Advertisement
ಬಿ.ಸಿ. ರೋಡ್‌ನಲ್ಲಿರುವ ಬಂಟ್ವಾಳ ತಾ.ಪಂ.ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಸದಸ್ಯ ಪ್ರಭಾಕರ ಪ್ರಭು ಅವರು, ಕೊರೊನಾ ವೈರಸ್ ಜಾಗೃತಿ ಕುರಿತಂತೆ ತಾ| ಆರೋಗ್ಯಾಧಿಕಾರಿ, ತಹಶೀಲ್ದಾರ್ ಹಾಗೂ ಇಡೀ ತಂಡದ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಕೊರೊನಾ ವೈರಸ್ ಕುರಿತು ಹಬ್ಬುತ್ತಿರುವ ಗಾಳಿಸುದ್ದಿ ಬಗ್ಗೆ ಸ್ಪಷ್ಟಪಡಿಸುವಂತೆ ಮನವಿ ಮಾಡಿದರು.
Related Articles
ಗ್ರಾಮೀಣ ಭಾಗಗಳಲ್ಲಿ ಕೋಳಿ ಸಾಕಣೆ ಮಾಡುವವರು ತಮ್ಮ ಕೋಳಿಗಳನ್ನು ಸಾಮೂಹಿಕವಾಗಿ ಹೂಳುವ ಕೆಲಸ ಮಾಡುತ್ತಿದ್ದಾರೆ. ಇದು ಯಾವ ಕಾರಣಕ್ಕೆ ಎಂದು ಸದಸ್ಯ ಪ್ರಭಾಕರ ಪ್ರಭು ಪ್ರಶ್ನಿಸಿದರು. ಅದಕ್ಕೆ ಪಶು ವೈದ್ಯಾಧಿಕಾರಿ ಡಾ| ಹೆನ್ರಿ ಉತ್ತರಿಸಿ, ಕೇರಳದಲ್ಲಿ ಹಕ್ಕಿ ಜ್ವರ ಕಂಡುಬಂದಿತ್ತು. ಆದರೆ ಕೇರಳದಿಂದ ಯಾವುದೇ ಕೋಳಿಗಳನ್ನು ಕರ್ನಾಟಕಕ್ಕೆ ತರಲಾಗುತ್ತಿಲ್ಲ. ಆದರೆ ಇಲ್ಲಿಂದ ಕೋಳಿಗಳನ್ನು ಕೇರಳಕ್ಕೆ ಕೊಂಡು ಹೋಗಲಾಗುತ್ತಿದೆ. ಅಂತಹ ಸಾಗಾಟ ವಾಹನಗಳ ಕುರಿತು ಸಾರಡ್ಕ, ಉಕ್ಕುಡಗಳಲ್ಲಿ ಚೆಕ್ ಮಾಡಲಾಗುತ್ತಿದೆ. ಆದರೆ ಕೆಲವು ಬಾರಿ ವಾಹನಗಳು ಬೇರೆ ರೂಟ್‌ಗಳಲ್ಲಿ ಬರುತ್ತವೆ. ಸದ್ಯಕ್ಕೆ ಇಲ್ಲಿ ಯಾವುದೇ ರೀತಿಯ ಕೋಳಿ ಜ್ವರದ ಪ್ರಕರಣಗಳಿಲ್ಲ. ಅದಕ್ಕಾಗಿ ರ್ಯಾಪಿಡ್ ರಿಯಾಕ್ಷನ್ ಟೀಮ್ ಕೂಡ ಮಾಡಲಾಗಿದ್ದು, ಒಂದು ವೇಳೆ ಕಂಡುಬಂದರೆ ಒಂದು ಕಿ.ಮೀ. ವ್ಯಾಪ್ತಿಯ ಕೋಳಿಗಳನ್ನು ಸಾಮೂಹಿಕವಾಗಿ ಹೂಳಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
Advertisement
ಮರಳಿನ “ಮಾಮೂಲಿ’ ಸಮಸ್ಯೆ: ಆರೋಪತಾ|ನ ನದಿಗಳಲ್ಲಿ ಹೇರಳವಾಗಿ ಮರಳು ಸಿಗುತ್ತಿದ್ದು, ಆದರೆ ಬ್ಲಾಕ್‌ಗಳನ್ನು ಮಾಡಿ ಕಾನೂನುಬದ್ಧ ಮರಳುಗಾರಿಕೆಗೆ ಅವಕಾಶ ನೀಡದೇ ಇರುವುದರಿಂದ ಬಡವರಿಗೆ ಮನೆ ಕಟ್ಟುವುದಕ್ಕೂ ತೊಂದರೆಯಾಗುತ್ತಿದೆ. ಗಣಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಮೂಲಿ ನೀಡಿದರೆ ಮರಳು ಸಾಗಾಟಕ್ಕೆ ಅವಕಾಶವಿದೆ ಎಂದು ಸದಸ್ಯ ಪ್ರಭಾಕರ ಪ್ರಭು ಆರೋಪ ಮಾಡಿದರು. ಮರಳಿನ ಬ್ಲಾಕ್‌ಗಳ ಕುರಿತಂತೆ ಪ್ರತಿ ಕ್ರಿಯಿಸಿದ ತಹಶೀಲ್ದಾರ್ ರಶ್ಮಿ ಎಸ್.ಆರ್., ತಾ|ನಲ್ಲಿ ಮರಳಿನ ಬ್ಲಾಕ್‌ಗಳನ್ನು ಗುರುತಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗಿದೆ. ಆದರೆ ಅನುಮತಿಯನ್ನು ಗಣಿ ಇಲಾಖೆ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಈ ಕುರಿತು ಗಣಿ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಬರೆಯಲು ಸಭೆ ನಿರ್ಣಯಿಸಿತು.