Advertisement

ಚೀನದಲ್ಲಿ ಕರೆನ್ಸಿಗೂ ಕೊರೊನಾ ಸೋಂಕು

07:55 PM Mar 20, 2020 | Team Udayavani |

ವೈರಸ್‌ ಸೋಂಕು ಪ್ರಸರಣ ತಡೆಗೆ ಚೀನ ಹೊಸ ನಿಯಮ
ನಗದಿಗೆ ನಿರ್ಬಂಧ, ಆನ್‌ಲೈನ್‌ ವ್ಯವಸ್ಥೆ ಬಳಕೆಗೆ ಸೂಚನೆ

Advertisement

ಬೀಜಿಂಗ್‌: ಚೀನವನ್ನು ಕಾಡುತ್ತಿರುವ ಕೊರೊನಾ ಸೋಂಕು ಅಲ್ಲಿನ ನೋಟು ಚಲಾವಣೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ.

ಸೋಂಕು ಪೀಡಿತರು ಬಳಸಿದ ನೋಟುಗಳಿಂದ ಬೇರೆಯವರಿಗೂ ಹರಡಬಹುದು ಎಂಬ ಕಾರಣಕ್ಕಾಗಿ ನಗದು ವ್ಯವಹಾರವನ್ನೇ ನಿರ್ಬಂಧಿಸಲಾಗಿದೆ. ಸದ್ಯ ಚೀನದೆಲ್ಲೆಡೆ ಕೊರೊನಾ ಸೋಂಕು ಹರಡಿದೆ. ಹುಬೈ ಪ್ರಾಂತ್ಯದಲ್ಲಂತೂ ಸೋಂಕು ಪೀಡಿತರ ಸಂಖ್ಯೆ ಬಹಳಷ್ಟಿದೆ. ರೋಗ ನಿಯಂತ್ರಣಕ್ಕಾಗಿ ಈಗಾಗಲೇ ಜನರ ಓಡಾಟ ನಿರ್ಬಂಧಿಸಿರುವ ಚೀನ ಸರಕಾರವು ಯಾವುದೇ ರೀತಿಯಲ್ಲೂ ಸೋಂಕು ಇನ್ನೊಬ್ಬರಿಗೆ ಹರಡಬಾರದು ಎಂದು ಮುನ್ನೆಚ್ಚರಿಕೆ ವಹಿಸಿದೆ.

ನೋಟುಗಳ ಮೇಲೆ ಕಣ್ಣು
ಕೊರೊನಾ ವೈರಸ್‌ ಸೋಂಕು ಹರಡದಿರಲು ಕಟ್ಟುನಿಟ್ಟಿನ ನೈರ್ಮಲ್ಯ ಮುಖ್ಯ ಎಂದು ವೈದ್ಯರು ಹೇಳುತ್ತಲೇ ಇದ್ದಾರೆ. ಆದರೆ ಸೋಂಕು ಪೀಡಿತರು ಬಳಸಿದ ನೋಟುಗಳನ್ನು ಮುಟ್ಟುವ ಇತರರಿಗೂ ಸೋಂಕು ಹರಡಬಹುದು ಎಂಬ ಭೀತಿಯಿಂದ ಚೀನ ಸರಕಾರ ನೋಟುಗಳ ನಿರ್ಬಂಧಕ್ಕೆ ಕೈಹಾಕಿದೆ. ಸದ್ಯ ನಗದನ್ನು ಗೋದಾಮುಗಳಲ್ಲಿ, ಸರಕಾರಿ ಸಂಸ್ಥೆಗಳಲ್ಲಿ ತಾತ್ಕಾಲಿಕವಾಗಿ ಶೇಖರಿಸಿಡಲಾಗುತ್ತಿದೆ.

ಶುದ್ಧೀಕರಿಸಿ ಕೊಡಿ
ನೋಟುಗಳನ್ನು ಶುದ್ಧೀಕರಿ ಸಿಯೇ ಚಲಾವಣೆಗೆ ನೀಡ ಬೇಕು ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳು, ಮಾರುಕಟ್ಟೆಗಳಲ್ಲಿ ಸಂಗ್ರಹವಾಗಿ ರುವ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ನಿರ್ಮಲಗೊಳಿಸಿ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡ ಲಾಗುತ್ತದೆ ಎಂದು “ಸೌತ್‌ ಚೀನ ಮಾರ್ನಿಂಗ್‌ ಪೋಸ್ಟ್‌’ ಪತ್ರಿಕೆ ವರದಿ ಮಾಡಿದೆ.

Advertisement

ಆನ್‌ಲೈನ್‌ ಬಳಸಿ
ನಗದು ಚಲಾವಣೆಯ ಮೂಲಕ ರೋಗ ಹರಡುವುದನ್ನು ತಡೆಗಟ್ಟಲು ಹೆಚ್ಚಿನ ಗಮನ ಹರಿಸಿರುವ ಕೇಂದ್ರ ಬ್ಯಾಂಕ್‌, ಜನರಿಗೆ ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆಗಳು, ಇ-ಶಾಪಿಂಗ್‌ ಮತ್ತು ಆನ್‌ಲೈನ್‌ ಪಾವತಿ ಬಳಸುವಂತೆ ಪ್ರೋತ್ಸಾಹಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next