Advertisement

ಕೊರೊನಾ ಭೀತಿ: ಬನ್ನೇರುಘಟ್ಟ ಉದ್ಯಾನ ಖಾಲಿ

06:01 PM Mar 12, 2020 | Suhan S |

ಆನೇಕಲ್‌ : ಕೊರೊನಾ ವೈರೆಸ್‌ ಭೀತಿ ಬೆಂಗಳೂರನ್ನು ಆವರಿಸಿದೆ. ಬೆಂಗಳೂರಿನಲ್ಲಿ ಕೊರೊನಾ ಸೊಂಕಿತರು ಪತ್ತೆಯಾಗುತ್ತಿದ್ದಂತೆ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

Advertisement

ಕಳೆದ ಮಾರ್ಚ ತಿಂಗಳಿಗೆ ಹೋಲಿಸಿದರೆ ಈ ತಿಂಗಳ ಆರಂಭದ ನಂತರ, ದಿನ ದಿಂದ ದಿನಕ್ಕೆ ಉದ್ಯಾನವನಕ್ಕೆ ಬರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಸೋಮವಾರ ಕೇವಲ 1900 ಮಂದಿ ಪ್ರವಾಸಿಗರು ಉದ್ಯಾನವಕ್ಕೆ ಆಗಮಿಸಿದ್ದರು. ಬುಧವಾರ ಇದರ ಪ್ರಮಾಣ ಮತ್ತಷ್ಟು ಕಡಿಮೆಯಾಗಿತ್ತು.

ಮುಂಜಾಗ್ರತಾ ಕ್ರಮ : ಕೊರೋನಾ ವೈರೆಸ್‌ ಹರಡದಂತೆ ಮುನ್ನೆಚರಿಕಾ ಕ್ರಮವಾಗಿ, ಉದ್ಯಾನವನದ ಎಲ್ಲಾ ಸಿಬ್ಬಂದಿಗೆ ಮಾಸ್ಕ್ ನೀಡಲಾಗಿದೆ. ಕೈ ಶುದ್ಧ ಮಾಡಿಕೊಳ್ಳಲು ಸ್ಯಾನಿಟೇಸರ್‌ ಬಾಟಲ್‌ಗ‌ಳನ್ನು ಇಡಲಾಗಿದೆ. ಬರುವ ಪ್ರವಾಸಿಗರು ಕೈ ಶುದ್ಧ ಮಾಡಿಕೊಂಡು ಮೃಗಾಲಯದೊಳಗೆ ಪ್ರವೇಶಿಸುವ ವ್ಯವಸ್ಥೆ ಮಾಡಲಾಗಿದೆ.

ವಿದ್ಯಾರ್ಥಿಗಳಿಂದ ಜಾಗೃತಿ: ಪ್ರತಿ ಭಾನುವಾರ ಉದ್ಯಾನವನಕ್ಕೆ ಬರುವ ಇಕೋ ಕ್ಲಬ್‌ ವಿದ್ಯಾರ್ಥಿಗಳಿಂದ ಪ್ರವಾಸಿಗರಿಗೆ ಕೆಮ್ಮುವಾಗ ಕರ್ಚಿಪ್‌ ಬಳಸಿ, ಆಗಿಂದಾಗೆ ಕೈಗಳನ್ನು ತೊಳೆದು ಕೊಳ್ಳುತ್ತಿರಿ. ಸ್ಯಾನಿಟೈಸರ್‌ ಬಳಸುತ್ತಿರಿ . ಜ್ವರ, ಕೆಮ್ಮು ಇರುವ ವ್ಯಕ್ತಿಗಳಿಂದ ಅಂತರ ಕಾಯ್ದು ಕೊಳ್ಳಿ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next