Advertisement

ಪ್ಲಾಸ್ಮಾವನ್ನು ದಾನ ಮಾಡಿದ ಕೋವಿಡ್-19 ಸೋಂಕಿತ

11:03 AM Apr 07, 2020 | mahesh |

ಕ್ಯಾಲಿಫೋರ್ನಿಯಾ: ಕ್ಯಾಲಿ ಫೋರ್ನಿಯಾದ ಕೋವಿಡ್-19 ಪೀಡಿತರೊಬ್ಬರು‌ ಗುಣಮುಖರಾಗಿದ್ದು, ಮತ್ತೂಬ್ಬರ ಜೀವ ಉಳಿಸಲು ಮುಂದಾ ಗಿದ್ದಾರೆ. ಇತರ ರಿಗೆ ಸಹಾಯ ಮಾಡಲು ತನ್ನ ಪ್ಲಾಸ್ಮಾವನ್ನು ದಾನ ಮಾಡಿದ್ದಾರೆ.

Advertisement

ಎಸ್ಕಾಂಡಿಡೊ ಮೂಲದ 36 ವರ್ಷದ ಜೇಸನ್‌ ಗಾರ್ಸಿಯಾ ಎಂಬವರಿಗೆ ಮಾರ್ಚ್‌ 6 ರಂದು ಕೆಮ್ಮು ಕಾಣಿಸಿಕೊಂಡಿತ್ತು. ವೃತ್ತಿಯಲ್ಲಿ ಏರೋಸ್ಪೇಸ್‌ ಎಂಜಿನಿಯರ್‌ಅಗಿ ರುವ ಇವರು ಗಂಭಿರವಾಗಿ ಅದನ್ನು ಪರಿಗಣಿಸಿರಲಿಲ್ಲ. ಬಳಿಕ ಕೆಮ್ಮಿ ನೊಂದಿಗೆ ತಲೆನೋವು ಪ್ರಾರಂಭವಾಯಿತು. ಜ್ವರ ಮತ್ತು ದೇಹದ ನೋವು ಶುರು ವಾಯಿತು. ಅಗಾರ್ಸಿಯಾದ ವೈದ್ಯರನ್ನು ಸಂಪರ್ಕಿಸಿ ದಾಗ ಪರೀಕ್ಷೆಗೆ ಒಳಗಾಗುವಂತೆ ತಿಳಿಸ ಲಾಯಿತು. ಆಗ ಕೊರೊನಾ ಲಕ್ಷಣ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಿ, ಮನೆ ಯಲ್ಲೇ ಚಿಕಿತ್ಸೆ ಕೊಡಲಾಯಿತು. ಈಗ ಸಹಜ ಜೀವನಕ್ಕೆ ಮರಳಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿತ್ತಾದರೂ ತೀವ್ರಗೊಳ್ಳಲು ಅವರೊಳಗಿನ ರೋಗ ನಿರೋಧಕ ಶಕ್ತಿ ಬಿಡಲಿಲ್ಲ. ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಪೋಸ್ಟ್‌ಗಳನ್ನು ನೋಡಿದ ಸ್ನೇಹಿತ ವೈದ್ಯರೊಬ್ಬರು ಆಸ್ಪತ್ರೆಗೆ ಕರೆದೊಯ್ದು, ಕೊರೊನಾ ವೈರಸ್‌ ರೋಗಿಗೆ ಪ್ಲಾಸ್ಮಾ ದಾನ ಮಾಡುವಂತೆ ಕೋರಿದರು. ಅದಕ್ಕೆ ಒಪ್ಪಿದ ಗಾರ್ಸಿಯಾ, ಮೂರು ರೋಗಿಗಳಿಗೆ ಪ್ಲಾಸ್ಮಾ ವರ್ಗಾವಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next