Advertisement

ಮೂವರಿಗೆ ಕೊರೊನಾ ಶಂಕೆ

11:10 PM Mar 15, 2020 | Lakshmi GovindaRaj |

ವಿಜಯಪುರ: ಮೆಕ್ಕಾ ಪ್ರವಾಸ ಮುಗಿಸಿ ವಿಜಯಪುರ ಜಿಲ್ಲೆಗೆ ಬಂದಿರುವ 25 ವರ್ಷದ ಯುವಕನಲ್ಲಿ ಕೊರೊನಾ ಲಕ್ಷಣ ಕಂಡು ಬಂದಿವೆ. ಹೀಗಾಗಿ ಆ ಯುವಕನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಶಂಕಿತ ರೋಗಿ ಮಾ.5ರಂದು ಮೆಕ್ಕಾದಿಂದ ವಿಜಯಪುರಕ್ಕೆ ಮರಳಿದ್ದ. ಆತನಲ್ಲಿ ಕೆಮ್ಮು-ನೆಗಡಿಯಂಥ ರೋಗ ಲಕ್ಷಣಗಳಿದ್ದರೂ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿರಲಿಲ್ಲ.

Advertisement

ಇದೀಗ ಯುವಕನ ಪೋಷಕರು ಧೈರ್ಯ ಹೇಳಿ ವೈದ್ಯಕೀಯ ಪರೀಕ್ಷೆಗೆ ಒಪ್ಪಿಸಿದ್ದಾರೆ. ಪರೀಕ್ಷೆ ಬಳಿಕ ಯುವಕನನ್ನು ವಿಜಯಪುರ ಜಿಲ್ಲಾಸ್ಪತ್ರೆ ಐಸೋಲೇಷನ್‌ ವಿಶೇಷ ಘಟಕದಲ್ಲಿ ಇರಿಸಿ ವೈದ್ಯಕೀಯ ನಿಗಾ ಇರಿಸಲಾಗಿದೆ.ಶಂಕಿತನ ಗಂಟಲು ದ್ರವ ಮಾದರಿಯನ್ನು ತಪಾಸಣೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾವೇರಿಯಲ್ಲೂ ಇಬ್ಬರಿಗೆ ಕೊರೊನಾ ಶಂಕೆ: ಹಾನಗಲ್ಲ ಪಟ್ಟಣದ ವೃದ್ಧ ಹಾಗೂ ಆತನ 3 ವರ್ಷದ ಮೊಮ್ಮಗನಲ್ಲಿ ಶಂಕಿತ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿದ್ದು, ಇಬ್ಬರನ್ನೂ ಜಿಲ್ಲಾಸ್ಪತ್ರೆ ಪ್ರತ್ಯೇಕ ವಾರ್ಡ್‌ನಲ್ಲಿರಿಸಲಾಗಿದೆ. ಆರೋಗ್ಯಾಧಿಕಾರಿಗಳು ಈ ಇಬ್ಬರ ರಕ್ತ ಮತ್ತು ಕಫ ಮಾದರಿಯನ್ನು ಭಾನುವಾರ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಶಂಕಿತ ಕೊರೊನಾ ಸೋಂಕು ಲಕ್ಷಣ ಹೊಂದಿರುವ ಅಜ್ಜ ಹಾಗೂ ಮೊಮ್ಮಗ ಹಾನಗಲ್ಲ ಪಟ್ಟಣದವರಾಗಿದ್ದಾರೆ. 60 ವರ್ಷದ ಈ ವೃದ್ಧ ಹಜ್‌ ಯಾತ್ರೆ ಮುಗಿಸಿ ಮಾ.3ರಂದು ಹುಬ್ಬಳ್ಳಿಗೆ ಬಂದಿದ್ದರು. ಅಲ್ಲಿ ಕೆಲ ದಿನ ಸಂಬಂಧಿ ಕರ ಮನೆಯಲ್ಲಿ ವಾಸವಾಗಿ ಮಾ.12ರಂದು ಹಾನಗಲ್ಲಿನ ಮನೆಗೆ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next