Advertisement
ಕೈಗಾರಿಕೆ, ಉದ್ಯಮ, ಮೀನುಗಾರಿಕೆ, ಏರ್‌ಲೈನ್ಸ್, ಪ್ರವಾಸೋದ್ಯಮ ಸಹಿತ ವಿವಿಧ ಕ್ಷೇತ್ರಗಳಿಗೆ ಕೊರೊನಾ ಆತಂಕ ಎದುರಾಗಿದೆ. ರಫ್ತು- ಆಮದಿನಲ್ಲಿ ತೊಡಗಿ ರುವ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಆಹಾರ ಉತ್ಪನ್ನ, ಯಂತ್ರೋಪಕರಣಗಳ ಬಿಡಿ ಭಾಗ ರಫ್ತು ಮಾಡುವವರು ಅಡ ಕತ್ತರಿಯಲ್ಲಿ ಸಿಲುಕಿದ್ದಾರೆ.
ಕರಾವಳಿಯ ಸಾವಿರಾರು ಜನರಿಗೆ ಕೆಲಸ ಕರುಣಿಸಿರುವ ಗೋಡಂಬಿ ಉದ್ಯ ಮಕ್ಕೆ ಸೋಂಕು ಬಹುದೊಡ್ಡ ಆಘಾತ ನೀಡಿದೆ. ಕರಾವಳಿಯ ಗೋಡಂಬಿ ಉತ್ಪನ್ನಗಳು ದುಬಾೖ, ಇರಾನ್, ಸೌದಿ ಅರೇಬಿ ಯಾ ಗಳಿಗೆ ಶೇ.60ರಷ್ಟು ರಫ್ತಾಗು ತ್ತಿದ್ದವು. ಆದರೆ ಪ್ರಸ್ತುತ ಮಂಗಳೂರಿನಿಂದ ಗೋಡಂಬಿ ರಫ್ತು ಸ್ಥಗಿತಗೊಳಿಸಲು ಆ ದೇಶಗಳು 10 ದಿನಗಳ ಹಿಂದೆ ಸೂಚನೆ ನೀಡಿವೆ. ಯುರೋಪ್, ಯುಎಸ್‌ಎಯ ಭಾಗಗ ಳಿಗೆ ರವಾನೆಯಾಗುತ್ತಿದ್ದ ಗೋಡಂಬಿಗೂ ಪೆಟ್ಟು ಬಿದ್ದಿದೆ. ಕೊರೊನಾ ಹಾವಳಿಯಿಂದ ಚೀನಕ್ಕೆ ವಿಯೆಟ್ನಾಂ ಗೋಡಂಬಿ ರಫ್ತಾಗುತ್ತಿಲ್ಲ. ಹೀಗಾಗಿ ವಿಯೆಟ್ನಾಂನ ವರು ದರ ಕಡಿತದ ತಂತ್ರ ಅನು ಸರಿಸಿ ಯುರೋಪ್, ಯುಎಸ್‌ಎ ಮಾರು ಕಟ್ಟೆಗಳನ್ನು ಕೈಗೆತ್ತಿ ಕೊಂಡಿದ್ದಾರೆ ಎನ್ನುತ್ತಾರೆ ಗೋಡಂಬಿ ಉದ್ಯಮಿ ಕಲ್ನಾವಿ ಪ್ರಕಾಶ್. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಯಿಂದಾಗಿ ಕುಕ್ಕುಟೋದ್ಯಮ ಸಂಕಷ್ಟದ ಪರಿಸ್ಥಿತಿಗೆ ತಲುಪಿದೆ. ಒಂದು ಕೆ.ಜಿ. ಕೋಳಿ ಮಾಂಸದ ಉತ್ಪಾದನ ವೆಚ್ಚ ಬೆಂಗಳೂರಿನಲ್ಲಿ 80 ರೂ., ಮಂಗಳೂರಿನಲ್ಲಿ 90 ರೂ. ಆದರೆ ಈಗಿನ ಪರಿಸ್ಥಿತಿಯಲ್ಲಿ ಉತ್ಪಾದಕರಿಗೆ ಕೆ.