Advertisement

ಕೊರೊನಾ: ವಿಮಾನ ನಿಲ್ದಾಣದಲ್ದಿ ಪ್ರತ್ಯೇಕ ಸಲಹಾ ಕೇಂದ್ರ ಆರಂಭ

11:00 AM Jan 27, 2020 | Suhan S |

ಬೆಂಗಳೂರು: ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್‌ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಈ ಸಂಬಂಧ ಪ್ರತ್ಯೇಕ ಸಹಾಯ ಕೇಂದ್ರ ತೆರೆಯಲಾಗಿದ್ದು, ವಿದೇಶ ದಿಂದ ಭಾರತಕ್ಕೆ ಬಂದಿಳಿಯುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ.

Advertisement

ಕಳೆದ 14 ದಿನಗಳು ಚೀನಾದಲ್ಲಿ ಅದರಲ್ಲೂ ಅತಿ ಹೆಚ್ಚು ಜನ ಮೃತಪಟ್ಟ ವುಹಾನ್‌, ಹ್ಯೂಬಿಯಲ್ಲಿದ್ದು ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಹೀಗೆ ಬಂದಿಳಿದ ಪ್ರಯಾಣಿಕರಲ್ಲಿ ತೀವ್ರ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಈ ಮೂರು ಲಕ್ಷಣಗಳಲ್ಲಿ ಯಾವುದಾದರೂ ಒಂದು ಲಕ್ಷಣ ಕಾಣಿಸುತ್ತಿದ್ದರೂ ತಕ್ಷಣ ಮಾಹಿತಿ ನೀಡಬೇಕು ಎಂದು ವಿಮಾನ ನಿಲ್ದಾಣದಲ್ಲಿ ಅಳವಡಿಸಿದ ಫ‌ಲಕದಲ್ಲಿ ಸೂಚಿಸಲಾಗಿದೆ.

ಈ ಮೇಲಿನ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ, ಚೀನಾದ ವುಹಾನ್‌ ಮತ್ತು ಹ್ಯೂಬಿಗೆ ಭೇಟಿ ನೀಡಿ ಭಾರತಕ್ಕೆ ಬಂದಿರುವವರು ಎಚ್ಚರಿಕೆಯಿಂದ ಇರಬೇಕು. ಭಾರತಕ್ಕೆ ಬಂದಿಳಿದ ದಿನದಿಂದ 28 ದಿನಗಳಲ್ಲಿ ಯಾವುದಾದರೂ ಲಕ್ಷಣ  ಗಳು ಕಂಡುಬಂದರೆ, ಹತ್ತಿರದ ಆಸ್ಪತ್ರೆ ಗಳಿಗೆ ಭೇಟಿ ನೀಡಿ ಖಾತ್ರಿಪಡಿಸಿ ಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಇಲಾಖೆ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಅಳವಡಿಸಿರುವ ಫ‌ಲಕದಲ್ಲಿ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next