರುವ ನಡುವೆಯೇ, ಜಪಾನ್‌ನ ನೌಕೆಯೊಂದರಲ್ಲಿ ಸಿಲುಕಿರುವ 200ಕ್ಕೂ ಹೆಚ್ಚು ಭಾರತೀಯರು ಪ್ರಾಣಭೀತಿಯಲ್ಲಿ ದಿನಕಳೆಯುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

Advertisement

ವೈರಸ್‌ ಹಬ್ಬಿದ ಬೆನ್ನಲ್ಲೇ ಚೀನಾದ ವುಹಾನ್‌ನಿಂದ ಜಪಾನ್‌ಗೆ ವಾಪಸಾದ ಡೈಮಂಡ್‌ ಪ್ರಿನ್ಸೆಸ್‌ ಎಂಬ ನೌಕೆ ಸದ್ಯ ಜಪಾನ್‌ನ ಯೋಕೋಹಾಮಾ ಬಂದರಿನಲ್ಲಿ ನಿಂತಿದೆ. ಇದರಲ್ಲಿ 3,700ರಷ್ಟು ಮಂದಿ ಇದ್ದು, ಆ ಪೈಕಿ 200ಕ್ಕೂ ಹೆಚ್ಚು ಭಾರತೀಯರಿದ್ದಾರೆ. ಆತಂಕಕಾರಿ ವಿಚಾರವೆಂದರೆ, ನೌಕೆಯಲ್ಲಿರುವ 64 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ, ಒಳಗಿರುವ ಎಲ್ಲರನ್ನೂ ತೀವ್ರ ನಿಗಾದಲ್ಲಿ ಇಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next