ಜಿ.ಯೊಂದಕ್ಕೆ ಕೇವಲ 10-15 ರೂ.ಗಳಷ್ಟೇ ಸಿಗುತ್ತಿದೆ. ಅಂದರೆ 1 ಕೆ.ಜಿ.ಯಲ್ಲಿ ಬರೊಧೀಬ್ಬರಿ 75ರಿಂದ 80 ರೂ. ನಷ್ಟ ಅನುಭವಿಸುವಂತಾಗಿದೆ. ಕೋಳಿ ಸಾಕಾಣಿಕೆದಾರ ಮಂಗಳೂರಿನ ವೈ.ಬಿ. ಸುಂದರ್ ಹೇಳುವಂತೆ, “ಕೊರೊನಾಕ್ಕೆ ಸಂಬಂಧವಿಲ್ಲದಿದ್ದರೂ ಕುಕ್ಕುಟೋದ್ಯಮ ಆತಂಕದ ಸ್ಥಿತಿ ಎದುರಿಸುತ್ತಿದೆ. ಬ್ಯಾಂಕ್ ಸಾಲ ಪಡೆದು ಉದ್ಯಮ ಆರಂಭಿಸಿದವರು ತೊಂದರೆಯಲ್ಲಿದ್ದಾರೆ. ಕುಕ್ಕು ಟೋದ್ಯಮದಲ್ಲಿ ದಿನ ಪೂರ್ತಿ ಕೆಲಸ ಮಾಡುತ್ತಿರುವ ಯಾರಿಗೂ ಕೂಡ ಯಾವುದೇ ರೀತಿಯ ಸೋಂಕು ಬಂದಿಲ್ಲ. ಹಾಗೂ ಕೋಳಿ ತಿಂದವರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಹೀಗಾಗಿ ಕೋಳಿಗೂ ಕೊರೊನಾಕ್ಕೂ ಯಾವುದೇ ಸಂಬಂಧವಿಲ್ಲ. ಜಾಲತಾಣದಲ್ಲಿ ಸುಳ್ಳು ಮಾಹಿತಿಯೊಂದಿಗೆ ಜನರಲ್ಲಿ ಭಯ ಹುಟ್ಟಿಸುವುದು ಸರಿಯಲ್ಲ’ ಎನ್ನುತ್ತಾರೆ.
Related Articles
ಈಗಾಗಲೇ ಸಂಕಷ್ಟಕ್ಕೀಡಾಗಿರುವ ಮೀನುಗಾರಿಕೆಗೂ ಕೊರೊನಾ ಸಂಕಷ್ಟ ತಂದಿದೆ. ಚೀನ ಸಹಿತ ಹಲವು ದೇಶಗಳಿಂದ ಮೀನಿಗೆ ಬೇಡಿಕೆ ಕುಸಿದಿದ್ದು, ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಗೆ ರಫ್ತು ಮಾಡಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಮೀನುಗಾರ ಮುಖಂಡ ಮೋಹನ್ ಬೆಂಗ್ರೆ.
ಮುಂದೆ ವಿಮಾನಯಾನ ಸಂಪೂರ್ಣ ಸ್ಥಗಿತವಾದರೆ ಗಲ್ಫ್ ರಾಷ್ಟ್ರಗಳಿಗೆ ತರಕಾರಿ, ಹಣ್ಣು, ಹೂವು ರಫ್ತಿಗೂ ಹೊಡೆತ ಬೀಳಲಿದೆ. ಇದೀಗ ಮಾಲ್, ನೈಟ್ ಕ್ಲಬ್, ಥಿಯೇಟರ್‌ಗಳು ಮುಚ್ಚಲು ಸರಕಾರ ಸೂಚಿಸಿರುವುದರಿಂದ ಆರ್ಥಿಕ ಸಂಕಷ್ಟಕೆ ಸಿಲುಕಲಿವೆ.
Advertisement
ಸದ್ಯಕ್ಕಿಲ್ಲ ಸಮಸ್ಯೆಎಂಆರ್ಪಿಎಲ್ಗೆ ಹಡಗು ಮೂಲಕ ಈಗಲೂ ಕಚ್ಚಾತೈಲ ಆಗಮಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ತೈಲ ಕೊರತೆ ಸಮಸ್ಯೆ ಎದುರಾಗದು. ಆದರೂ ತುರ್ತು ಸಂದರ್ಭಕ್ಕೆ ಬೇಕಾದರೆ ಮಂಗಳೂರಿನ ಪೆರ್ಮುದೆ ಮತ್ತು ಉಡುಪಿಯ ಪಾದೂರು ಭೂಗತ ಕಚ್ಚಾತೈಲ ಸ್ಥಾವರದಿಂದ ಪಡೆಯಲು ಅವಕಾಶವಿದೆ ಎಂದು ಎಂಆರ್‌ಪಿಎಲ್ ಮೂಲಗಳು ತಿಳಿಸಿವೆ. ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಕೆ
ಕೊರೊನಾ ಆತಂಕ ವಿಮಾನ ಯಾನ ಸಂಸ್ಥೆಗಳ ಮೇಲೆ ಬಹುದೊಡ್ಡ ಹೊಡೆತ ಬಿದ್ದಿದೆ. ಮಂಗಳೂರು ಏರ್ ಪೋರ್ಟ್‌ನಿಂದ ತೆರಳುವ ಹಲವು ವಿಮಾನಗಳಿಗೆ ಪ್ರಯಾಣಿಕರ ಕೊರತೆ ಎದುರಾಗಿದೆ. ಸದ್ಯ ಕತಾರ್, ಕುವೈಟ್‌ಗೆ ವಿಮಾನ ಸಂಚಾರ ಸ್ಥಗಿತಗೊಂಡಿದ್ದು, ಕೆಲವು ವಿಮಾನಗಳು ಇತರ ದೇಶ- ರಾಜ್ಯಗಳಿಗೆ ಪ್ರಯಾಣಿಕರ ಕೊರತೆಯಿಂದಾಗಿ ರದ್ದುಗೊಳಿಸಿದ್ದೂ ಇದೆ. ಹಲವು ದಿನಗಳ ಹಿಂದೆ ಟಿಕೆಟ್ ಬುಕ್ ಮಾಡಿ ದವರು ಮಾತ್ರ ಸದ್ಯ ವಿಮಾನ ಸಂಚಾರಕ್ಕೆ ಒತ್ತು ನೀಡುತ್ತಿದ್ದು, ಹೊಸದಾಗಿ ಟಿಕೆಟ್ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ವಿಮಾನಯಾನ ಮೂಲಗಳು ತಿಳಿಸಿವೆ. ಪ್ರವಾಸಿ ಹಡಗು ಸ್ಥಗಿತದಿಂದ ಹೊಡೆತ
ಮಂಗಳೂರಿಗೆ ವಿದೇಶೀ ಪ್ರವಾಸಿ ಹಡಗು ಆಗಮನಕ್ಕೆ ಬ್ರೇಕ್ ಬಿದ್ದಿದೆ. ಕಳೆದ ತಿಂಗಳಿನಿಂದ ಯಾವುದೇ ಪ್ರವಾಸಿ ಹಡಗು ಎನ್‌ಎಂಪಿಟಿಗೆ ಬಂದಿಲ್ಲ. ಕರಾವಳಿಯಲ್ಲಿ ವಿದೇಶಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ದೇಶ – ವಿದೇಶಗಳಿಗೆ ಪ್ರವಾಸ ತೆರಳುವವರು ಮತ್ತು ಇಲ್ಲಿಗೆ ಆಗಮಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಇದನ್ನೇ ನಂಬಿರುವ ಸಾರಿಗೆ, ಹೊಟೇಲ್ ಉದ್ಯಮಗಳು ಸಮಸ್ಯೆ ಎದುರಿ ಸಬೇಕಾದ ಆತಂಕವಿದೆ. ಆರ್ಥಿಕ ಚಟುವಟಿಕೆಗಳಿಗೆ ಹೊಡೆತ
ಕೊರೊನಾದಿಂದಾಗಿ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ಕರಾವಳಿಯ ಉದ್ಯಮ ಕ್ಷೇತ್ರಕ್ಕೂ ಪರೋಕ್ಷ ಏಟು ಬೀಳತೊಡಗಿದೆ. ಕರಾವಳಿಗೆ ವಿವಿಧ ಉತ್ಪನ್ನಗಳ ರಫ್ತು, ಆಮದು ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿದ್ದು, ಇಲ್ಲಿನ ಆರ್ಥಿಕ ವ್ಯವಹಾರಕ್ಕೆ ಆತಂಕ ಎದುರಾಗಿದೆ.
- ಐಸಾಕ್ ವಾಜ್, ಅಧ್ಯಕ್ಷರು, ಕೆನರಾ ವಾಣಿಜ್ಯ, ಕೈಗಾರಿಕಾ ಸಂಸ್ಥೆ - ದಿನೇಶ್ ಇರಾ